ಮಡಿಕೇರಿ, ಮೇ ೨೮: ಮೊಗೇರ ಸೇವಾ ಸಮಾಜದ ಸಕ್ರಿಯ ಕಾರ್ಯಕರ್ತೆ ಹಲವಾರು ವರ್ಷಗಳಿಂದ ಸಮಾಜದ ಎಲ್ಲಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ದಿವ್ಯ ಅವರ ಮದುವೆ ಸಿದ್ದಾಪುರ ನೆಲ್ಲಿಹುದಿಕೇರಿಯ ಮುತ್ತಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಅವರ ಸೇವೆಯನ್ನು ಪರಿಗಣಿಸಿ ಮೊಗೇರ ಸೇವಾ ಸಮಾಜದ ವತಿಯಿಂದ ಮದುವೆ ಮಂಟಪದಲ್ಲೇ ವರನ ಸಮ್ಮುಖದಲ್ಲೇ ವಧುವನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮೊಗೇರ ಸಮಾಜ ಜಿಲ್ಲಾಧ್ಯಕ್ಷ ಜನಾರ್ಧನ್ ಪಿ.ಬಿ. ಗೌರವ ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ. ರವಿ, ಜಿಲ್ಲಾ ಸದಸ್ಯರಾದ ಎಂ.ಜಿ. ಚಂದ್ರ ಮಡಿಕೇರಿ, ಮಂಜು ಬರಡಿ, ಮಡಿಕೇರಿ ತಾಲೂಕು ಅಧ್ಯಕ್ಷ ರಘು ಪಿ.ಸಿ., ಸದಸ್ಯರಾದ ರಾಮು, ಗಣೇಶ್, ನಾರಾಯಣ ಸೇರಿದಂತೆ ಹಲವಾರು ಸದಸ್ಯರು ಭಾಗಿಯಾಗಿದ್ದರು.