ಸೋಮವಾರಪೇಟೆ,ಜೂ.೯: ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತಿಯಿಂದಲೇ ಧಾರುಣವಾಗಿ ಅಂತ್ಯಕAಡ ಬಾಲೆ ಮೀನಾಳ ಕುಟುಂಬಕ್ಕೆ ಅಂದು ನೀಡಿದ್ದ ಭರವಸೆಯಂತೆ ಶಾಸಕ ಡಾ. ಮಂತರ್ ಗೌಡ ಅವರು ನೂತನ ಮನೆ ನಿರ್ಮಿಸಿ ಕೊಟ್ಟಿದ್ದು, ಮುಟ್ಲು ಗ್ರಾಮದಲ್ಲಿ ಮಾನವೀಯತೆಯ ಕಾರ್ಯಕ್ರಮಕ್ಕೆ ಇಂದು ಹಲವರು ಸಾಕ್ಷಿಯಾದರು.

ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಡಿಕೇರಿ ತಾಲೂಕು, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು ಗ್ರಾಮದ ಉದಿಯಂಡ ಸುಬ್ರಮಣಿ ಹಾಗೂ ಜಾನಕಿ ದಂಪತಿಯ ಪುತ್ರಿ ಮೀನಾ (೧೬), ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯ ನಡುವೆಯೇ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ(೩೨) ಎಂಬಾತನೊAದಿಗೆ ನಿಶ್ಚಿತಾರ್ಥವನ್ನೂ ಮಾಡಿ ಕೊಂಡಿದ್ದಳು.

ನಿಶ್ಚಿತಾರ್ಥದ ಸಂಭ್ರಮದ ನಡುವೆಯೇ ಹುಚ್ಚುಪ್ರೇಮಿ ಪ್ರಕಾಶ್‌ನಿಂದ ಮಚ್ಚಿನೇಟಿಗೆ ರುಂಡ-ಮುAಡ ಬೇರ್ಪಟ್ಟು ಇಹಲೋಕ ತ್ಯಜಿಸಿದ್ದಳು. ಈ ಘಟನೆಯು ಇಡೀ ಜಿಲ್ಲೆ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿ ದಿಗ್ಭçಮೆಗೆ ಕಾರಣವಾಗಿತ್ತು.

(ಮೊದಲ ಪುಟದಿಂದ) ಸುದ್ದಿ ತಿಳಿದು ಮುಟ್ಲು ಗ್ರಾಮದ ಕಾಡುಮೇಡುಗಳ ನಡುವೆ ಇರುವ ಮನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಮೀನಾಳ ದುರಂತ ಅಂತ್ಯಕ್ಕೆ ಮರುಗಿದರಲ್ಲದೇ ಕುಟುಂಬಕ್ಕೆ ಸಾಂತ್ವಾನ ನೀಡಿದ್ದರು. ಈ ಸಂದರ್ಭ ಭೇಟಿ ನೀಡಿದ್ದ ಶಾಸಕ ಡಾ. ಮಂತರ್ ಗೌಡ ಅವರು, ಮೀನಾಳ ಮನೆಯ ದಯನೀಯ ಪರಿಸ್ಥಿತಿ ಕಂಡು ತೀರಾ ನೊಂದುಕೊAಡಿದ್ದರು.

ಜೋಪಡಿಯAತಿದ್ದ ಮನೆಯೊಳಗೆ ಮೀನಾಳು ೧೦ನೇ ತರಗತಿವರೆಗೆ ವ್ಯಾಸಂಗ ಮಾಡಿ, ಸೂರ್ಲಬ್ಬಿ ಶಾಲೆಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಳು. ಈ ಶಾಲೆಯ ಹತ್ತನೇ ತರಗತಿಯಲ್ಲಿದ್ದ ಓರ್ವಳೇ ವಿದ್ಯಾರ್ಥಿಯೂ ಆಗಿದ್ದರಿಂದ ಶಾಲೆಗೆ ಶೇ. ೧೦೦ ಫಲಿತಾಂಶ ಬಂದಿತ್ತು. ಗೋಡೆಗಳಿಲ್ಲದ ಜೋಪಡಿಯ ಮನೆ, ಟಾರ್ಪಲ್ ಹೊದಿಕೆಯೊಳಗೆ ಕುಟುಂಬ ಜೀವಿಸುತ್ತಿದ್ದುದನ್ನು ಕಣ್ಣಾರೆ ಕಂಡ ಮಂತರ್ ಗೌಡ ಅವರು, ಸಂತ್ರಸ್ಥ ಕುಟುಂಬಕ್ಕೆ ಸರ್ಕಾರದ ಹೊರತಾಗಿಯೂ ಸಹಾಯ ಹಸ್ತ ಚಾಚುವ ಬಗ್ಗೆ ತನ್ನ ಹಿತೈಷಿಗಳೊಂದಿಗೆ ಚರ್ಚೆ ನಡೆಸಿದರು.

