ಶ್ರೀಮಂಗಲ, ಜೂ. ೮: ಕುಟ್ಟ ವ್ಯಾಪ್ತಿಯ ಗ್ರಾಮದಿಂದ ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆಯನ್ನು ತಾ. ೯ ಮತ್ತು ೧೦ ರಂದು ಪೂರ್ವಾಹ್ನ ೯ ಗಂಟೆಯಿAದ ಸಂಜೆ ೬ ಗಂಟೆವರೆಗೆ ಹಮ್ಮಿಕೊಳ್ಳಲಾಗುತ್ತಿದ್ದು, ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚಳ್ಳಿ, ಕುಟ್ಟ ಮತ್ತು ನಾತಂಗಲ್ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಸುಮಾರು ೧೦ ರಿಂದ ೧೭ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಆಟ್ಟಲು ನಡೆಸುತ್ತಿರುವ ಕಾರ್ಯಾಚರಣೆ ಸಮಯದಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ಶಾಲಾ- ಕಾಲೇಜು ಮಕ್ಕಳು, ಕಾರ್ಮಿಕರು ಹಾಗೂ ಬೆಳೆಗಾರರು ಎಚ್ಚರಿಕೆ ವಹಿಸಿ ಸಹಕಾರ ನೀಡುವಂತೆ ಅರಣ್ಯ ಇಲಾಖೆಯ ಶ್ರೀಮಂಗಲ ವನ್ಯಜೀವಿ ವಲಯದ ಪ್ರಕಟಣೆ ತಿಳಿಸಿದೆ.