ಮಡಿಕೇರಿ, ಮೇ ೨೮: ಪ್ರಸಕ್ತ ಸಾಲಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಕಾಲೇಜು ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ, ಇಲ್ಲಿಗೆ ಪ್ರಥಮ ಪಿಯುಸಿ ತರಗತಿಗೆ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯದವರಿಗೆ ಶೇ. ೭೫ ಹಾಗೂ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಶೇ. ೨೫ ಸೀಟು ಲಭ್ಯವಿರುತ್ತದೆ. ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವಿದ್ದು ಸೇವಾ ಸಿಂಧು ಪೋರ್ಟಲ್‌ನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಪ್ಲಿಕೇಶನ್ ಫಾರ್ ಪ್ರಥಮ ಪಿಯುಸಿ ಪ್ರವೇಶಕ್ಕೆ ಒಒಆಖPU/ಒಒಆಖS(Iಟಿಣegಡಿಚಿಣeಜ) /ಉಒಖS(Iಟಿಣegಡಿಚಿಣeಜ)/ ಆಡಿ. ಂPಎಖPU/ಒAಒS(Uಠಿgಡಿಚಿಜeಜ) ಸೇವೆಯ ವೆಬ್ ತಾಣದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. ೩೧ ರವರೆಗೆ ಅವಧಿ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು ದೂರವಾಣಿ ಸಂಖ್ಯೆ: ೭೬೭೬೪೭೩೭೬೭, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ. ಕಾಲೇಜು ಹತ್ತಿರ, ಮಡಿಕೇರಿ ಕೊಡಗು ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.