ಮಡಿಕೇರಿ, ಜೂ. ೯: ಸಾಹಿತಿ ಭಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿಯನ್ನು ಆಂಗ್ಲಭಾಷೆಗೆ ಅನುವಾದ ಮಾಡಿ ಅದಕ್ಕೆ ಬೂಕರ್ ಪ್ರಶಸ್ತಿ ಬರಲು ಕಾರಣರಾದ ದೀಪಾ ಭಾಸ್ತಿ ಅವರಿಂದ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ದಾಖಲು ಮಾಡಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಪದ್ಮಾ ಶೇಖರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ರೆಡ್‌ಬ್ರಿಕ್ಸ್ ಇನ್ ಸತ್ಕಾರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿ ಅವರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಅಭಿವ್ಯಕ್ತಿ ಮತ್ತು ಆಲೋಚನೆಗೆ ಸಂದ ಪ್ರಶಸ್ತಿ ಇದಾಗಿದ್ದು, ಇಬ್ಬರು ಸ್ತಿçÃಯರಿಗೆ ಈ ಗೌರವ ಲಭಿಸಿರುವುದು ಸ್ತಿçÃವರ್ಗಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಪ್ರಶಸ್ತಿಯು ಕೊಡಗಿನ ಚರಿತ್ರೆಗೆ ಮತ್ತೊಂದು ಮೆರುಗನ್ನು ತಂದಿದೆ ಎಂದು ಪದ್ಮಾ ಶೇಖರ್ ಹೇಳಿದರು. ಎದೆಯ ಹಣತೆ ಕೃತಿಯಲ್ಲಿ ಮುಸ್ಲಿಂ ವರ್ಗದ ಮಹಿಳೆಯರು ಮಾತ್ರವಲ್ಲದೆ ಎಲ್ಲಾ ವರ್ಗದ ಮಹಿಳೆಯರ ಬದುಕಿನ ದಾರುಣ್ಯತೆ ಬಗ್ಗೆ ಬೆಳಕು ಚೆಲ್ಲಲಾಗಿದೆ. ಆ ಮೂಲಕ ಸ್ತಿçà ವರ್ಗವನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗಿದೆ. ಒಂದು ವೇಳೆ ಈ ಕನ್ನಡ ಕೃತಿಯನ್ನು ದೀಪಾ ಭಾಸ್ತಿ ಇಂಗ್ಲೀಷ್ ಭಾಷೆಗೆ ಅನುವಾದ ಮಾಡದೇ ಇದ್ದಿದ್ದರೆ ಇದಕ್ಕೆ ಬೂಕರ್ ಪ್ರಶಸ್ತಿ ಬರಲು
(ಮೊದಲ ಪುಟದಿಂದ) ಸಾಧ್ಯವಾಗುತ್ತಿರಲಿಲ್ಲ ಎಂದ ಅವರು, ಅನುವಾದ ಕ್ಷೇತ್ರಕ್ಕೆ ಹಾಗೂ ಅನುವಾದಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ದೀಪಾ ಭಾಸ್ತಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
‘ಸುಲಭದ ಕೆಲಸವಲ್ಲ’
ಯಾವುದೇ ಕೃತಿಯನ್ನು ಅನುವಾದ ಮಾಡುವುದು ಸುಲಭದ ಕೆಲಸವಲ್ಲ. ಅನುವಾದಕರಿಗೆ ಎರಡೂ ಭಾಷೆಗಳ ಹುಟ್ಟರಿವು ಇರ ಬೇಕಾಗುತ್ತದೆ. ಕನ್ನಡದ ಅದೆಷ್ಟೋ ಶ್ರೇಷ್ಠ ಕೃತಿಗಳು ಇಂದು ಭಾಷಾಂತರದ ಕೊರತೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಳ್ಳಲು ವಿಫಲವಾಗಿದೆ ಎಂದು ವಿಷಾದಿಸಿದ ಪದ್ಮಾಶೇಖರ್, ದೀಪಾ ಭಾಸ್ತಿ ಅನುವಾದ ಕ್ಷೇತ್ರದಲ್ಲಿ ಮಿನುಗುತಾರೆಯಾಗಿ ನಾಳಿನ ಭರವಸೆ ಆಗಿದ್ದಾರೆ ಎಂದು ಹೇಳಿದರು.
