ಶ್ರೀಮಂಗಲ, ಜೂ. ೯: ಪೊನ್ನಂಪೇಟೆ ತಾಲೂಕು ಬೆಳ್ಳೂರು ಗ್ರಾಮದಲ್ಲಿರುವ ಮಲ್ಲಂಗಡ ಕುಟುಂಬಸ್ಥರ ಐನ್‌ಮನೆಗೆ, ಶನಿವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆವರನ್ನು ಆಮಂತ್ರಿಸಿದ, ಮಲ್ಲಂಗಡ ಕುಟುಂಬಸ್ಥರು ಸ್ವಗ್ರಾಮದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಪೊನ್ನಣ್ಣ ಐನ್ ಮನೆ ಸಂಸ್ಕೃತಿಯು ಕೊಡಗಿನ ಪ್ರಮುಖ ಆಕರ್ಷಣೆ ಹಾಗೂ ಸಂಪ್ರದಾಯವಾಗಿದ್ದು, ಕ್ಷೇತ್ರದಾದ್ಯಂತ ಐನ್‌ಮನೆಗಳ ಅಭಿವೃದ್ಧಿಗೆ ಮುತುವರ್ಜಿ ವಹಿಸು ತ್ತಿರುವುದಾಗಿ ನುಡಿದರು. ಐನ್‌ಮನೆ ಹಿರಿಯರು ಹಾಗೂ ಪ್ರಮುಖ ರೊಂದಿಗೆ ಮಾತನಾಡಿದ ಶಾಸಕರು ಮಲ್ಲಂಗಡ ಐನ್ ಮನೆಯ ಇತಿಹಾಸದ ಬಗ್ಗೆ ತಿಳಿದುಕೊಂಡರು. ಐನ್‌ಮನೆ ಅಭಿವೃದ್ಧಿಗೆ ತನ್ನ ಕೈಲಾದಷ್ಟು ಅನುದಾನ ಒದಗಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಮಲ್ಲಂಗಡ ನಿರನ್ ಉತ್ತಪ್ಪ, ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.