ಒಂದಾನೊAದು ಕಾಲದಲ್ಲಿ ಒಂದು ಕಾಡಿನಲ್ಲಿ ಎಲ್ಲಾ ಪ್ರಾಣಿಗಳೊಂದಿಗೆ ಒಂದು ಆಮೆಯೂ ವಾಸ ಮಾಡಿಕೊಂಡಿತ್ತು. ಅಲ್ಲಿ ಒಂದು ಮೊಲವೂ ಇತ್ತು. ಚುರುಕು ಮತ್ತು ಮುದ್ದಾದ ಪ್ರಾಣಿ ಮೊಲ ತನ್ನ ಓಟದ ವೇಗದ ಬಗ್ಗೆ ಕೊಚ್ಚಿಕೊಳ್ಳುತ್ತಿತ್ತು. ಅದು ಆಮೆಯನ್ನು ಅತ್ಯಂತ ನಿಧಾನ ಪ್ರಾಣಿ ಎಂದು ಮೂದಲಿಸುತ್ತಿತ್ತು. ಒಂದು ದಿನ ಕಾಡಿನ ಇತರ ಪ್ರಾಣಿಗಳ ಎದುರು ತನ್ನ ಶಕ್ತಿ ಪ್ರದರ್ಶನಕ್ಕೆ ಆಮೆಯನ್ನು ಓಟಕ್ಕೆ ಆಹ್ವಾನಿಸಿತು. ಸ್ಪರ್ಧೆ ಆರಂಭವಾಯಿತು; ಮೊಲ ಒಂದೇ ಜಿಗಿತಕ್ಕೆ ಕೆಲವು ಗಜಗಳಷ್ಟು ತಲುಪಿತು. ಹಿಂದೆ ತಿರುಗಿ ನೋಡಿದಾಗ ಆಮೆ ತುಂಬಾ ಹಿಂದೆ ಉಳಿದಿತ್ತು. ಮುಂದೆ ಇದ್ದ ಮೊಲಕ್ಕೆ ಕಾಡಿನಲ್ಲಿ ತಿನ್ನುವ ಆಹಾರದ ಸೊಪ್ಪುಗಳು ಕಾಣಿಸಿದವು. ಆಮೆ ಬರುವವರೆಗೆ ಒಂದಷ್ಟು ತಿಂದು ವಿಶ್ರಾಂತಿ ಪಡೆಯಲೆಂದು ಮಲಗಿತು. ನಿದ್ದೆಗೆ ಜಾರಿದ ಮೊಲಕ್ಕೆ ಎಚ್ಚರವಾಗಿ ನೋಡುವಾಗ ಒಂದೊAದೇ ಹೆಜ್ಜೆಯಿಸಿಕೊಂಡು ಎಲ್ಲಿಯೂ ವಿಶ್ರಾಂತಿ ಪಡೆಯದೆ ಸಾಗಿದ ಆಮೆ ಗೆಲುವಿನ ಗೆರೆ ದಾಟಿಯಾಗಿತ್ತು..!

ಆಮೆ ನಿಧಾನಗತಿಯ ಜೀವಿಯಾಗಿದ್ದರೂ ಬುದ್ಧಿವಂತ ಹಾಗೂ ಶಕ್ತಿ ಸಾಮರ್ಥ್ಯವುಳ್ಳದಾಗಿದೆ. ದೀರ್ಘಾಯುಷ್ಯ ಹೊಂದಿರುವ, ಅತಿ ಹೆಚ್ಚು ಕಾಲ ಜೀವಿಸುವ ಜೀವಿಯಾಗಿದ್ದು, ತನ್ನದೇ ಆದ ವೈಶಿಷ್ಟತೆಗಳನ್ನು ಹೊಂದಿದೆ.

