ಮನುಷ್ಯ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಆದರೆ ಕಳೆದುಹೋದ ಸಮಯ, ಆರೋಗ್ಯದ ವಿಚಾರದಲ್ಲಿ ಮಾತ್ರ ಅದು ಸಾಧ್ಯವಿಲ್ಲ.
‘ಆರೋಗ್ಯವೇ ಭಾಗ್ಯ’ ಎಂಬ ಗಾಧೆ ಮಾತಿನಂತೆ, ಆರೋಗ್ಯ ಒಂದಿದ್ದರೆ ನಾವು ಅಂದುಕೊAಡದ್ದೆಲ್ಲಾ ಸಾಧಿಸಬಹುದು. ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ನಮ್ಮ ಆರೋಗ್ಯದ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಿದ್ದೇವೆ ಎಂದರೆ ಅದರ ಸಂಪೂರ್ಣ ಅನುಭವ ನಮಗೆ ‘ಕೋವಿಡ್ ಮಹಾಮಾರಿ’ ನಮ್ಮ ರಾಷ್ಟçದೆಲ್ಲೆಡೆ ಹರಡಿದಾಗ, ಮನುಕುಲವೇ ತಲ್ಲಣಗೊಂಡಿತ್ತು... ಪ್ರತಿಯೊಬ್ಬರಿಗೂ ಹಣ, ಅಂತಸ್ತು, ಐಶ್ವರ್ಯ ಎಲ್ಲಕ್ಕಿಂತಲೂ ಹೆಚ್ಚು ಮನುಷ್ಯನ ಜೀವ, ಉತ್ತಮ ಆರೋಗ್ಯ ಎಂಬ ಪಾಠವನ್ನು ಕೊರೊನಾ ವೈರಸ್ ಕಲಿಸಿಬಿಟ್ಟಿತು.
ನಮ್ಮಲ್ಲಿ ಯಾರಿಗಾದರೂ ಆರೋಗ್ಯದ ಏರುಪೇರಾದರೆ ತಕ್ಷಣವೇ ನಮ್ಮ ಈಚಿmiಟಥಿ ಆoಛಿಣoಡಿs, ಪಕ್ಕದ ಕ್ಲಿನಿಕ್ಗೊ, ಹತ್ತಿರದ ಖಾಸಗಿ ಆಸ್ಪತ್ರೆಗೊ ಹೋಗಿ ತೋರಿಸಿಕೊಳ್ಳುವುದು ರೂಡಿ. ಅಲ್ಲಿ ನಾವು ದುಡ್ಡಿನ ಬಗ್ಗೆ ಯೋಚಿಸುವುದಿಲ್ಲ. ಮೊದಲು ಆರೋಗ್ಯ ಎಂದು ಹೇಳುತ್ತೇವೆ. ಆದರೆ ಜನಸಾಮಾನ್ಯರು ದುಬಾರಿ ಬಿಲ್ಲನ್ನು ಕೊಡುವ ಸ್ಥಿತಿಯಲ್ಲಿರುವುದಿಲ್ಲ. ಆಗ ಅವರಿಗೆ ಸರಕಾರಿ ಆಸ್ಪತ್ರೆಗಳೇ ಜೀವಸೆಲೆಯ ತಾಣ.
ಇಲ್ಲಿ ನಾವೆಲ್ಲಾ ಒಂದು ಅಂಶವನ್ನು ಗಮನಿಸಲೇ ಬೇಕು. ನೀವು ಖಾಸಗಿ ಆಸ್ಪತ್ರೆಗಾದರೂ ಹೋಗಿ ಅಥವಾ ಸರಕಾರಿ ಆಸ್ಪತ್ರೆಗಳಿಗಾದರೂ ಹೋಗಿ ಅಲ್ಲಿ ವೈದ್ಯರಿಗಿಂತ ಮೊದಲಾಗಿ ಸೇವೆಗೆ ಶುಶ್ರೂಷೆಗೆ ದೌಢಾಯಿಸಿಬರುವುದು ಶುಭ್ರ ವಸ್ತçಧಾರಿಗಳಾದ, ಕರುಣಾಮಯಿಗಳಾದ ‘ದಾದಿಯರು’.
