ಐಗೂರು, ಮೇ ೯: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ಚಂಗಪ್ಪ ಮತ್ತು ಆಶಾ ದಂಪತಿಯ ಪುತ್ರ ಕಾಜೂರು ಸರಕಾರಿ ಶಾಲೆಯ ವಿದ್ಯಾರ್ಥಿ ಕೌಶಿಕ್ ಕುಮಾರ್ ಇತ್ತೀಚೆಗೆ ರಾಷ್ಟçಮಟ್ಟದ ಕಂಗ್ ಫೂ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದು, ಕೌಶಿಕ್ ಕುಮಾರ್‌ನನ್ನು ಹರದೂರು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಭೋಜಮ್ಮ, ಸದಸ್ಯರಾದ ಉಷಾ ಪಿ.ಟಿ., ಸಲೀಂ ಹೊಸತೋಟ, ಪಿ.ಡಿ.ಓ. ಪೂರ್ಣಿಮಾ, ಕಾರ್ಯದರ್ಶಿ ನವ್ಯ ಮತ್ತು ಸಿಬ್ಬಂದಿ ಹಾಜರಿದ್ದರು.