ಗೋಣಿಕೊಪ್ಪಲು, ಮೇ ೭: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಮಹಿಳಾ ಕ್ರಿಕೆಟ್‌ನಲ್ಲಿ ೪ ಮಹಿಳಾ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಚೊಟ್ಟೆಯಂಡಮಾಡ ಹಾಗೂ ಅಡ್ಡೇಂಗಡ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಚೊಟ್ಟೆಯಂಡಮಾಡ ೧ ವಿಕೆಟ್ ಕಳೆದುಕೊಂಡು ೯೮ ರನ್ ಬಾರಿಸಿತು. ಅಡ್ಡೇಂಗಡ ೨ ವಿಕೆಟ್ ಕಳೆದುಕೊಂಡು ೪೯ ರನ್ ಸಂಪಾದಿಸಿ ಸೋಲು ಅನುಭವಿಸಿತು.
ಮುಕ್ಕಾಟಿರ (ಹರಿಹರ) ಹಾಗೂ ಚಿರಿಯಪಂಡ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ಜಯ ಗಳಿಸಿತು. ಮುಕ್ಕಾಟಿರ ೭೦ ರನ್ ಗಳಿಸಿತು. ಚಿರಿಯಪಂಡ ೨ ವಿಕೆಟ್ ಕಳೆದುಕೊಂಡು ೩೮ ರನ್ ಕಲೆಹಾಕಿ ಸೋಲು ಅನುಭವಿಸಿತು.
ಕಡೇಮಾಡ ಹಾಗೂ ಕರ್ತಮಾಡ (ಬಿರುನಾಣಿ) ನಡುವಿನ ಪಂದ್ಯದಲ್ಲಿ ಕಡೇಮಾಡ ೧ ವಿಕೆಟ್ ಕಳೆದುಕೊಂಡು ೬೪ ರನ್ ಗಳಿಸಿತು.
ಕರ್ತಮಾಡ ೪ ವಿಕೆಟ್ ಕಳೆದುಕೊಂಡು ೪೧ ರನ್‌ಗಳಿಸಿ ಪಾರಾಭವಗೊಂಡಿತು. ಕಟ್ಟೆರ ಹಾಗೂ ಬಾಚಿನಾಡಂಡ ನಡುವಿನ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಟ್ಟೆರ ೨ ವಿಕೆಟ್ ಕಳೆದುಕೊಂಡು ೫೪ ರನ್ ಗಳಿಸಿತು.
ಬಾಚಿನಾಡಂಡ ೫ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸುವ ಮೂಲಕ ಸೋಲನುಭವಿಸಿತು.