ನಾವು ಆಸ್ಪತ್ರೆಗೆ ಹೋಗುವಾಗ ಅಲ್ಲಿ ಚಿಕಿತ್ಸೆ ಪಡೆದು ಬಂದನAತರ ಮಾತನಾಡುವುದು ಅಲ್ಲಿಯ ಸವಲತ್ತುಗಳ ಬಗ್ಗೆ, ವೈದ್ಯರ ಖಾಳಜಿ ಬಗ್ಗೆ, ಕೈಗುಣಗಳ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ. ಆದರೆ ಅಪ್ಪಿತಪ್ಪಿಯೂ ನಮಗೆ ನಿಸ್ವಾರ್ಥ ಸೇವೆ ನೀಡಿದ ನಗುಮುಖದ ಸೋದರಿ ಶುಶ್ರೂಷಕಿಯರ ಬಗ್ಗೆ ನಮಗೆ ಕಣ್ಣಿಗೆಕಂಡರೂ ಅವರು ಪ್ರಶಂಸೆಗೆ ಒಳಪಡುವುದೇ ಇಲ್ಲ. ಯಾವ ದಾದಿಯರೂ ವೇತನವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿಲ್ಲವಾದರೂ ಅವರ ನಿಸ್ವಾರ್ಥ ಸೇವೆಯನ್ನು ‘ಸಮಾಜ ಸೇವೆ’ ಎಂದು ಗುರುತಿಸಬೇಕಾಗುತ್ತದೆ.
ದಾದಿಯರು ಒಮ್ಮೆ ಸಮವಸ್ತç ಧರಿಸಿದರೆಂದರೆ, ರೋಗಿಗಳಲ್ಲಿ ಯಾವುದೇ ಭೇದ ಭಾವವಿಲ್ಲದೆ, ಯಾವುದೇ ಸ್ಥಿತಿಯಲ್ಲಿದ್ದರೂ, ಎಷ್ಟೇ ದುರ್ನಾತ ಬರುತ್ತಿದ್ದರೂ ತಮ್ಮ ಸಂಬAಧಿಕರೇ ಎಂಬAತೆ ಚಿಕಿತ್ಸೆ ನೀಡುತ್ತಾರೆ. ರೋಗಿಗಳ ನೋವಿಗೆ ತಮ್ಮದೇ ಸಂಬAಧಿಕರೇನೋ ಎಂಬAತೆ ಮರುಗುತ್ತಾರೆ. ಆದ್ದರಿಂದ ಅವರ ಸೇವೆಗೆ ನಮ್ಮ ಸಹಾನುಭೂತಿ ಬೇಡ, ಬದಲಾಗಿ ಗೌರವವಿರಲಿ. ಅದು ನೀವು ಅವರಿಗೆ ನೀಡುವ ಅತೀ ಶ್ರೇಷ್ಠ ಪುರಸ್ಕಾರ. ಕೊರೊನಾ ವೈರಸ್ ದೇಶದೆಲ್ಲೆಡೆ ಜನತೆಯನ್ನು ನಡುಗಿಸಿದಾಗ ಅಲ್ಲಿ ವೈದ್ಯರಿಗಿಂತ ಹೆಚ್ಚಾಗಿ ದಾದಿಯರು ಮಾಡಿದ ಸೇವೆಯನ್ನು ಮರೆಯುವಂತಿಲ್ಲ.
