ಸೋಮವಾರಪೇಟೆ, ಮೇ ೧೮: ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ವಿಳಂಬ ಹಾಗೂ ಕಳಪೆಯಿಂದ ಕೂಡಿದೆ ಎಂಬ ಗ್ರಾಮಸ್ಥರ ಆರೋಪದ ಹಿನ್ನೆಲೆ ಲೋಕೋಪಯೋಗಿ ಇಲಾಖೆಯ ಸೋಮವಾರಪೇಟೆ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಸೇರಿದಂತೆ ಇಲಾಖೆಯ ತಾಂತ್ರಿಕ ಅಧಿಕಾರಿಗಳು ತೋಳೂರು-ಶೆಟ್ಟಳ್ಳಿಯಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.

ಸೋಮವಾರಪೇಟೆಯ ಆಲೇಕಟ್ಟೆ-ತೋಳೂರು-ಶೆಟ್ಟಳ್ಳಿ-ಕೂತಿ ಮಾರ್ಗ ರಸ್ತೆಯು ರೂ. ೨೦ ಕೋಟಿ ವೆಚ್ಚದಲ್ಲಿ ವಿಸ್ತರಣೆ ಹಾಗೂ ಡಾಂಬರೀಕರಣ ಕಾಮ ಗಾರಿಯು ನಡೆಯುತ್ತಿದ್ದು, ತೋಳೂರುಶೆಟ್ಟಳ್ಳಿಯಿಂದ ಹರಪಳ್ಳಿವರೆಗೆ ೨.೫ ಕಿ.ಮೀ.ವರೆಗೆ ಮಾತ್ರ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕೆಲವೆಡೆ ಕಳಪೆಯಾಗಿರುವ ಬಗ್ಗೆ ಕೂತಿ - ತೋಳೂರುಶೆಟ್ಟಳ್ಳಿ ಗ್ರಾಮಸ್ಥರು ಆರೋಪಿಸಿ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಸಂಬAಧಿಸಿದ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿಗಳಿಗೆ ಸೂಚಿಸಿದರು.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್, ಕೂತಿ ಗ್ರಾಮದ ಅಧ್ಯಕ್ಷ ಜಯರಾಮ್, ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್, ಮಲೆನಾಡು ರಕ್ಷಣಾ ಸೇನೆಯ ತಾಲೂಕು ಅಧ್ಯಕ್ಷ ಪೃಥ್ವಿ ಗೌಡಳ್ಳಿ, ಕಾಫಿ ಬೆಳಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಜೀವನ್, ಕೆ.ಸಿ. ಉದಯ್ ಕುಮಾರ್, ಹೆಚ್.ಡಿ. ಮೋಹನ್, ದಿವಾಕರ್, ದೇವರಾಜ್, ಕಿರಿಯ ಅಭಿಯಂತರ ಅರ್ಬಾಸ್, ಸಿವಿಲ್ ಎಕ್ಸ್ಪರ್ಟ್ ಟೆಸ್ಟಿಂಗ್ ಸೆಂಟರ್‌ನ ತಿಲಕ್ ಸೇರಿದಂತೆ ಇತರರಿದ್ದರು.