ಚುನಾವಣೆ ಮುಂದೂಡಿಕೆ
ಪೊನ್ನAಪೇಟೆ, ಮೇ. ೨೫: ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ಇಂದು ನಿಗದಿಯಾಗಿದ್ದ ಚುನಾವಣೆ ಬೆಳಿಗ್ಗೆ ಮತದಾನ ಆರಂಭಗೊAಡ ಸ್ವಲ್ಪ ಸಮಯದಲ್ಲೇ ಬ್ಯಾಲೆಟ್ ಪೇಪರ್ನಲ್ಲಿ ದೋಷ ಉಂಟಾದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿತು.
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಗೆದ್ದು ಕೊಡವ ಸಮಾಜ ಆಡಳಿತ ಮಂಡಳಿ ಚುಕ್ಕಾಣಿ ಹಿಡಿಯುವ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡು ತಂಡಗಳು ಕಳೆದ ಕೆಲವು ದಿನಗಳಿಂದ ಮತದಾರರ ಮನೆ ಮನೆಗೆ ತೆರಳಿ ತೀವ್ರ ಪ್ರಚಾರ ಕೈಗೊಂಡಿದ್ದವು.
ಆದರೆ ಬ್ಯಾಲೆಟ್ ಪೇಪರ್ ಸೀರಿಯಲ್ ನಂಬರ್ನಲ್ಲಿ ಅಭ್ಯರ್ಥಿಗಳ ಹೆಸರು ಆದಲು ಬದಲು ಆಗಿರುವುದು ಕಂಡು ಬಂದ ಕಾರಣ ಚುನಾವಣಾಧಿಕಾರಿ ಕಟ್ಟೆರ ಲಾಲಪ್ಪ ಅವರು ಚುನಾವಣೆಯನ್ನು ಮುಂದೂಡಿರುವುದಾಗಿ ಘೋಷಣೆ ಮಾಡಿದರು.