‘ಅನುವಾದಕರಿಗೆ ಗೌರವ ಸಿಗಬೇಕು’
ದೀಪಾ ಭಾಸ್ತಿ ಅವರಿಗೆ ಗೌರವ ಸಮರ್ಪಣೆ ಮಾಡಿದ ಹಾಸನದ ಕವಿ ಹಾಗೂ ಅನುವಾದಕಿ ಜ.ನಾ. ತೇಜಶ್ರೀ ಮಾತನಾಡಿ, ಅನುವಾದಕ್ಕೆ ಹಾಗೂ ಅನುವಾದಕರಿಗೆ ಕನ್ನಡದಲ್ಲಿ ಸೂಕ್ತ ಗೌರವ, ಗೌರವಧನ ಸಿಗುತ್ತಿಲ್ಲ ಎಂದು ವಿಷಾದಿಸಿದರು. ಅನುವಾದ ಎಂಬುದು ಇಲ್ಲದಿದ್ದರೆ ಸಾಹಿತ್ಯ ಲೋಕ ಕುಬ್ಜವಾಗಿಬಿಡುತ್ತದೆ ಎಂದು ಎಚ್ಚರಿಸಿದ ಅವರು, ಬೇರೆ ಭಾಷೆಗಳ ಕೃತಿಗಳು ಕನ್ನಡಕ್ಕೆ ಹೆಚ್ಚಾಗಿ ಅನುವಾದಗೊಂಡಿವೆಯಾದರೂ ಕನ್ನಡದ ಕೃತಿಗಳು ಬೇರೆ ಭಾಷೆಗೆ ಅನುವಾದಗೊಂಡಿರುವುದು ವಿರಳ ಎಂದು ತಿಳಿಸಿದರು. ದೀಪಾ ಭಾಸ್ತಿ ಅವರ ಅನುವಾದ ಕ್ರಿಯಾಶೀಲತೆ ಯಿಂದ ಕೂಡಿದ್ದು, ಇಂಗ್ಲೀಷ್‌ನಲ್ಲೂ ಕನ್ನಡ ಭಾಷೆಯ ರುಚಿಯನ್ನು ಬೆರೆಸಿದ್ದಾರೆ. ಅವರ ಯೋಚನಾ ಲಹರಿಗೆ ತಂದ ಗೌರವವೇ ಬೂಕರ್ ಪ್ರಶಸ್ತಿ ಎಂದು ತೇಜಶ್ರೀ ನುಡಿದರು. ಹೆಣ್ಣಿಗೆ ಕುಟುಂಬದ ಬೆಂಬಲ ಸಿಗದಿದ್ದರೆ ಬೆಳೆಯಲು ಸಾಧ್ಯವಿಲ್ಲ; ದೀಪಾ ಭಾಸ್ತಿ ಅವರಿಗೆ ಅವರ ಕುಟುಂಬ ನೀಡಿದ ಬೆಂಬಲವೇ ಈ ಸಾಧನೆಗೆ ಕಾರಣವಾಗಿದೆ ಎಂದು ತೇಜಶ್ರೀ ಹೇಳಿದರು.
‘ಬುದ್ದಿ ಮಾತ್ರ ಸಾಲದು’
ಯಾವುದೇ ಕೃತಿಗಳನ್ನು ಅನುವಾದ ಮಾಡಬೇಕಾದರೆ ಕೇವಲ ಬುದ್ದಿಯಿಂದ ಮಾತ್ರ ಸಾಧ್ಯವಿಲ್ಲ; ಬುದ್ದಿಯ ಜೊತೆಗೆ ಹೃದಯದ ಭಾವನೆಯೂ ಅಗತ್ಯ ಎಂದು ತಿಳಿಸಿದ ತೇಜಶ್ರೀ ಭಾಷೆ ಒಳಗಿನ ವಿವೇಕ ಹಾಗೂ ಸಾಮುದಾಯಿಕ ಪ್ರಜ್ಞೆಯನ್ನು ಮುಟ್ಟುವ ಪ್ರತಿಭೆ ಬರಹಗಾರರಲ್ಲಿ ಇರಬೇಕು ಎಂದು ಸಲಹೆಯಿತ್ತರು.
