ಮಡಿಕೇರಿ, ಮೇ ೭: ಭಾರತೀಯ ಸೇನಾಪಡೆಗಳು ಬುಧವಾರ ನಸುಕಿನ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಶಿಬಿರಗಳ ಮೇಲೆ ಧಾಳಿ ನಡೆಸಿ ೮೦ಕ್ಕೂ ಅಧಿಕ ಉಗ್ರರ ಬೇಟೆ ಆಡಿವೆ.

ಬುಧವಾರ ನಸುಕಿನ ವೇಳೆ ಭಾರತೀಯ ಸೇನಾಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ್' ನ ಭಾಗವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆಸಲಾದ ನಿಖರ ಕ್ಷಿಪಣಿ ದಾಳಿಯ ವೀಡಿಯೋ ತುಣುಕುಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

ಸವಾಯಿ ನಲ್ಲಾ, ಸರ್ಜಾಲ್, ಮುರಿಡೈ, ಕೋಟ್ಲಿ, ಕೊಟ್ಲಿ ಗುಲ್ಪುರ್, ಮೆಹಮೂನಾ ಜೋಯಾ, ಭಿಂಬರ್ ಮತ್ತು ಬಹವಾಲ್ಪುರ್ ಸೇರಿದಂತೆ ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳನ್ನು ಹೊಡೆದುರುಳಿಸಲಾಗಿದೆ.

‘ಸಿಂಧೂರ್' ಎಂಬ ಹೆಸರಿನ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತçಪಡೆಗಳು ಅತ್ಯಾಧುನಿಕ ರಫೆಲ್ ವಿಮಾನವನ್ನು ಬಳಸಿ ಆತ್ಮಾಹುತಿ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿದವು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ನಡೆದ ಸ್ಫೋಟಗಳ ವರದಿಗಳು ‘ಆಪರೇಷನ್ ಸಿಂಧೂರ್' ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆಯ ಪರಿಣಾಮ ವಾಗಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದ ನಂತರ, ಭಾರತೀಯ ಸೇನೆಯು ‘ಎಕ್ಸ್’ ಪೋಸ್ಟ್ನಲ್ಲಿ "ನ್ಯಾಯ ಸಲ್ಲಿಸಲಾಗಿದೆ. ಜೈ ಹಿಂದ್!" ಎಂದು ಹೇಳಿದೆ. ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ದಾಳಿಯ ವೀಡಿಯೋಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ನಾಶಪಡಿಸಲಾಗಿದೆ.

ಉಗ್ರ ಮಸೂದ್ ಅಜರ್ ಕುಟುಂಬವೇ ನಾಶ

ಪಾಕಿಸ್ತಾನದ ೯ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ, ಮುಜಫ ರಾಬಾದ್, ಮುರ್ಡಿಕೆ, ಕೋಟ್ಲಿ ಯಲ್ಲಿರುವ ಭಯೋತ್ಪಾದಕ ಅಡಗುತಾಣಗಳನ್ನು ಭಾರತೀಯ ಸೇನೆ ಕ್ಷಿಪಣಿಗಳನ್ನು ದಾಳಿ ಮೂಲಕ ನಾಶಪಡಿಸಿದೆ. ಪೆಹಲ್ಗಾಮ್ ದಾಳಿಯ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಕುಖ್ಯಾತ ಭಯೋತ್ಪಾದಕ ಮಸೂದ್ ಅಜರ್‌ನ ಕುಟುಂಬವು ನಾಶವಾಗಿದೆ ಎಂದು ತಿಳಿದು ಬಂದಿದ್ದು, ಆತನ ಕುಟುಂಬ ೧೪ ಮಂದಿ ಸದಸ್ಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಭಯೋತ್ಪಾದಕನನ್ನು ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿತ್ತು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)

