ಮಡಿಕೇರಿ, ಮೇ ೯: ಕೊಡಗು ಜಿಲ್ಲೆಯ ಸುಂಟಿಕೊಪ್ಪ-ಮಾದಾಪುರ ಸಮೀಪವಿರುವ ಝಿಯಾರತ್ ಕೇಂದ್ರ, ಗರಗಂದೂರು-ಹರದೂರು, ಕಾಜೂರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶುಹುದಾಕಳ್ ರವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರಗಂದೂರು ಮಸ್ಜಿದುನ್ನೂರ್ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಎಂ. ಅಬ್ದುಲ್ಲಾ ವಹಿಸಿ ಧ್ವಜಾರೋಹಣ ನೆರವೇರಿಸಿದರು. ಮಹಲ್ ಖತೀಬರಾದ ಅಬ್ದುಲ್ ಹಕೀಂ ಅಲ್ ಅಹ್ ಸನಿ ಝಿಯಾರತ್ ನೇತೃತ್ವ ವಹಿಸಿ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ಮಹಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಝೀಜ್ ಎ.ಎಂ, ಖಜಾಂಜಿ ಝಕರಿಯಾ, ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ, ಸ್ವಲಾತ್ ಕಮಿಟಿ ಅಧ್ಯಕ್ಷ ರಜಾಕ್, ಸುಲೈಮಾನ್ ಸಖಾಫಿ, ಯಾಕುಬ್, ಉಮ್ಮರ್ ಮತ್ತಿತರರು ಹಾಜರಿದ್ದರು.