ಮಡಿಕೇರಿ, ಮೇ. ೧೦: ಕೊಡಗು ಜಿಲ್ಲಾ ಬಂಟರ ಸಂಘ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಮಡಿಕೇರಿಯಲ್ಲಿ ಬಂಟೆರೆನ ವಾರ್ಷಿಕ ಸಮ್ಮಿಲನಕ್ಕೆ ಚಾಲನೆ ದೊರೆಯಿತು.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಸದಾನಂದ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆಯನ್ನು ಕೊಡಗು ಬಂಟರ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಿರೀಶ್ ರೈ, ಗಾಳಿಬೀಡು ನಿವೃತ್ತ ಯೋಧ ಬಾಬು ಪ್ರಸಾದ್ ರೈ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ, ವಿಷ್ಮ ರೆಸಾರ್ಟ್ ಮಾಲೀಕ ನಿತಿನ್ ಶೆಟ್ಟಿ, ಬಂಟರ ಸಂಘದ ನಗರ ಕಾರ್ಯದರ್ಶಿ ಸುಜಾತ ಗಣೇಶ್ ರೈ, ನಿಕಟಪೂರ್ವ ಅಧ್ಯಕ್ಷೆ ಸೌಮ್ಯ ಸದಾಶಿವ ರೈ, ಹಾಗೂ ಕೊಡಗು ಬಂಟರ ಭವನ ಟ್ರಸ್ಟ್ ಖಜಾಂಚಿ ಬಾಲಕೃಷ್ಣ ರೈ,ಬಂಟರ ಸಂಘದ ಗೌರವ ಸಲಹೆಗಾರ ಕೊರಗಪ್ಪ ರೈ,ಯುವ ಬಂಟ್ಸ್ ಅಸೋಸಿಯೇಷನ್ನ ಕಾರ್ಯದರ್ಶಿ ನಿತಿನ್ ರೈ, ಉಪಾಧ್ಯಕ್ಷರಾದ ಮಿಥುನ್ ರೈ, ಸುಜಿತ್ ಶೆಟ್ಟಿ, ಖಜಾಂಚಿ ಶಿವಪ್ರಸಾದ್ ರೈ, ಸದಸ್ಯರಾದ ಕಿಶೋರ್ ರೈ ಹಾಗೂ ಚರಣ್ ರೈ ಪಾಲ್ಗೊಂಡಿದ್ದರು.ವಾರ್ಷಿಕ ಸಮ್ಮಿಲನ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ರೀಡಾಕೂಟಗಳು ರಕ್ತದಾನ ಶಿಬಿರ ನಡೆಯಿತು.