ದಾಳಿ ಹಿನ್ನೆಲೆ

ಕಳೆದ ಏಪ್ರಿಲ್ ೨೨ ರಂದು ಪಾಕ್ ಬೆಂಬಲಿತ ಲಷ್ಕರ್ ತೊಯ್ಬಾದ ೬ ಉಗ್ರರು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ವಿಹರಿಸುತಿದ್ದ ಪ್ರವಾಸಿಗರ ಮೇಲೆ ಸ್ಥಳದಲ್ಲಿ ಬರ್ಬರ ದಾಳಿ ನಡೆಸಿ ೨೬ ಪುರುಷರನ್ನು ಕುಟುಂಬದವರ ಎದುರೇ ಹತ್ಯೆ ಮಾಡಿದರು. ತಿಂಗಳಿನಿAದ ಪೂರ್ವ ತಯಾರಿ ನಡೆಸಿದ್ದ ಉಗ್ರರು ಧರ್ಮ ಕೇಳಿ ಹಿಂದೂಗಳನ್ನೇ ಗುರಿಯಾಗಿಸಿ ಹತ್ಯೆಗೈದ ಕೃತ್ಯಕ್ಕೆ ದೇಶದ ಕೋಟ್ಯಂತರ ಜನತೆ ಕಂಬನಿ ಮಿಡಿದರೆ, ದೇಶದ ಪ್ರಧಾನಿ ಪ್ರತಿಕಾರದ ಕಟುಮಾತನ್ನು ವಿಶ್ವದ ಮುಂದೆ ತೆರೆದಿಟ್ಟಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಪ್ರವಾಸವನ್ನು ಮೊಟಕುಗೊಳಿಸಿ ದೆಹಲಿಗೆ ಧಾವಿಸಿ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿ ದೇಶದ ಜನತೆಗೆ ಧಾಳಿಗೆ ಸೂಕ್ತ ಉತ್ತರ ನೀಡುವ ಭರವಸೆ ನೀಡಿದ್ದರು. ನಂತರ ಪಾಕಿಸ್ಥಾನಕ್ಕೆ ಹರಿಯುವ ನದಿಗಳ ನೀರನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಬೆನ್ನಲ್ಲೇ ಪಾಕಿಸ್ಥಾನದ ಮತಾಂಧತೆ ಹರಡುವ ಭಾರತದ ಮೇಲೆ ದ್ವೇಷ ಕಾರುವ ಎಕ್ಸ್, ಫೇಸ್‌ಬುಕ್ ಖಾತೆಗಳನ್ನು ಬಂದ್ ಮಾಡಿತು. ವಾಣಿಜ್ಯ ವಹಿವಾಟು, ವಿಮಾನ ಹಾರಾಟ, ಹಡಗು ಸಾಗಾಟವನ್ನೂ ನಿಲ್ಲಿಸಲಾಯಿತು.

ಕಳೆದ ಬಾರಿ ಪುಲ್ವಾಮಾದಲ್ಲಿ ೪೦ ಭಾರತೀಯ ಸೈನಿಕರ ಹತ್ಯೆ ನಡೆಸಿದ್ದ ಪಾಕಿಸ್ಥಾನ ಸಂತೋಷ ಆಚರಿಸುತ್ತಿದ್ದ ಬೆನ್ನಲ್ಲೇ ಭಾರತೀಯ ಸೇನೆ ಬಾಲಾಕೋಟ್‌ನಲ್ಲಿ ೨೦೧೯ರಲ್ಲಿ ಉಗ್ರ ಶಿಬಿರಗಳ ಮೇಲೆ ಧಾಳಿ ನಡೆಸಿ ೫೦ಕ್ಕೂ ಅಧಿಕ ಉಗ್ರರನ್ನು ಬೇಟೆ ಆಡಿತ್ತು. ೧೯೭೧ ರ ನಂತರ ಭಾರತೀಯ ಸೇನೆ ಗಡಿ ದಾಟಿ ಧಾಳಿ ನಡೆಸಿದ್ದು ಅದೇ ಮೊದಲಾಗಿತ್ತು. ಇದರೊಂದಿಗೆ ಈ ಬಾರಿ ಪಾಕಿಸ್ಥಾನ ಭಾರತದ ಸೇಡನ್ನು ಎದುರಿಸಲಿಕ್ಕಾಗಿಯೇ ತನ್ನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಂಡು ಗಡಿ ದಾಟಿದ ಕೂಡಲೇ ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲು ಕಾಯತೊಡಗಿತ್ತು. ಜೊತೆಗೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ಉಗ್ರಗಾಮಿ ಶಿಬಿರಗಳು ಮತ್ತು ಮದರಸಾಗಳಿಗೆ ೧೦ ದಿನ ರಜೆ ನೀಡಿ ಭಯೋತ್ಪಾದಕರನ್ನೆಲ್ಲಾ ಸುರಕ್ಷಿತ ಸ್ಥಳಗಳಿಗೆ ರವಾನಿಸಿತ್ತು. ದಾಳಿ ನಡೆಸಿ ೧೦-೧೪ ದಿನ ಆದರೂ ಮಿಲಿಟರಿ ದಾಳಿ ನಡೆಸಿದರೆ ಭಾರತ ಸರ್ಕಾರ ನೀರು ಬಂದ್, ಟ್ವಿಟರ್ ಖಾತೆ ಬಂದ್ ಮಾಡಿ ಸುಮ್ಮನಾಗಿದೆ ಎಂದು ಪಾಕ್ ಒಳಗೊಳಗೇ ಖುಷಿಯಾಗಿ ನೆಮ್ಮದಿಯಾಗಿತ್ತು. ಮೇ ೬ನೇ ತಾರೀಖಿನಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ಪಾಕಿಸ್ಥಾನದ ಆಕ್ರಮಿತ ಕಾಶ್ಮೀರದ ಹಾಗೂ ಪಾಕಿಸ್ಥಾನದ ೯ ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಿ ಸುಮಾರು ೮೦ಕ್ಕೂ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿ ದೇಶದ ಜನತೆಗೆ ಧಾಳಿಗೆ ಸೂಕ್ತ ಉತ್ತರ ನೀಡುವ ಭರವಸೆ ನೀಡಿದ್ದರು. ನಂತರ ಪಾಕಿಸ್ಥಾನಕ್ಕೆ ಹರಿಯುವ ನದಿಗಳ ನೀರನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಬೆನ್ನಲ್ಲೇ ಪಾಕಿಸ್ಥಾನದ ಮತಾಂಧತೆ ಹರಡುವ ಭಾರತದ ಮೇಲೆ ದ್ವೇಷ ಕಾರುವ ಎಕ್ಸ್, ಫೇಸ್‌ಬುಕ್ ಖಾತೆಗಳನ್ನು ಬಂದ್ ಮಾಡಿತು. ವಾಣಿಜ್ಯ ವಹಿವಾಟು, ವಿಮಾನ ಹಾರಾಟ, ಹಡಗು ಸಾಗಾಟವನ್ನೂ ನಿಲ್ಲಿಸಲಾಯಿತು.