ಸದಾ ಸೇವೆಯಲ್ಲಿ ಮುಂದಿರುವ ವೈದ್ಯರ ಸಲಹೆಯನ್ನು ಚಾಚೂತಪ್ಪದೆ ಪಾಲಿಸುವ ಸಮಾಜದ ಸ್ವಾಸ್ಥö್ಯಕ್ಕಾಗಿ ಹಗಲು - ರಾತ್ರಿಯೆನ್ನದೆ ಸೇವೆ ಸಲ್ಲಿಸುವ ಹಾಗೂ ಅವರ ಸೇವೆಯನ್ನು ಗುರುತಿಸಿ, ಗೌರವಿಸುವ ಸಲುವಾಗಿ ಪ್ರತಿವರ್ಷ ಮೇ ೧೨ ರಂದು ‘ವಿಶ್ವ ದಾದಿಯರ ದಿನ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಈ ವಿಶೇಷ ದಿನ ಮನುಕುಲದ ಒಳಿತಿಗಾಗಿ, ದೀನ ದಲಿತರ ಸೇವೆ ಮಾಡಿದ ಮಹಾನ್ ಚೇತನ ಫ್ಲೊರೆನ್ಸ್ ನೈಟಿಂಗೆಲ್ ಅವರ ಹುಟ್ಟುಹಬ್ಬವಾಗಿದೆ.
ಫ್ಲೊರೆನ್ಸ್ ನೈಟಿಂಗೆಲ್ ವಿಶ್ವದೆಲ್ಲೆಡೆ ಕರ್ತವ್ಯ ನಿರ್ವಹಿಸುವ ದಾದಿಯರ ಮಾತೆ. ಮೇ ೧೨ ಈ ವಿಶೇಷ ದಿನದಂದು ವಿಶ್ವ ದಾದಿಯರ ಪರಿಷತ್ತು (Iಟಿಣeಡಿಟಿಚಿಣioಟಿಚಿಟ ಓuಡಿsiಟಿg ಅouಟಿsiಟ) ಒಂದು ಘೋಷವಾಕ್ಯವನ್ನು ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಆರೋಗ್ಯ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು (೨೦೧೮).
೨೦೨೦ ‘ಆರೋಗ್ಯದೆಡೆಗೆ ರಹದಾರಿ ತೋರಿಸುವ ದಾದಿಯ’, ೨೦೨೧ ‘ಖಿeಚಿm ಈಡಿoಟಿಣ ಐiಟಿe Wಚಿಡಿಡಿioಡಿs’ ಭವಿಷ್ಯದ ಆರೋಗ್ಯ ರಕ್ಷೆಗೆ ಒಂದು ಸೃಷ್ಟಿ, ಈ ರೀತಿ ಈ ವರ್ಷದ ಘೋಷಣೆ, ‘ಅಚಿಡಿiಟಿg ಈoಡಿ ಓuಡಿses - sಣಡಿeಟಿgಣheಟಿs ಇಛಿoಟಿomies.
ಫ್ಲೊರೆನ್ಸ್ ನೈಟಿಂಗೆಲ್ ಒಂದು ವಾತ್ಸಲ್ಯಮಯಿ, ಮಾತೃ ಸ್ವರೂಪಿ, ಆ ಮಹಾ ತ್ಯಾಗಿಯ ಹುಟ್ಟುಹಬ್ಬವೇ ‘ದಾದಿಯರ ದಿನ’. ಫ್ಲೊರೆನ್ಸ್ ಹುಟ್ಟಿದ್ದು ೧೮೨೦ ಮೇ ೧೨ ರಂದು ಇಟಲಿ ದೇಶದಲ್ಲಿ, ಇವರ ತಂದೆ ವಿಲಿಯಮ್ಸ್ ಎಡ್ವರ್ಡ್. ಇವರು ಅವರ ತಂದೆ - ತಾಯಿಗೆ ೨ನೇ ಮಗಳಾಗಿ ಜನಿಸಿದರು.
ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ, ದೀನದಲಿತರು, ಬಡವರು, ಭಿಕ್ಷÄಕರನ್ನು ಕಂಡರೆ ಮರುಗುತ್ತಿದ್ದ ಫ್ಲೊರೆನ್ಸ್ ಶ್ರೀಮಂತ ಜೀವನ ನಡೆಸಲೇ ಇಲ್ಲ. ಅವರು ಜೀವನದ ಮೌಲ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರು.
ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಫ್ಲೊರೆನ್ಸ್ ಗ್ರೀಕ್ ಭಾಷೆಯ ಸಾಹಿತ್ಯದಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಅದರ ಜೊತೆಗೆ ಇಂಗ್ಲೀಷ್, ಫ್ರೆಂಚ್, ಜರ್ಮನಿ ಮತ್ತು ಇಟಲಿ ಭಾಷೆಗಳ ಗ್ರಂಥಗಳನ್ನು ಕೂಡ ಕರಗತ ಮಾಡಿಕೊಂಡಿದ್ದರು.
ವ್ಯಾಕರಣ, ತತ್ವಶಾಸ್ತç ಅಧ್ಯಯನಗಳನ್ನು ಮಾಡಿದ್ದರು. ಇಷ್ಟೆಲ್ಲಾ ಪ್ರಾವಿಣ್ಯತೆ ಪಡೆದ ಫ್ಲೊರೆನ್ಸ್ ತನ್ನ ತಂದೆಗೆ ನಾನು ನೊಂದವರಿಗೆ, ರೋಗಿಗಳಿಗೆ ಸೇವೆ ಮಾಡುವೆ ಹಾಗೂ ನರ್ಸ್ ಆಗುವೆ ಎಂದರು. ಇದನ್ನು ಕೇಳಿದ ಪೋಷಕರು ಆಶ್ಚರ್ಯಚಕಿತರಾದರು. ಆದರೆ ಅವರು ತನ್ನ ನಿರ್ಧಾರ ಬದಲಿಸಲಿಲ್ಲ. ಫ್ಲೊರೆನ್ಸ್ ತನ್ನ ಕಲಿಕೆಯನ್ನು ಲಂಡನ್ನ ಸೈಂಟ್ ಥೋಮಸ್ ಸ್ಕೂಲ್ ಆಫ್ ನರ್ಸಿಂಗ್ನಲ್ಲಿ ‘ಖಿeಚಿm ಈಡಿoಟಿಣ ಐiಟಿe Wಚಿಡಿಡಿioಡಿs’ ಭವಿಷ್ಯದ ಆರೋಗ್ಯ ರಕ್ಷೆಗೆ ಒಂದು ಸೃಷ್ಟಿ, ಈ ರೀತಿ ಈ ವರ್ಷದ ಘೋಷಣೆ, ‘ಅಚಿಡಿiಟಿg ಈoಡಿ ಓuಡಿses - sಣಡಿeಟಿgಣheಟಿs ಇಛಿoಟಿomies.
ಫ್ಲೊರೆನ್ಸ್ ನೈಟಿಂಗೆಲ್ ಒಂದು ವಾತ್ಸಲ್ಯಮಯಿ, ಮಾತೃ ಸ್ವರೂಪಿ, ಆ ಮಹಾ ತ್ಯಾಗಿಯ ಹುಟ್ಟುಹಬ್ಬವೇ ‘ದಾದಿಯರ ದಿನ’. ಫ್ಲೊರೆನ್ಸ್ ಹುಟ್ಟಿದ್ದು ೧೮೨೦ ಮೇ ೧೨ ರಂದು ಇಟಲಿ ದೇಶದಲ್ಲಿ, ಇವರ ತಂದೆ ವಿಲಿಯಮ್ಸ್ ಎಡ್ವರ್ಡ್. ಇವರು ಅವರ ತಂದೆ - ತಾಯಿಗೆ ೨ನೇ ಮಗಳಾಗಿ ಜನಿಸಿದರು.
ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ, ದೀನದಲಿತರು, ಬಡವರು, ಭಿಕ್ಷÄಕರನ್ನು ಕಂಡರೆ ಮರುಗುತ್ತಿದ್ದ ಫ್ಲೊರೆನ್ಸ್ ಶ್ರೀಮಂತ ಜೀವನ ನಡೆಸಲೇ ಇಲ್ಲ. ಅವರು ಜೀವನದ ಮೌಲ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರು.
ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಫ್ಲೊರೆನ್ಸ್ ಗ್ರೀಕ್ ಭಾಷೆಯ ಸಾಹಿತ್ಯದಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಅದರ ಜೊತೆಗೆ ಇಂಗ್ಲೀಷ್, ಫ್ರೆಂಚ್, ಜರ್ಮನಿ ಮತ್ತು ಇಟಲಿ ಭಾಷೆಗಳ ಗ್ರಂಥಗಳನ್ನು ಕೂಡ ಕರಗತ ಮಾಡಿಕೊಂಡಿದ್ದರು.
ವ್ಯಾಕರಣ, ತತ್ವಶಾಸ್ತç ಅಧ್ಯಯನಗಳನ್ನು ಮಾಡಿದ್ದರು. ಇಷ್ಟೆಲ್ಲಾ ಪ್ರಾವಿಣ್ಯತೆ ಪಡೆದ ಫ್ಲೊರೆನ್ಸ್ ತನ್ನ ತಂದೆಗೆ ನಾನು ನೊಂದವರಿಗೆ, ರೋಗಿಗಳಿಗೆ ಸೇವೆ ಮಾಡುವೆ ಹಾಗೂ ನರ್ಸ್ ಆಗುವೆ ಎಂದರು. ಇದನ್ನು ಕೇಳಿದ ಪೋಷಕರು ಆಶ್ಚರ್ಯಚಕಿತರಾದರು. ಆದರೆ ಅವರು ತನ್ನ ನಿರ್ಧಾರ ಬದಲಿಸಲಿಲ್ಲ. ಫ್ಲೊರೆನ್ಸ್ ತನ್ನ ಕಲಿಕೆಯನ್ನು ಲಂಡನ್ನ ಸೈಂಟ್ ಥೋಮಸ್ ಸ್ಕೂಲ್ ಆಫ್ ನರ್ಸಿಂಗ್ನಲ್ಲಿ ವೈಜ್ಞಾನಿಕವಾಗಿ ಪ್ರಾರಂಭಿಸಿದರು. ಮೊದಲ ವೃತ್ತಿ ಜೀವನವನ್ನು ‘ಸಾಲಿಬರ್’ನಲ್ಲಿ ಪ್ರಾರಂಭಿಸಿದರು.
೧೮೪೩ರಲ್ಲಿ ವೃತ್ತಿಜೀವನ ಪ್ರಾರಂಭಿಸಿ ಜರ್ಮನಿ ಮತ್ತು ಲಂಡನ್ನಲ್ಲಿ ಸೇವೆ ಸಲ್ಲಿಸಿದರು. ೧೮೫೪ನೇ ಇಸವಿಯಲ್ಲಿ ಜರ್ಮನ್ನಲ್ಲಿ ಯುದ್ಧ ಪ್ರಾರಂಭವಾಗುತ್ತದೆ. ಆಗ ಅಲ್ಲಿಯ ಸೇನಾ ಆಸ್ಪತ್ರೆಯ ಮುಖ್ಯ ಶುಶ್ರೂಷಕಿಯಾಗಿ ಸಾವಿರಾರು ರೋಗಿಗಳ ಸೇವೆಗೆ ತೊಡಗುತ್ತಾರೆ. ದಾದಿಯರ ಭೀಕರ ಕೊರತೆಯಿಂದಾದ ಸಂದರ್ಭದಲ್ಲಿ ಫ್ಲೊರೆನ್ಸ್ ಯುದ್ಧದ ಸಮಯದಲ್ಲಿ ಆಕೆಗೆ ಸೈನಿಕರ ಶುಶ್ರೂಷೆ ಮಾಡುವ ಜವಾಬ್ದಾರಿ ಬೀಳುತ್ತದೆ. ಅಲ್ಲಿ ಅವರು ರಾತ್ರಿ - ಹಗಲೆನ್ನದೆ ಸೇವೆ ಮಾಡಿ, ರಾತ್ರಿಯೂ ಕೈಯಲ್ಲಿ ದೀಪವನ್ನು ಹಿಡಿದು ಶುಶ್ರೂಷೆ ಮಾಡುತ್ತಾರೆ. ಹಾಗಾಗಿ ಇವರನ್ನು ‘ದ ಲೇಡಿ ವಿತ್ ಲ್ಯಾಂಪ್’ ‘ಖಿhe ಐಚಿಜಥಿ Wiಣh ಐಚಿmಠಿ’ ಎಂದು ಕರೆಯುತ್ತಿದ್ದರು.
