ಮಡಿಕೇರಿ, ಮೇ ೧೮: ಕಕ್ಕೆಹೊಳೆ ನಿವಾಸಿ ಸಂಪತ್ (ಶಂಭು) ಹತ್ಯೆಗೆ ಸಂಬAಧಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ.
ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದ ಬಿ.ಎಂ. ಕಿರಣ್ (೪೪), ಚೌಡ್ಲು ಗ್ರಾಮದ ಪಿ.ಎಂ ಗಣಪತಿ (೪೪) ಹಾಗೂ ಕಿರಣ್ ಪತ್ನಿ ಸಂಗೀತಾ (೩೫) ಬಂಧಿತ ಆರೋಪಿಗಳು. ಸಂಪತ್ ಕೊಲೆಗೆ ಆರೋಪಿಗಳಿಗೆ ಸಹಕರಿಸಿದ ಇನ್ನೂ ಕೆಲವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ತಾ. ೯ ರಂದು ಕುಶಾಲನಗರದ ಜಾನ್ ಪೌಲ್ ಎಂಬವರಿಗೆ ಸೇರಿದ ಕಾರನ್ನು ಸಂಪತ್ ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಕೊಂಡೊಯ್ದಿದ್ದು, ಅನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದರು. ಈ ಕುರಿತು ಜಾನ್‌ಪೌಲ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ತಾ. ೧೦ ರಂದು ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಹಳ್ಳಿ ಎಂಬಲ್ಲಿ ಅಪರಿಚಿತ ಕಾರು ನಿಂತಿದ್ದು, ಅದರಲ್ಲಿ ರಕ್ತದ ಕಲೆಗಳು, ಕೂದಲುಗಳು ದೊರಕಿದ ಕುರಿತು ಪ್ರಕರಣ ದಾಖಲಾಗಿ ತನಿಖೆ ಕೈಗೊಂಡ ಸಂದರ್ಭ ಸುಳಿವು ಲಭ್ಯವಾಗಿದೆ ಎಂದು ವಿವರಿಸಿದರು.
ಕಾರು ಕೊಂಡೊಯ್ದ ಸಂಪತ್ ಪತ್ತೆಯಾಗದ ಹಿನ್ನೆಲೆ ತೀವ್ರ ವಿಚಾರಣೆ ನಡೆಸುವ ಸಂದರ್ಭ ತಾ. ೧೪ ರಂದು ಸಕಲೇಶಪುರ ತಾಲೂಕಿನ ವಣಗಲ್ಲು ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ತಲೆ ಹಾಗೂ ದೇಹದ ಭಾಗಗಳಿಗೆ ಹಲ್ಲೆ ಮಾಡಿ ಕೊಂದಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಮಾಹಿತಿ ನೀಡಿದರು.
ಅಕ್ರಮ ಸಂಬAಧ - ಗಲಾಟೆ - ದೂರು - ಕೊಲೆ!
ಮೃತದೇಹ ಪತ್ತೆ ನಂತರ ಕೊಲೆಗೆ ಕಾರಣ ಹುಡುಕುವ ಸಂದರ್ಭ ಅಕ್ರಮ ಸಂಬAಧದಿAದ ಏರ್ಪಟ್ಟ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿ ಇದೀಗ ಕೊಲೆಯಲ್ಲಿ ಅಂತ್ಯವಾಗಿರುವುದು ಗೋಚರಿಸಿದೆ ಎಂದು ಎಸ್.ಪಿ. ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಲೆ ಆರೋಪದಡಿ ಬಂಧಿತರಾಗಿರುವ ಕಿರಣ್, ಗಣಪತಿ ಹಾಗೂ ಕೊಲೆಯಾದ ಸಂಪತ್ ಆಪ್ತ ಸ್ನೇಹಿತರಾಗಿದ್ದು, ಕಿರಣ್ ಪತ್ನಿ ಸಂಗೀತ ಜೊತೆ ಸಂಪತ್‌ಗೆ ಅಕ್ರಮ ಸಂಬAಧ ಬೆಳೆದಿದೆ. ಈ ವಿಚಾರ ಪತಿ ಕಿರಣ್‌ಗೆ ತಿಳಿದು ೨೦೨೩ರಲ್ಲಿ ನಡುವೆ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿ ಉಭಯ ಕಡೆಗಳಿಂದ ಪ್ರಕರಣ ದಾಖಲಾಗಿದೆ.