ಕಳೆದ ಬಾರಿ ಪುಲ್ವಾಮಾದಲ್ಲಿ ೪೦ ಭಾರತೀಯ ಸೈನಿಕರ ಹತ್ಯೆ ನಡೆಸಿದ್ದ ಪಾಕಿಸ್ಥಾನ ಸಂತೋಷ ಆಚರಿಸುತ್ತಿದ್ದ ಬೆನ್ನಲ್ಲೇ ಭಾರತೀಯ ಸೇನೆ ಬಾಲಾಕೋಟ್‌ನಲ್ಲಿ ೨೦೧೯ರಲ್ಲಿ ಉಗ್ರ ಶಿಬಿರಗಳ ಮೇಲೆ ಧಾಳಿ ನಡೆಸಿ ೫೦ಕ್ಕೂ ಅಧಿಕ ಉಗ್ರರನ್ನು ಬೇಟೆ ಆಡಿತ್ತು. ೧೯೭೧ ರ ನಂತರ ಭಾರತೀಯ ಸೇನೆ ಗಡಿ ದಾಟಿ ಧಾಳಿ ನಡೆಸಿದ್ದು ಅದೇ ಮೊದಲಾಗಿತ್ತು. ಇದರೊಂದಿಗೆ ಈ ಬಾರಿ ಪಾಕಿಸ್ಥಾನ ಭಾರತದ ಸೇಡನ್ನು ಎದುರಿಸಲಿಕ್ಕಾಗಿಯೇ ತನ್ನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಂಡು ಗಡಿ ದಾಟಿದ ಕೂಡಲೇ ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲು ಕಾಯತೊಡಗಿತ್ತು. ಜೊತೆಗೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ಉಗ್ರಗಾಮಿ ಶಿಬಿರಗಳು ಮತ್ತು ಮದರಸಾಗಳಿಗೆ ೧೦ ದಿನ ರಜೆ ನೀಡಿ ಭಯೋತ್ಪಾದಕರನ್ನೆಲ್ಲಾ ಸುರಕ್ಷಿತ ಸ್ಥಳಗಳಿಗೆ ರವಾನಿಸಿತ್ತು. ದಾಳಿ ನಡೆಸಿ ೧೦-೧೪ ದಿನ ಆದರೂ ಮಿಲಿಟರಿ ದಾಳಿ ನಡೆಸಿದರೆ ಭಾರತ ಸರ್ಕಾರ ನೀರು ಬಂದ್, ಟ್ವಿಟರ್ ಖಾತೆ ಬಂದ್ ಮಾಡಿ ಸುಮ್ಮನಾಗಿದೆ ಎಂದು ಪಾಕ್ ಒಳಗೊಳಗೇ ಖುಷಿಯಾಗಿ ನೆಮ್ಮದಿಯಾಗಿತ್ತು. ಮೇ ೬ನೇ ತಾರೀಖಿನಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ಪಾಕಿಸ್ಥಾನದ ಆಕ್ರಮಿತ ಕಾಶ್ಮೀರದ ಹಾಗೂ ಪಾಕಿಸ್ಥಾನದ ೯ ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಿ ಸುಮಾರು ೮೦ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು ಸೇಡು ತೀರಿಸಿಕೊಂಡಿದೆ.