ಇದರೊಂದಿಗೆ ಏಳುನಾಡು ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜದ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಅಂತಿಮವಾಗಿ ಸಂತ್ರಸ್ಥರ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಡುವ ಬಗ್ಗೆ ನಿರ್ಧಾರ ಮಾಡಿ, ಜೋಪಡಿಯಿಂದ ಸುಸಜ್ಜಿತ ಮನೆಗೆ ಕುಟುಂಬವನ್ನು ಸ್ಥಳಾಂತರಿಸಲು ಕಾರ್ಯಯೋಜನೆ ರೂಪಿಸಿದರು.

ರೂ. ೮.೫೦ ಲಕ್ಷ ವೆಚ್ಚದ ಮನೆ ಹಸ್ತಾಂತರ: ಸಾಂತ್ವಾನ, ಭರವಸೆಗಷ್ಟೇ ಸೀಮಿತವಾಗದ ಶಾಸಕ ಮಂತರ್ ಅವರು, ತಮ್ಮ ಸ್ನೇಹಿತರ ಸಹಾಯವನ್ನು ಪಡೆದು ರೂ. ೮.೫೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ಮೀನಾಳ ಕುಟುಂಬಕ್ಕೆ ನಿರ್ಮಿಸಿಕೊಟ್ಟಿದ್ದು, ಇಂದು ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದರು.

ಉದಿಯAಡ ಸುಬ್ರಮಣಿ ಹಾಗೂ ಜಾನಕಿ ದಂಪತಿ ಗುರುತಿಸಿದ ಜಾಗದಲ್ಲಿಯೇ ನೂತನ ಮನೆಯನ್ನು ನಿರ್ಮಾಣ ಮಾಡಿದ್ದು, ಗೃಹಪ್ರವೇಶ ಕಾರ್ಯಕ್ರಮವು ಒಂದು ರೀತಿಯಲ್ಲಿ ಮಾನವೀಯತೆಯ ಸಾಕಾರದ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ಸಿಮೆಂಟ್ ಇಟ್ಟಿಗೆ, ಕಬ್ಬಿಣದ ರೂಫಿಂಗ್‌ನೊAದಿಗೆ ಹೆಂಚಿನ ಸುಂದರ ಮನೆ ನಿರ್ಮಿಸಿದ್ದು, ಸ್ಥಳೀಯ ಪ್ರಮುಖರೊಂದಿಗೆ ಸುಬ್ರಮಣಿ ಅವರ ಕುಟುಂಬಕ್ಕೆ ಮನೆಯನ್ನು ಹಸ್ತಾಂತರಿಸಿದರು. ಮೀನಾಳ ತಂದೆ ಸುಬ್ರಮಣಿ, ತಾಯಿ ಜಾನಕಿ, ಸಹೋದರರಾದ ಸಚಿನ್, ದಿಲೀಪ್, ಸಹೋದರಿಯರಾದ ಸವಿತ, ಪುಷ್ಪಾ, ಡೀನಾ ಅವರುಗಳು ಶಾಸಕರ ಸಹಾಯವನ್ನು ತುಂಬು ಮನಸ್ಸಿನಿಂದ ಸ್ಮರಿಸಿದರು.

ರಾಜಕೀಯ ಮೀರಿದ ಸಮಾಜ ಸೇವೆಯಿಂದ ತೃಪ್ತಿ: ಮೀನಾಳ ಕುಟುಂಬಕ್ಕೆ ನೂತನ ಮನೆಯ ಕೀಲಿ ಕೈ ಹಸ್ತಾಂತರಿಸಿದ ನಂತರ ಮಾತನಾಡಿದ ಶಾಸಕ ಮಂತರ್ ಗೌಡ ಅವರು, ರಾಜಕೀಯ ಮೀರಿದ ಸಮಾಜ ಸೇವೆಯಿಂದ ತೃಪ್ತಿ ಹೆಚ್ಚು ಎಂದು ಅಭಿಪ್ರಾಯಿಸಿದರು. ಸೇವೆಯಲ್ಲಿ ರಾಜಕೀಯ ನೋಡಬಾರದು. ನೊಂದಿರುವ ಕುಟುಂಬಕ್ಕೆ ಸಾಂತ್ವಾನಗಳು ಬೇಕಿದ್ದರೂ, ಅವರ ಮುಂದಿನ ಜೀವನದ ಬಗ್ಗೆಯೂ ಯೋಚಿಸಬೇಕು. ಈ ನಿಟ್ಟಿನಲ್ಲಿ ಸ್ನೇಹಿತರೊಂದಿಗೆ ಚರ್ಚಿಸಿ, ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡುವ ಬಗ್ಗೆ ನಿರ್ಧಾರ ಕೈಗೊಂಡೆವು ಎಂದರು.

