ಬುದ್ಧನ ಬೋಧನೆಗಳಲ್ಲಿ ಬಹುಪಾಲು ಜನಸಾಮಾನ್ಯರನ್ನು ಉದ್ದೇಶಿಸಿ ಆಗಿದೆ. ‘ಮಹಾಮಂಗಳಸ್ತುತA’ನಲ್ಲಿ ಯಾವ ಬಗೆಯ ಜೀವನ ವಿಧಾನವನ್ನು ಪಾಲಿಸಬೇಕೆಂದು ಬುದ್ಧನು ವಿವರಿಸಿರುವನು. ಮೂರ್ಖರ ಜೊತೆ ಸಹವಾಸ ಬೇಡ, ಗೌರವಿಸಬೇಕಾದವರಿಗೆ ಗೌರವ ನೀಡು ಎಂದಿರುವನು. ಆಶಾವಾದ ಮನುಜರಲ್ಲಿ ಮುಖ್ಯ. ನಿರಾಶವಾದ ಇರಬಾರದು ಎಂದು ತಜ್ಞರು ಹೇಳುವರು. ಆದರೆ ಬುದ್ಧ ಮಾತ್ರ ಆಶಾವಾದ, ನಿರಾಶವಾದ ಬೇಡ. ವಾಸ್ತವಿಕವಾದವಿರಲಿ ಎಂದಿದ್ದಾನೆ.ಜೀವನದಲ್ಲಿ ಆಹಾರದ ಪಾತ್ರವೇನು. ಬಟ್ಟೆಯ ಬೆಲೆ ಏನು ಎಂಬುದಕ್ಕೆ ಆಹಾರ ರುಚಿ ರುಚಿಗೆ ಮಾತ್ರ ಎಂದನು. ಧಾರ್ಮಿಕ ಜೀವನಕ್ಕೆ ಶಕ್ತಿ ನೀಡುವ ಪದಾರ್ಥವೆಂದು ಆಹಾರವನ್ನು ಭಾವಿಸಿ ಬಟ್ಟೆಯ ವಿಷಯದಲ್ಲಿ ಆಡಂಭರ ದೂರವಿಡಿ ಎಂದು ಹೇಳಿದನು. ಸಮಾಜದ ಅಶಾಂತಿಗೆ ಬಡತನವೇ ಮೂಲ. ಮದ್ಯಪಾನ, ಜೂಜಾಟ, ಕೆಟ್ಟ ಸಾಂಗತ್ಯ, ಸೋಮಾರಿತನ ಇವು ದಾರಿದ್ರö್ಯಕ್ಕೆ ಮೂಲ ಕಾರಣ ಎಂದು ಹೇಳಿದನು.

ಬುದ್ಧ ತನ್ನನ್ನು ತಾನು ಸಂಶೋಧನೆ ಮಾಡಿಕೊಂಡು ದೇಹವನ್ನು ಒಣಗಿಸಿ ದಂಡಿಸಿದರೂ ಅದರಿಂದ ಫಲಿತಾಂಶವೇನು ಇಲ್ಲವೆಂದು ಅವನಿಗೆ ಜ್ಞಾನೋದಯವಾಗಿ ಅಷ್ಟಾಂಗ ಮಾರ್ಗವನ್ನು ಪ್ರತಿಪಾದಿಸಿದ್ದು ಅದೇ ಬುದ್ಧಗಯ, ವಿಶ್ವ ವಿಖ್ಯಾತ ಪುಣ್ಯಕ್ಷೇತ್ರ.