ನರ್ಸಿಂಗ್ ವೃತ್ತಿಗೆ ಒಂದು ಗೌರವವನ್ನು ತಂದುಕೊಟ್ಟAತಹ ಮಹಾತ್ಯಾಗಿ, ಫ್ಲೊರೆನ್ಸ್ ಅವರ ಸೇವಾ ಮನೋಭಾವ ಆಗಿನ ಕಾಲದಲ್ಲಿ ವೈದ್ಯಕೀಯ ಜಗತ್ತಿನಲ್ಲಿ ಒಂದು ವಿಶೇಷ ಸ್ಥಾನಮಾನವನ್ನು ತಂದುಕೊಟ್ಟಿತು.
ಇವರಿಗೆ ೧೮೨೩ ರಲ್ಲಿ ರಾಹಿ ವಿಕ್ಟೋರಿಯ ರಾಯಲ್ ರೇಜ್ ಕ್ರೋಸ್ ಅವಾರ್ಡ್, ೧೯೦೭ ರಲ್ಲಿ ಆರ್ಡ್ರ್ ಆಫ್ ಮೆರಿಟ್ ಪುರಸ್ಕಾರ, ಲೇಡಿ ವಿತ್ ಲ್ಯಾಂಪ್ ಮುಂತಾದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ದೊರೆಕಿವೆ. ಇವರು ಆರೋಗ್ಯ, ಶುಚಿತ್ವ, ಶುಶ್ರೂಷೆಯ ಬಗ್ಗೆ ೨೦೦ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ೧೯೧೦ ಆಗಸ್ಟ್ ೧೩ ರಂದು ತನ್ನ ೯೦ನೇ ವಯಸ್ಸಿನಲ್ಲಿ ದೈವಾಧೀನರಾಗುತ್ತಾರೆ. ಇವರ ಸೇವೆ, ಅಭಿಲಾಷೆ, ಮನುಕುಲಕ್ಕೆ ಇರುವ ಕಳಕಳಿ ಎಲ್ಲಾ ದಾದಿಯರಿಗೂ ಮಾರ್ಗದರ್ಶನವಾಗಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ದಾದಿಯರಿಗೂ ಅವರ ಸೇವೆಯನ್ನು ಗುರುತಿಸಿಕೊಡುವಂತ ಅತ್ಯುನ್ನತ ಪುರಸ್ಕಾರ ‘ಈಟoಡಿಚಿಟಿಛಿe ಓighiಟಿgಚಿಟe’ ಪ್ರಶಸ್ತಿಯನ್ನು ವೃತ್ತಿಯಲ್ಲಿ ಅಸಾಧಾರಣ ಸೇವೆ ನೀಡುವವರಿಗೆ ಪ್ರತಿವರ್ಷ ಸರಕಾರದಿಂದ ಕೊಡಲಾಗುತ್ತದೆ. ಎಲ್ಲಾ ದಾದಿಯರಿಗೂ ವಿಶ್ವ ದಾದಿಯರ ದಿನದ ಶುಭಾಶಯಗಳು.
- ಚಿತ್ರಾ ಆರ್ಯನ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ.