ಐಗೂರು, ಮೇ ೨೭: ನೇಪಾಳದ ಕಟ್ಮಂಡುವಿನಲ್ಲಿ ನಡೆಯಲಿರುವ ಪ್ರಥಮ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್‌ಗೆ ಐಗೂರು ಗ್ರಾಮ ಪಂಚಾಯಿತಿ ವತಿಯಿಂದ ಸಹಾಯಧನ ವಿತರಿಸಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ವಿನೋದ್, ಉಪಾಧ್ಯಕ್ಷೆ ಗೌರಮ್ಮ, ಪಿ.ಡಿ.ಓ ಪೂರ್ಣಕುಮಾರ್, ಸದಸ್ಯರಾದ ಬಾರನ ಪ್ರಮೋದ್, ರಾಜೇಶ್, ಜೋಯಪ್ಪ, ಜುನೈದ್, ಜಾನಕಿ ಮತ್ತು ಬೇಬಿ ಉಪಸ್ಥಿತರಿದ್ದರು.