ಬುದ್ಧಗಯ, ಸಾರನಾಥ, ಕುಶಿನಗರ, ಲುಂಬಿನಿ ಈ ನಾಲ್ಕು ಬುದ್ಧ ಜೀವಿಸಿದ ಸ್ಥಳಗಳು. ಇವೆಲ್ಲವೂ ಬೌದ್ಧ ಧರ್ಮಗಳಿಗೆ ಪವಿತ್ರವಾದ ಸ್ಥಳ. ಗಯ - ಬುದ್ಧ ದೇವನಿಗೆ ಜ್ಞಾನೋದಯವಾದ ಸ್ಥಳವಾದುದರಿಂದ ಅದು ಬುದ್ಧಗಯ ಆಗಿದೆ. ಬೌದ್ಧರು ಆ ಸ್ಥಳವನ್ನು ಜ್ಞಾನ ವೃದ್ಧಿಸಿಕೊಳ್ಳುವ ಪವಿತ್ರ ಸ್ಥಳವೆಂದು ಭಾವಿಸಿರುವರು. ಇದು ಬೌದ್ಧರಿಗೆ ಮಾತ್ರವಲ್ಲ ಹಿಂದೂಗಳಿಗೂ ಪವಿತ್ರ ಸ್ಥಳ. ಗಯಾ ಎನ್ನುವುದು ಬಿಹಾರದ ಗಯ ಜಿಲ್ಲೆಯಲ್ಲಿದೆ. ಇವರ ಅವಧಿಯಲ್ಲಿ ನಳಂದ ವಿಶ್ವ ವಿದ್ಯಾಲಯ ಜನರನ್ನು ವಿಜ್ಞಾನವಂತರನ್ನಾಗಿ ಮಾಡುವುದರಲ್ಲಿ ಮುಂದಿತ್ತು. ಇಲ್ಲಿ ಅನೇಕ ಬೌದ್ಧ ಸನ್ಯಾಸಿಗಳಿರುವರು, ಅಧ್ಯಾಪಕರಿರುವರು. ಬಿಹಾರ್ ಎಂಬ ಹೆಸರು ವಿಹಾರ್‌ನಿಂದ ಬಂದಿದೆ. ಬೌದ್ಧರ ಪ್ರದೇಶ ವಿಹಾರ್, ಬೌದ್ಧರ ಬೋದ್‌ಗಯ ಇಲ್ಲಿ ಗೌತಮ ಬುದ್ಧನ ಆಲಯವಿದೆ. ಇಲ್ಲಿ ಪ್ರಾಣಿ ಹಿಂಸೆ ನಿಷಿದ್ಧ. ವಿದೇಶಗ ಳಿಂದಲೂ ಇಲ್ಲಿಗೆ ಬೌದ್ಧ ಸನ್ಯಾಸಿಗಳು ಆಗಮಿಸುವರು. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಬುದ್ಧ ಸಹ ಇದ್ದರೆಂದು ಹೇಳಲಾ ಗುತ್ತಿದೆ. ಬೌದ್ಧ ಧರ್ಮ ಎಂದರೆ ಮಾನವ ಧರ್ಮ ಕೆಳಗೆ ಬಿದ್ದವರನ್ನು ಎಬ್ಬಿಸಿದವನೇ ಬುದ್ಧ. ಮನುಷ್ಯರಲ್ಲಿ ಅಹಂ, ಮೇಲು, ಕೀಳು ಆಚರಣೆಯಿಂದ ಸಮಾಜದಲ್ಲಿ ಶಾಂತಿ ಇಲ್ಲ. ಇದಕ್ಕೆ ಪರಿಹಾರವಾಗಿ ಬುದ್ಧನು ಬೋಧಿಸಿದ ನಾಲ್ಕು ಸತ್ಯ ಎಂಟು ಸೂತ್ರಗಳು ಪ್ರಪಂಚಕ್ಕೆ ಶಾಂತಿ ಮಾರ್ಗ ಸೂಚಿಸುತ್ತದೆ. ಹಿಂದಿನ ಕರ್ಮಗಳೆ ಇಂದಿನ ಸಮಸ್ಯೆಗೆ ಕಾರಣ. ಏನು ಮಾಡಬೇಕು. ಹೇಗೆ ಜೀವಿಸಬೇಕು ಎಂದು ತಿಳಿಸಿರುವನು.

ನಶಿಸಿ ಹೋಗುವ ದೇಹ, ಶಾಶ್ವತವಲ್ಲದ ಸಂಪತ್ತು ಇವು ಸಿದ್ಧಾರ್ಥನ ಸತ್ಯಾನ್ವೇಷಣೆಗೆ ಪ್ರೋತ್ಸಾಹ ನೀಡಿದವು.

ಇದರಿಂದ ಬೋಧಿ ವೃಕ್ಷದ ಕೆಳಗೆ ಹುಣ್ಣಿಮೆ ಬೆಳದಿಂಗಳಲ್ಲಿ ಸುದೀರ್ಘ ತಪಸ್ಸು ಮಾಡಿದ. ಅದರಿಂದ ಜ್ಞಾನ ಆತನೊಳಗೆ ಪ್ರವೇಶಿಸಿ ಜ್ಞಾನ ಪೂರ್ಣತೆ ಪಡೆದ.

ಆತನಿಗೆ ಆಶ್ರಯ ನೀಡಿದ ಬೋಧಿ ವೃಕ್ಷ ಸತ್ಯ, ಶಾಂತಿ, ದಯೆ, ಧ್ಯಾನ, ಬೌದ್ಧ ಧರ್ಮದ ಮುಖ್ಯಾಂಶಗಳು. ಶರಣಂ ಎಂದರೆ ಆಶ್ರಯಿಸುವುದೆಂದರ್ಥ. ಬುದ್ಧ ತನ್ನ ಧರ್ಮ ಸೂತ್ರಗಳನ್ನು ದೀನರಿಗೆ ಚಕ್ರವರ್ತಿಗಳಿಗೆ ಸಮಾನವಾಗಿ ಬೋಧಿಸಿದ ಬೌದ್ಧ ಧರ್ಮ ವಿಶ್ವದಾದ್ಯಂತ ವಿಸ್ತರಿಸಿತು.

ಯಾವ ಜೀವಿಯನ್ನು ನೋಯಿಸದಿರಿ. ಎಲ್ಲಾ ಜೀವಿಗಳನ್ನು ಸಮವಾಗಿ ನೋಡಿರಿ ಪ್ರೇಮಿಸಿ ಅವುಗಳನ್ನು ಗೌರವಿಸಿರಿ. ನೇಪಾಳದ ಲುಂಬಿನಿಯಲ್ಲಿ ಅವನ ಜನನ. ಇದು ಬೌದ್ಧರ ಪವಿತ್ರ ಸ್ಥಳ.

ಹುಣ್ಣಿಮೆಯಂದು ಬೋಧಿ ವೃಕ್ಷದ ನೆರಳಲ್ಲಿ ಬುದ್ಧನಿಗೆ ಜ್ಞಾನೋದಯವಾದರಿಂದ ಆ ದಿನವನ್ನು ಬುದ್ಧ ಪೂರ್ಣಿಮ ಎಂದು ಆಚರಿಸುವರು. ಸತ್ಕರ್ಮಕ್ಕೆ ಮಾತ್ರ ಮೋಕ್ಷವೆಂದ ಗೌತಮ ಬುದ್ಧ.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.