ಅನಂತರ ಸಂಗೀತ ಮಧ್ಯಸ್ಥಿಕೆ ವಹಿಸಿ ಪ್ರಕರಣ ಹಿಂಪಡೆಯುವ ನಿಟ್ಟಿನಲ್ಲಿ ರಾಜಿ ಮಾಡಿದ್ದರು. ಈ ನಿಟ್ಟಿನಲ್ಲಿ ಕಿರಣ್ ದೂರು ಹಿಂಪಡೆದಿದ್ದು, ಸಂಪತ್ ಹಿಂಪಡೆದಿರಲಿಲ್ಲ. ಈ ಗಲಾಟೆ, ಪೊಲೀಸ್ ದೂರು ನಡುವೆಯೂ ಸಂಗೀತಳನ್ನು ‘ದೈಹಿಕ ಸಂಪರ್ಕ ಹೊಂದುವAತೆ ಹಾಗೂ ತನ್ನ ಜೊತೆ ಬರುವಂತೆ’ ಕೆಲವು ಖಾಸಗಿ ವೀಡಿಯೋ ಹಾಗೂ ಸಂದೇಶಗಳನ್ನು ತೋರಿಸಿ ಸಂಪತ್ ಪೀಡಿಸುತ್ತಿದ್ದ ಬಗ್ಗೆ ಸಂಗೀತ ತನ್ನ ಪತಿ ಕಿರಣ್‌ಗೆ ತಿಳಿಸಿದ್ದು, ಬಳಿಕ ಕಿರಣ್ ಹಾಗೂ ಗಣಪತಿ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ವಿವರ ನೀಡಿದರು.
ತಾ. ೯ ರಂದು ಸಂಪತ್‌ಗೆ ಕರೆ ಮಾಡಿದ ಸಂಗೀತ ಹಾನಗಲ್ಲು ಗ್ರಾಮಕ್ಕೆ ಬರ ಹೇಳಿದ್ದು, ಈ ಸಂದರ್ಭ ಸ್ನೇಹಿತನ ಕಾರನ್ನು ಪಡೆದು ಪಯಣ ಬೆಳೆಸಿದ್ದಾರೆ. ಈ ಸಂದರ್ಭ ಕಿರಣ್ ಹಾಗೂ ಗಣಪತಿ ಸಂಗೀತಳೊAದಿಗೆ ಬಂದು ಕೋವಿ ತೋರಿಸಿ ಬೆದರಿಸಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಹಲ್ಲೆಗೈದು ಕೊಲೆ ಮಾಡಿದ್ದಾರೆ ಎಂದರು.
ಮೃತದೇಹ ಸ್ಥಳಾಂತರ
ಸAಗೀತ ಹಾಗೂ ಕಿರಣ್ ಮನೆಯ ಅನತಿ ದೂರದಲ್ಲಿ ಕೊಲೆ ಮಾಡಿದ ನಂತರ ಸಂಪತ್ ಮೃತದೇಹವನ್ನು ಆತ ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿಯೇ ಯಸಳೂರು ಸಮೀಪದ ಕಲ್ಲಹಳ್ಳಿ ಬಳಿ ಕೊಂಡೊಯ್ದು ಅರಣ್ಯ ಪ್ರದೇಶದಲ್ಲಿ ಬಿಸಾಡಿ, ಕಾರಿನಲ್ಲಿ ಡಿಸೇಲ್ ಕಡಿಮೆಯಿದ್ದ ಹಿನ್ನೆಲೆ ಕಾರನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಮತ್ತೊಂದು ವಾಹನದಲ್ಲಿ ವಾಪಸ್ ಬಂದಿದ್ದಾರೆ ಎಂದು ಕೆ. ರಾಮರಾಜನ್ ಮಾಹಿತಿಯಿತ್ತರು.
