ಮಡಿಕೇರಿ, ಮೇ ೨೩ : ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಡಿ ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭವು ತಾ. ೨೫ ರಂದು ನಡೆಯಲಿದೆ.
ಸುಂಟಿಕೊಪ್ಪದ ಸರ್ಕಾರಿ ಶಾಲಾ ಮೈದಾನದಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ಅಂತಿಮ ಪಂದ್ಯಾವಳಿಯನ್ನು ಸುಂಟಿಕೊಪ್ಪದ ಬೆಟ್ಟಗೇರಿ ಗ್ರೂಪ್ ಆಫ್ ಎಸ್ಟೇಟ್ನ ಡಿ.ವಿನೋದ್ ಶಿವಪ್ಪ ಉದ್ಘಾಟಿಸಲಿದ್ದು, ಡಿ. ವಿಶಾಲ್ ಶಿವಪ್ಪ ಬಹುಮಾನ ವಿತರಣೆ ಮಾಡಲಿದ್ದಾರೆ.
ತಾ. ೧೬ ರಂದು ಪ್ರಾರಂಭವಾದ ಪಂದ್ಯಾವಳಿಯಲ್ಲಿ ೨೫ ತಂಡಗಳು ಪಾಲ್ಗೊಂಡಿದ್ದು, ಅಂತಿಮ ಪಂದ್ಯಾವಳಿಯ ಪ್ರಥಮ ಮತ್ತು ದ್ವಿತೀಯ ವಿಜೇತ ತಂಡಕ್ಕೆ ಡಿ.ವಿನೋದ್ ಶಿವಪ್ಪ ಮತ್ತು ಅವರ ಪುತ್ರ ವಿಶಾಲ್ ಶಿವಪ್ಪ ಅವರು ಡಿ.ಶಿವಪ್ಪ ಸ್ಮರಣಾರ್ಥವಾಗಿ ೧ ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. ೫೦ ಸಾವಿರ ನಗದು ಮತ್ತು ಟ್ರೋಫಿ ಜೊತೆಗೆ ವೈಯಕ್ತಿಕ ಬಹುಮಾನ ನೀಡಲಿದ್ದಾರೆ.