ನೀರು, ಕಾಡಿನಲ್ಲಿ ವಾಸಿಸುವ ಈ ಜೀವಿಯ ಜೀವನ ವೃತ್ತಾಂತ ಕೂಡ ವಿಶೇಷತೆಯಿಂದ ಕೂಡಿದೆ. ಜಗತ್ತಿನ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಆಯಸ್ಸು ಎಂಬದಿದೆ. ಅತಿ ಹೆಚ್ಚು ಕಾಲ ಜೀವಿಸುವ ಮನುಷ್ಯನ ಜೀವಿತಾವಧಿಯು ಗರಿಷ್ಠ ೮೦ ವರ್ಷಗಳವರೆಗೆ ಎಂದು ಹೇಳಲಾಗುತ್ತದೆ. ಆದರೂ ಕೆಲವು ಗಟ್ಟಿಮುಟ್ಟಾದ ಹಿರಿಯರು ನೂರರ ಗಡಿ ದಾಟಿದ್ದು ಇದೆ. ಆದರೆ ಈ ಆಮೆಯ ಜೀವಿತಾವಧಿ ೮೦ ರಿಂದ ೧೫೦ ವರ್ಷಗಳು. ೧೫೦ಕ್ಕಿಂತಲೂ ಹೆಚ್ಚು ಕಾಲ ಬದುಕಿದ ಆಮೆಗಳು ಇವೆ. ಅಳಿವಿನಂಚಿನಲ್ಲಿರುವ ಈ ದೀರ್ಘಾಯುಷಿಯನ್ನು ಸಂರಕ್ಷಿಸಲು ಅವುಗಳ ಅಗತ್ಯತೆ, ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವುಗಳಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.

ವಿಶ್ವ ಆಮೆ ದಿನ

ಇಂದು ವಿಶ್ವ ಆಮೆ ದಿನ. ಪ್ರತಿ ವರ್ಷ ಮೇ ೨೩ರಂದು ವಿಶ್ವ ಆಮೆ ದಿನವೆಂದು ಆಚರಿಸಲಾಗುತ್ತಿದೆ. ಅಳಿವಿನಂಚಿನಲ್ಲಿರುವ ಈ ಆಮೆಗಳ ಸಂತತಿಯನ್ನು ಹೆಚ್ಚಿಸಲು ಅವುಗಳನ್ನು ಸಂರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಣೆಗೆ ತರಲಾಗಿದೆ. ಪ್ರಪಂಚದಲ್ಲಿ ಸುಮಾರು ೩೫೬ ಪ್ರಭೇದದ ಆಮೆಗಳಿದ್ದು, ಅವುಗಳ ಪೈಕಿ ೧೬೧ ಪ್ರಭೇದಗಳು ಅಪಾಯದಲ್ಲಿವೆ ಎಂದು ಅಂತರಾಷ್ಟಿçÃಯ ಪ್ರಕೃತಿ ಸಂರಕ್ಷಣೆ ಒಕ್ಕೂಟ (IUಅಓ) ಹೇಳಿದೆ. ಈ ಹಿನ್ನಲೆಯಲ್ಲಿ ಅಮೆರಿಕಾದ ಸುಸಾನ್ ಟೆಲ್ಲಮ್ ಹಾಗೂ ಮಾರ್ಷಲ್ ಥ್ಯಾಂಪ್ಸನ್ ದಂಪತಿ ೧೯೯೦ರಲ್ಲಿ ಅಮೆರಿಕನ್ ಆಮೆ ರಕ್ಷಣಾ ಸಂಸ್ಥೆ (ಅಮೆರಿಕನ್ ಟಾರ್ಟಾಯ್ಸ್ ರೆಸ್ಕೂö್ಯ) ಸ್ಥಾಪನೆ ಮಾಡಿ ಆ ಮೂಲಕ ಆಮೆಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿ ಮೇ ೨೩ನ್ನು ವಿಶ್ವ ಆಮೆ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು. ೨೦೦೦ನೇ ಇಸವಿಯಲ್ಲಿ ಇದು ಅಧಿಕೃತವಾಗಿ ಘೋಷಣೆಯಾಗಿ ಅಂದಿನಿAದ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಟೆಸ್ಟುಡಿನಿಡೆ ಕುಟುಂಬ

