ಗೋಣಿಕೊಪ್ಪಲು, ಮೇ.೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೨ನೇ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಅಮ್ಮಾಟಂಡ ಹಾಗೂ ಗೀಜಿಗಂಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಅಮ್ಮಾಟಂಡ ತಂಡವು ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೯೩ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ನಿಗದಿತ ರನ್‌ಅನ್ನು ಭೇದಿಸುವ ಪ್ರಯತ್ನ ಮಾಡಿದ ಗೀಜಿಗಂಡ ತಂಡ ೪ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಕರವಟ್ಟಿರ ಹಾಗೂ ಬಯವಂಡ ತಂಡದ ನಡುವೆ ನಡೆಯಿತು. ಬಯವಂಡ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ೫ ವಿಕೆಟ್ ಕಳೆದುಕೊಂಡು ೩೩ ರನ್ ಗಳಿಸಿ, ಎದುರಾಳಿ ತಂಡಕ್ಕೆ ಸವಾಲು ನೀಡಿತು. ಉತ್ತಮ ಬ್ಯಾಟಿಂಗ್ ಆರಂಭಿಸಿದ ಕರವಟ್ಟಿರ ತಂಡವು ೧.೫ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸುವ ಮೂಲಕ ಬಯವಂಡ ತಂಡವನ್ನು ಸೋಲಿಸಿ, ಗೆಲುವಿನ ನಗೆ ಬೀರಿತು. ಮೂರನೇ ಪಂದ್ಯವು ಕಡೆಮಾಡ ಹಾಗೂ ಸಣ್ಣುವಂಡ ತಂಡದ ನಡುವೆ ನಡೆಯಿತು. ಸಣ್ಣುವಂಡ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ೩ ವಿಕೆಟ್ ಕಳೆದುಕೊಂಡು ೬೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ಕಡೆಮಾಡ ತಂಡವು ೩ ವಿಕೆಟ್ ಕಳೆದುಕೊಂಡು ೪೫ ರನ್ ಸಂಪಾದಿಸಿ ಸೋಲನ್ನು ಅನುಭವಿಸಿತು. ನಾಲ್ಕನೇ ಪಂದ್ಯವು ಚೇಂದAಡ ಹಾಗೂ ನಂದಿರ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಬಿಸಿದ ನಂದಿರ ತಂಡವು ೩ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಚೇಂದAಡ ತಂಡವು ೬ ವಿಕೆಟ್ ಕಳೆದುಕೊಂಡು ೫೯ ಸಂಪಾದಿಸಿ ಸೋಲನ್ನು ಅನುಭವಿಸಿತು.
ಐದನೇ ಪಂದ್ಯವು ಬೊಟ್ಟೋಳಂಡ ಹಾಗೂ ಅಳಮೇಂಗಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಅಳಮೇಂಗಡ ತಂಡವು ೨ ವಿಕೆಟ್ ಕಳೆದುಕೊಂಡು ೧೦೪ ರನ್ ಗಳಿಸಿ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿತು. ಬೊಟ್ಟೋಳಂಡ ತಂಡವು ೯ ವಿಕೆಟ್ ಕಳೆದುಕೊಂಡು ೩೬ ರನ್ ಸಂಪಾದಿಸಿ ಸೋಲನ್ನು ಅನುಭವಿಸಿತು. ಆರನೇ ಪಂದ್ಯವು ಚನ್ನಪಂಡ ತಂಡ ಹಾಗೂ ಬಲ್ಲಂಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚನ್ನಪಂಡ ತಂಡ ೫ ವಿಕೆಟ್ ಕಳೆದುಕೊಂಡು ೪೯ ರನ್ ಸಂಪಾದಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಬಲ್ಲಂಡ ತಂಡವು ಬ್ಯಾಟಿಂಗ್ ಆರಂಭಿಸಿ ೪.೪ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.