ಮಡಿಕೇರಿ, ಜೂ. ೮ : ಪರಿಸರ ದಿನಾಚರಣೆಯ ಪರಿಕಲ್ಪನೆ ಅಗತ್ಯತೆಯ ನಡುವಿನ ಈಗಿನ ಸನ್ನಿವೇಶದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗದಿಂದ ಕ್ರಿಯಾತ್ಮಕವಾದ ಕಾರ್ಯವೊಂದನ್ನು ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯನ್ನು ಒಳಗೊಂಡAತೆ ಪುಟ್ಟಮಕ್ಕಳಿಂದ ಹಿಡಿದ ಪಿಜಿತನಕದ ಸಿಬ್ಬಂದಿಗಳಿಗೆ (ಕೆ.ಜಿ.ಯಿಂದ ಪಿಜಿತನಕ) ಗಿಡ ನೆಡುವ ಸ್ಪರ್ಧೆ ಇದಾಗಿದೆ. ಕೆಲವು ನಿಬಂಧನೆಗಳನ್ನು ಈ ಸ್ಪರ್ಧೆಯ ಮೂಲಕ ಹಮ್ಮಿಕೊಳ್ಳಲಾಗಿದ್ದು, ಬಹುಮಾನ ನೀಡುವ ಅಂಶವೂ ಈ ಚಿಂತನೆಯಲ್ಲಿ ಒಳಗೊಂಡಿರುವುದು ವಿಶೇಷ.
ಏನು... ಹೇಗೆ...?
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಬಹುದು. ಅಧ್ಯಾಪಕರು ಜೂನ್ ೫ ರಿಂದ ಜುಲೈ ೩೧ನೇ ತಾರೀಕಿನ ಒಳಗೆ ಗಿಡಗಳನ್ನು ನೆಡಬೇಕು. ನೆಟ್ಟಿರುವ ಗಿಡಗಳಿಗೆ ತಮಗೆ ಇಷ್ಟವಾದ ಹೆಸರುಗಳನ್ನು ನೀಡಬೇಕು.
ಗಿಡ ಕಡ್ಡಾಯವಾಗಿ ವೃಕ್ಷದ ಪ್ರಭೇದಕ್ಕೆ ಸೇರಿದ ಗಿಡವಾಗಿರಬೇಕು, ಹಣ್ಣು ಅಥವಾ ಬಹು ಉಪಯೋಗಿ ವೃಕ್ಷವಾಗಿರಬೇಕು. ಉದಾಹರಣೆಗೆ ಮಾವು, ಹಲಸು ಅಥವಾ ಯಾವುದೇ ಹಣ್ಣಿನ ಗಿಡಗಳು, ಈ ಸ್ಪರ್ಧೆಯ ಅವಧಿ ಎರಡು ವರ್ಷ, ಪ್ರತಿ ೬ ತಿಂಗಳಿಗೊಮ್ಮೆ ಗಿಡದ ಬೆಳವಣಿಗೆಯನ್ನು ವೀಡಿಯೋ ಮತ್ತು ಫೋಟೋದ ಮೂಲಕ ತಿಳಿಸಬೇಕು. ೨೦೨೭ರ ಜೂನ್ ೫ನೇ ತಾರೀಕು ಅತ್ಯುತ್ತಮವಾಗಿ ಅತೀ ಹೆಚ್ಚು ಗಿಡಗಳನ್ನು ಬೆಳೆಸಿದ ೧೦ ಜನರಿಗೆ ಮಹತ್ವದ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೦೦೮೫೬೭೭೪೮, ೮೦೫೦೧೬೦೪೧೪ ಸಂಪರ್ಕಿಸಬಹುದು.