ಆಮೆ ಟೆಸ್ಟುಡಿನಿಡೆ ಕುಟುಂಬದ ಸರಿಸೃಪ ಜಾತಿಯ ಸದಸ್ಯ. ಆಮೆಗಳು ಹೆಚ್ಚಾಗಿ ನೀರಿನಲ್ಲಿ ವಾಸಿಸುತ್ತವೆಯಾದರೂ ಬಹುತೇಕ ಸಮಯಗಳಲ್ಲಿ ಭೂಮಿಯ ಮೇಲೂ ಇರುತ್ತವೆ. ಗುಮ್ಮಟಾಕಾರದ ಗಟ್ಟಿಯಾದ ರಕ್ಷಣಾ ಚಿಪ್ಪುಗಳನ್ನು ಹೊಂದಿರುತ್ತದೆ. ಆಮೆಯ ಹಿಂಗಾಲುಗಳು ಎಲಿಫೆಂಟೈನ್ ಅಥವಾ ಸಿಲಿಂಡರಾಕಾರದಲ್ಲಿರುತ್ತದೆ. ಕಾಲು ಹಾಗೂ ಕೈಗಳಲ್ಲಿ ಮೊನಚಾದ ಉಗುರುಗಳಿರುತ್ತದೆ. ಬೆದರಿಕೆಯಿಂದ ರಕ್ಷಿಸಿಕೊಳ್ಳಲು ತಲೆ, ಕುತ್ತಿಗೆ ಹಾಗೂ ಕೈಕಾಲುಗಳನ್ನು ರಕ್ಷಣಾ ಚಿಪ್ಪಿನೊಳಗೆ ಎಳೆದುಕೊಳ್ಳುವ ಸಾಮರ್ಥ್ಯ ಹೊಂದಿವೆ.

ಸAತಾನೋತ್ಪತ್ತಿ

ಆಮೆಯ ಜೀವನಚಕ್ರ ವಿಶೇಷವಾಗಿರುತ್ತದೆ. ಗಂಡು ಆಮೆಯ ಸಮ್ಮಿಲನದ ವೀರ್ಯದಿಂದ ಹೆಣ್ಣು ಆಮೆ ಗರ್ಭಧರಿಸಿ ಮೊಟ್ಟೆಯಿಡುತ್ತದೆ. ಒಂದು ಆಮೆ ೧೦ ರಿಂದ ೨೦ರಷ್ಟು ಮೊಟ್ಟೆಗಳನ್ನಿಡುತ್ತದೆ ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಕೆರೆ, ನದಿ, ಸಮುದ್ರದ ದಂಡೆಗಳ ಮಣ್ಣಿನಲ್ಲಿ ಗುಂಡಿ ತೆಗೆದು ಮೊಟ್ಟೆಗಳನ್ನಿಟ್ಟು ಮತ್ತೆ ಮಣ್ಣು ಇತರ ವಸ್ತುಗಳಿಂದ ಮುಚ್ಚುತ್ತದೆ. ೬೦ ರಿಂದ ೧೨೦ ದಿನಗಳವರೆಗೆ ಕಾವು ಕೊಟ್ಟ ನಂತರ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ.

ಆಹಾರ ಕ್ರಮ

ಸಾಮಾನ್ಯವಾಗಿ ಹೆಚ್ಚಿನ ಆಮೆಗಳು ಸಸ್ಯಹಾರಿಯಾಗಿರುತ್ತವೆ. ಹುಲ್ಲು, ಕಳೆ, ಎಲೆ, ಹೂವುಗಳು, ಹಣ್ಣುಗಳನ್ನು ಹೆಚ್ಚಾಗಿ ತಿನ್ನುತ್ತವೆ. ತೇವಾಂಶವಿರುವ ಅರಣ್ಯ ಪರಿಸರದಲ್ಲಿರುವ ಕೆಲವು ಆಮೆಗಳು ಪ್ರಾಣಿಗಳ ಪದಾರ್ಥಗಳನ್ನು ಕೂಡ ಸೇವಿಸುತ್ತವೆ. ಕೆಲವು ಆಮೆಯ ಮರಿಗಳು ಹುಳು, ಕೀಟಗಳನ್ನು ತಿನ್ನುತ್ತವೆ. ಮನೆಯಲ್ಲಿ ಸಾಕು ಆಮೆಗಳಿಗೆ ಮಾರುಕಟ್ಟೆಯಲ್ಲಿ ಅದರ ಆಹಾರ ಲಭ್ಯವಿದೆ.