‘ದೇಶಕ್ಕೆ ಹೆಮ್ಮೆ’
ಮುಖ್ಯ ಅತಿಥಿಯಾಗಿದ್ದ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಭಾಷೆ ಜಾಗತಿಕ ಮಟ್ಟದಲ್ಲಿ ತಲೆ ಎತ್ತುವಂತಾಗಲು ಅನುವಾದ ಬಹಳ ಮುಖ್ಯ. ಆ ಕೆಲಸ ಮಾಡಿರುವ ದೀಪಾ ಭಾಸ್ತಿ ಅವರ ಸಾಧನೆ ಜಿಲ್ಲೆ ಹಾಗೂ ಕನ್ನಡ ನಾಡು ಮಾತ್ರವಲ್ಲದೆ ದೇಶವೇ ಹೆಮ್ಮೆಪಡುವಂತಹ ವಿಚಾರ ಎಂದು ಹೇಳಿದರು.
‘ರಾಜ್ಯ - ರಾಷ್ಟçಮಟ್ಟದ ಪ್ರಶಸ್ತಿಗಳು ಸಿಗಲಿ’
ಮತ್ತೋರ್ವ ಅತಿಥಿ ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್ ಅವರು ಮಾತನಾಡಿ, ದೀಪಾ ಭಾಸ್ತಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಯತ್ನಿಸಬೇಕೆಂದು ಹೇಳಿದರು. ಅಲ್ಲದೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಕೂಡ ದೀಪಾ ಭಾಸ್ತಿಯವರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ವರೂ ಪ್ರಯತ್ನಿಸಬೇಕು. ಜಿಲ್ಲಾಡಳಿತ ಹಾಗೂ ನಾಗರಿಕರ ಪರವಾಗಿ ಕನ್ನಡ ರಾಜ್ಯೋತ್ಸವ ಸಂದರ್ಭ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸುವತ್ತ ಕಸಾಪ ಕಾರ್ಯ ಪ್ರವೃತ್ತವಾಗಬೇಕೆಂದು ಹೇಳಿದರಲ್ಲದೆ ಜೇನಿನ ಹೊಳೆಯೋ ಹಾಲಿನ ಮಳೆಯೋ... ಹಾಡಿನ ಮೂಲಕ ರಂಜಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಅನುವಾದ ಎಂಬುದು ಸುಲಭದ ಕೆಲಸವಲ್ಲ; ಇದಕ್ಕೆ ಎರಡೂ ಭಾಷೆಗಳ ಮೇಲೆ ಹಿಡಿತವಿರಬೇಕಾಗುತ್ತದೆ ಎಂದರು. ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿ ಬಂದಿದೆಯಾದರೂ ಕನ್ನಡದ ಮಹತ್ವದ ಕೃತಿಗಳು ಅನುವಾದವಾಗಿಲ್ಲ. ಇದೀಗ ದೀಪಾ ಭಾಸ್ತಿ ಅವರ ಮೂಲಕ ಕನ್ನಡಕ್ಕೆ ಅಂತರರಾಷ್ಟಿçÃಯ ಮಟ್ಟದಲ್ಲಿ ಮನ್ನಣೆ ಸಿಗಲಾರಂಭಿಸಿದೆ ಎಂದು ನುಡಿದರು. ಇದೇ ಸಂದರ್ಭ ಪ್ರೊ. ಪದ್ಮಾ ಶೇಖರ್ ಹಾಗೂ ಜ.ನಾ. ತೇಜಶ್ರೀ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಎಂಪಿ. ಕೇಶವ ಕಾಮತ್ ಅವರು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಇದೇ ಸಂದರ್ಭ ದೀಪಾ ಭಾಸ್ತಿ ಅವರಿಗೆ ನೀಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು.
ಕಸಾಪ ತಂಡ ಹಾಗೂ ವಿದ್ಯಾರ್ಥಿಗಳ ತಂಡದಿAದ ನಾಡಗೀತೆ ಮೂಡಿಬಂತು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶೀ ಎಸ್.ಐ. ಮುನೀರ್ ಅಹಮ್ಮದ್ ಸ್ವಾಗತಿಸಿದರು. ಗೌರವ ಸಮರ್ಪಣೆಯ ಅಭಿನಂದನಾ ಪತ್ರವನ್ನು ಸಾಹಿತಿ ಸುಬ್ರಾಯ ಸಂಪಾಜೆ ವಾಚಿಸಿದರು. ಅತಿಥಿಗಳನ್ನು ಡಾ. ಕಾವೇರಿ ಪ್ರಕಾಶ್, ಕೆ.ಜಿ. ರಮ್ಯ ಸಭೆಗೆ ಪರಿಚಯಿಸಿದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.