ತನಿಖಾ ತಂಡ ತಾ. ೧೬ ರಂದು ಬೆಂಗಳೂರಿನಲ್ಲಿ ಕಿರಣ್‌ನನ್ನು, ತಾ. ೧೭ ರಂದು ಬೆಳ್ತಂಗಡಿಯಲ್ಲಿ ಗಣಪತಿಯನ್ನು ಹಾಗೂ ತಾ. ೧೮ ರಂದು ಸಂಗೀತಾಳನ್ನು ಸೋಮವಾರಪೇಟೆಯಲ್ಲಿ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದವರ ಸುಳಿವು ಪತ್ತೆಹಚ್ಚಲಾಗುತ್ತಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರೋಪಿತರು ಹಾಗೂ ಕೊಲೆಯಾದ ಸಂಪತ್ ಒಂದುಗೂಡಿ ಇಟ್ಟಿಗೆ ಕಾರ್ಖಾನೆ ಆರಂಭಿಸುವ ಕುರಿತು ಪ್ರಸ್ತಾಪಗಳಿದ್ದು, ಈ ಸಂಬAಧ ಸಂಪತ್ ಹಣವನ್ನು ಹೂಡಿದ್ದ ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಸೊಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ಕುಶಾಳನಗರ ಇನ್ಸ್ಪೆಕ್ಟರ್ ದಿನೇಶ್, ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಜರಿದ್ದರು.
ಕಾರ್ಯಾಚರಣೆ ತಂಡ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಕುಶಾಲನಗರ ಸಿಪಿಐ ದಿನೇಶ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಪ್ರಕಾಶ್, ಸೋಮವಾರಪೇಟೆ ಇನ್ಸ್ಪೆಕ್ಟರ್ ಮುದ್ದು ಮಹದೇವ, ಗೋಣಿಕೊಪ್ಪ ಸಿಪಿಐ ಶಿವರಾಜು ಮುಧೋಳ್, ಜಿಲ್ಲಾ ಗುಪ್ತದಳ ಇನ್ಸ್ಪೆಕ್ಟರ್ ಎಸ್.ಜಿ. ಮೇದಪ್ಪ, ಡಿಸಿಆರ್‌ಬಿ ಇನ್ಸ್ಪೆಕ್ಟರ್ ಚಂದ್ರಶೇಖರ್, ಡಿಸಿಆರ್‌ಬಿ ವಿಭಾಗದ ಯೋಗೇಶ್, ನಿರಂಜನ್, ಶರತ್, ಪ್ರವೀಣ್, ರಾಜೇಶ್, ವಿವಿಧ ಪೊಲೀಸ್ ಠಾಣಾಧಿಕಾರಿಗಳಾದ ಮೋಹನ್ ರಾಜ್, ಹೆಚ್.ಟಿ. ಗೀತಾ, ಮಂಜುನಾಥ್, ಗೋಪಾಲ್, ರವೀಂದ್ರ, ಎಎಸ್‌ಐಗಳಾದ ವಿ.ಜಿ. ವೆಂಕಟೇಶ್, ಕಾಳಿಯಪ್ಪ, ಮಂಜುನಾಥ, ಪೇದೆಗಳಾದ ಜಿ.ಆರ್. ಉದಯ ಕುಮಾರ್, ಎಸ್. ಪ್ರವೀಣ್, ಸುದೀಶ್ ಕುಮಾರ್, ಪಿ.ಸಿ. ಶರತ್, ಸುನಿಲ್ ಕುಮಾರ್, ಗಾಯಿತ್ರಿ ದಿವ್ಯ, ಶಶಿಕಲಾ, ಸುನಿಲ್, ಜೋಶ್ ನಿಶಾಂತ್, ಗಿರೀಶ್, ಮಧು, ಬಸಪ್ಪ, ಸ್ವಾಮಿ ಇದ್ದರು.