ಸೂಕ್ಷö್ಮ ಹಾಗೂ ನಿರುಪದ್ರವಿ ಜೀವಿಯಾಗಿರುವ ಆಮೆಯ ಸಂತತಿ ಕ್ಷೀಣಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹಿಂದೆ ಕೆರೆ, ಕಟ್ಟೆ, ತೋಡು ಗದ್ದೆ ಬದಿಗಳಲ್ಲಿ ಆಮೆಗಳನ್ನು ಕಾಣಬಹುದಾಗಿತ್ತು. ಇದೀಗ ಅರಣ್ಯ ನಾಶದಿಂದಾಗಿ ಕೆರೆ-ಕಟ್ಟೆ-ತೋಡುಗಳು ಬರಿದಾಗಿ ನೀರಿಲ್ಲದೆ ಆಮೆಗಳು ಕಾಣೆಯಾಗಿವೆ. ಆಮೆಗಳನ್ನು ಆಹಾರವನ್ನಾಗಿ ಸೇವಿಸುವುದರಿಂದಲೂ ಅದರ ಸಂತತಿ ಕ್ಷೀಣವಾಗುತ್ತಿದೆ. ಪರಿಸರ ಮಾಲಿನ್ಯದಿಂದಲೂ ಹೊಡೆತ ಬೀಳುತ್ತಿದೆ; ಆಮೆಗಳ ಸಂರಕ್ಷಣೆಗಾಗಿ ಆಮೆ ಸಂರಕ್ಷಣಾ ಸಂಸ್ಥೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ.

ಆಮೆ ಪ್ರಭೇದಗಳಿಗೆ ತೊಂದರೆಯಾಗುವ ಚಟುವಟಿಕೆಗಳನ್ನು ಕಡಿಮೆ ಮಾಡುವುದು, ಪ್ಲಾಸ್ಟಿಕ್ ಉತ್ಪನ್ನ ಬಳಕೆ ಕಡಿಮೆ ಮಾಡುವುದು, ಸಮುದ್ರ ಮಾಲಿನ್ಯ ಕಡಿಮೆ ಮಾಡಲು ಸ್ವಚ್ಛತಾ ಕಾರ್ಯ ಏರ್ಪಡಿಸುವುದು, ರಾಸಾಯನಿಕ ಮತ್ತು ವಿಷಕಾರಿ ವಸ್ತುಗಳನ್ನು ನದಿ ಸಮುದ್ರಗಳಿಗೆ ಬಿಡದಿರುವುದು, ಚಂದ್ರನ ಬೆಳಕಿನ ಸಂದರ್ಭ ನದಿ ಕಡಲ ತೀರದಲ್ಲಿ ವಿದ್ಯುತ್ ಬೆಳಕನ್ನು ಕಡಿಮೆ ಮಾಡುವುದು, ಹೀಗೆ ಹಲವು ಕಾರ್ಯಗಳ ಮೂಲಕ ಆಮೆ ಸಂತತಿಯನ್ನು ರಕ್ಷಿಸಬಹುದಾಗಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಆಮೆಗಳನ್ನು ಚಿತ್ರಗಳಲ್ಲಿ ತೋರಿಸುವ ಪರಿಸ್ಥಿತಿ ಬರಬಹುದು.

ಮುಂದಿನ ಪೀಳಿಗೆ ಜೀವಂತ ಆಮೆ ನೋಡುವಂತಾಗಲಿ...

-ಕುಡೆಕಲ್ ಸಂತೋಷ್