ಸAತ್ರಸ್ತ ಕುಟುಂಬದೊAದಿಗೆ ನಾವೂ ಇದ್ದೇವೆ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಎಲ್ಲದರಲ್ಲೂ ಜಾತಿ, ರಾಜಕೀಯ ನೋಡಬಾರದು ಎಂಬುದನ್ನು ತಾನೂ ಸೇರಿದಂತೆ ಎಲ್ಲಾ ರಾಜಕಾರಣಿಗಳು ಅರಿಯಬೇಕು. ರಾಜಕಾರಣಿಗಳು ಹಲವು ಕಾರ್ಯಗಳಿಗೆ ಸಾಕಷ್ಟು ಹಣ ವ್ಯಯಿಸುತ್ತಾರೆ. ಇಂತಹ ಕುಟುಂಬಗಳಿಗೆ ನೆರವು ಒದಗಿಸಿದರೆ ಹಲವಷ್ಟು ಕುಟುಂಬಗಳು ಸಂಕಷ್ಟದಿAದ ಹೊರಬರುತ್ತವೆ ಎಂದು ಅಭಿಪ್ರಾಯಿಸಿದರು.

ಸರ್ಕಾರದಿಂದ ಮನೆ ನಿರ್ಮಿಸುವ ಯೋಜನೆಗೆ ಹಲವಷ್ಟು ದಾಖಲಾತಿಗಳ ಅವಶ್ಯಕತೆಯಿದೆ. ಇದರೊಂದಿಗೆ ನಿರೀಕ್ಷಿತ ಸಮಯದಲ್ಲಿ ಸಿಗುವುದೂ ಕಷ್ಟಸಾಧ್ಯ. ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ. ಈ ಹಿನ್ನೆಲೆ ವೈಯುಕ್ತಿಕವಾಗಿ ನೆರವು ಒದಗಿಸಿ ಮನೆ ನಿರ್ಮಿಸಲಾಗಿದೆ. ಹಳೆಯ ಕಹಿ ಘಟನೆಗಳನ್ನು ಮರೆತು ಮುಂದೆ ಉತ್ತಮ ಚಿಂತನೆಗಳೊAದಿಗೆ ಜೀವನ ಸಾಗಿಸುವಂತಾಗಿದೆ ಎಂದು ಹಾರೈಸಿದರು.

ವಿಧಾನ ಪರಿಷತ್ ಮಾಜೀ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಸಮಾಜದ ಪ್ರಮುಖರಾದ ದೇವಯ್ಯ ಅವರುಗಳು ಮಾತನಾಡಿ, ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬಕ್ಕೆ ಮಂತರ್ ಗೌಡ ಅವರು ಮನೆ ನಿರ್ಮಾಣ ಮಾಡಿಕೊಟ್ಟಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯಿಸಿದರು.

ಏಳುನಾಡು ಕೊಡವ ಸಮಾಜದ ಅಧ್ಯಕ್ಷ ಸೋಮಯ್ಯ, ಖಜಾಂಚಿ ಕನ್ನಿಕಂಡ ದೇವಯ್ಯ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕಾರ್ಯದರ್ಶಿ ಕೆ.ಜೆ. ಸುನಿಲ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ರಾಜೀವ್ ಗಾಂಧಿ ಸಂಘಟನೆಯ ತೆನ್ನೀರ ಮೈನಾ, ಕೆಡಿಪಿ ಸದಸ್ಯ ಹೆಚ್.ಆರ್. ಸುರೇಶ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸುಜು ತಿಮ್ಮಯ್ಯ, ವಲಯ ಅಧ್ಯಕ್ಷ ಓಂಕಾರಪ್ಪ, ಮಾದಾಪುರ ವಲಯಾಧ್ಯಕ್ಷ ಹರೀಶ್, ಪ್ರಮುಖರಾದ ಜಯಂತಿ, ಲಾರೆನ್ಸ್, ಡಿ.ಯು. ಕಿರಣ್, ಚೇತನ್, ಜನಾರ್ದನ್, ಔರಂಗಜೇಬ್, ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ರಫೀಕ್, ಹರೀಶ್, ಕವನ್, ವಿನೋದ್, ನಾಣಿಯಪ್ಪ ಸೇರಿದಂತೆ, ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು. - ವಿಜಯ್