ಬುಧವಾರ ದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಕುರಿತು ಮಾತನಾಡಿದರು.

ಇದುವರೆಗೆ ಭಯೋತ್ಪಾದಕ ದಾಳಿಯಿಂದ ದೇಶಕ್ಕಾದ ಸಾವು ನೋವಿನ ವೀಡಿಯೋ ಬಿಡುಗಡೆ ಮಾಡಲಾಯಿತು. ಕಳೆದ ಹಲವು ವರ್ಷಗಳಲ್ಲಿ ಪಾಕಿಸ್ತಾನದ ಭಯೋತ್ಪಾದಕ ದಾಳಿಗೆ ೩೫೦ಕ್ಕೂ ಹೆಚ್ಚು ಭಾರತೀಯ ನಾಗರಿಕರು ಬಲಿಯಾಗಿದ್ದಾರೆ, ೮೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ, ೬೦೦ಕ್ಕೂ ಹೆಚ್ಚು ಭದ್ರತಾ ಪಡೆಯ ಯೋಧರು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ದೇಶವನ್ನು ರಕ್ಷಿಸುವ ಕಾಯಕದಲ್ಲಿ ೧೪೦೦ಕ್ಕೂ ಹೆಚ್ಚು ಜನ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿ ಕತ್ತಲಲ್ಲಿ ನಡೆದ ಆಪರೇಷನ್ ಸಿಂಧೂರ್ ಕುರಿತು ವಿವರಿಸಿದರು.

ಕರ್ನಲ್ ಸೋಫಿಯಾ ಖುರೇಷಿ, ಭಾರತದ ವಾಯುಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಮಾತನಾಡಿ, ಪಾಕಿಸ್ತಾನದ ಒಳಗೆ ೧೨ ರಿಂದ ೧೮ ಕಿಲೋ ಮೀಟರ್ ದೂರದಲ್ಲಿರುವ ಉಗ್ರರ ಕ್ಯಾಂಪ್‌ಗಳ ಮೇಲೆ ಸೇನೆಯ ದಾಳಿ ನಡೆಸಿ ಧ್ವಂಸಗೊಳಿಸಿದ್ದನ್ನು ವೀಡಿಯೋದಲ್ಲಿ ತೋರಿಸಿದರು. ಈ ಜಾಗಗಳಿಂದಲೇ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಯೋಜಿಸಿ ಕೆಲಸ ಮಾಡಬಹುದಾಗಿದೆ, ಬಹಳ ಜಾಗರೂಕವಾಗಿ ಕೇವಲ ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಈ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು, ನಾಗರಿಕರನ್ನು ಗುರಿಪಡಿಸಲಾಗಿಲ್ಲ ಎಂದು ಹೇಳಿದರು.

೯ ನೆಲೆಗಳನ್ನು ಟಾರ್ಗೆಟ್ ಮಾಡಿ ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ನಾಗರಿಕರಿಗೆ ಮತ್ತು ಮೂಲ ಸೌಲಭ್ಯಗಳಿಗೆ ಹಾನಿಯಾಗದಂತೆ ಈ ಸ್ಥಳಗಳನ್ನು ಆಯ್ಕೆ ಮಾಡಲಾಯಿತು ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿಯಿತ್ತರು.

ಸಿಂಧೂರ್ ಹೆಸರೇಕೆ?

ಪಾಕಿಸ್ತಾನದಲ್ಲಿ ಭಯೋತ್ಪಾದಕರ ನೆಲೆಗೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರನ್ನು ಆಯ್ಕೆ ಮಾಡಿದ್ದು, ಯಾರು ಎಂಬುದು ಅನೇಕರ ಕುತೂಹಲ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಂದು ಪೆಹಲ್ಗಾಮ್ ದಾಳಿ ಮೂಲಕ ೨೬ ಹಿಂದೂ ಮಹಿಳೆಯರ ಸಿಂಧೂರ ಅಳಿಸಲಾಗಿದೆ. ಆ ಸಿಂಧೂರಕ್ಕೆ ಗೌರವ ನೀಡಲು ಈ ಕಾರ್ಯಾಚರಣೆಗೆ ಸಿಂಧೂರ್ ಹೆಸರನ್ನೇ ಮೋದಿ ಇಟ್ಟಿದ್ದರು.

ಸಿಂಧೂರ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆಯ ಸಂಕೇತವಾಗಿದೆ. ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುತ್ತದೆ.

ಬಳಸಿದ ಕ್ಷಿಪಣಿ ಯಾವುದು?

ಸ್ಕಾಲ್ಪ್ ಕ್ಷಿಪಣಿ ಒಂದು ದೀರ್ಘ-ಶ್ರೇಣಿಯ, ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಯಾಗಿದೆ. ಇದನ್ನು ಫ್ರಾನ್ಸ್ ತಯಾರಿಸಿದೆ. ಇದು ಸುಮಾರು ೧,೩೦೦ ಕಿಲೋಗ್ರಾಂಗಳಷ್ಟು ತೂಕವಿದ್ದು, ಗಟ್ಟಿಯಾದ ಬಂಕರ್‌ಗಳು ಮತ್ತು ನಿರ್ಣಾಯಕ ಗುರಿಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ. ಇದರ ವ್ಯಾಪ್ತಿಯು ೨೫೦ ರಿಂದ ೫೬೦ ಕಿಲೋಮೀಟರ್ ಆಗಿದೆ.

ಇದರ ವೇಗ ಗಂಟೆಗೆ ಸುಮಾರು ೧೦೦೦ ಕಿಲೋಮೀಟರ್. ಸ್ಕಾಲ್ಪ್ ಕ್ಷಿಪಣಿಯು ಜಿಪಿಎಸ್ ಸೇರಿ ಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆಗಳನ್ನು ಸರಿಯಾದ ಹಾದಿಯಲ್ಲಿ ಚಲಿಸುವಂತೆ ಮಾಡುತ್ತದೆ. ಇದರೊಂದಿಗೆ ಆತ್ಮಾಹುತಿ ಡ್ರೋನ್‌ಗಳನ್ನು ಬಳಸಲಾಗಿದ್ದು, ಅವು ನಿರ್ದಿಷ್ಟ ಗುರಿಯ ಜಾಗದಲ್ಲಿ ಬಿದ್ದು ಸ್ಫೋಟಗೊಳ್ಳುವವರೆಗೂ ಅವುಗಳಲ್ಲಿ ಅಳವಡಿಸಲ್ಪಟ್ಟ ಕ್ಯಾಮರಾಗಳು ಕಾರ್ಯನಿರ್ವಹಿಸಲಿದ್ದು, ನಂತರ ಸ್ವಯಂ ನಾಶಗೊಳ್ಳುತ್ತವೆ.

ಮೋದಿ-ಮುರ್ಮು ಮಾತುಕತೆ

ದಾಳಿಯ ಕುರಿತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟçಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಕುರಿತು ವಿವರಿಸಿದರು. ದೇಶದ ಗೃಹ ಸಚಿವ ಅಮಿತ್ ಶಾ ಅವರು ಪಾಕಿಸ್ತಾನ ಗಡಿ ರಾಜ್ಯಗಳ ಮುಖ್ಯಮಂತ್ರಿಗಳೊAದಿಗೆ ಸಭೆ ನಡೆಸಿ ಪರಿಸ್ಥಿತಿಯ ಕುರಿತು ಅವಲೋಕಿಸಿದರಲ್ಲದೆ ಮುಂದೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚಿಸಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ಮತ್ತು ಅಮೆರಿಕಾದ ಪ್ರತಿನಿಧಿಗಳೊಂದಿಗೆ ದೂರವಾಣಿಯಲ್ಲಿ ಭಾರತ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದರಲ್ಲದೆ ಉಗ್ರರ ವಿರುದ್ಧ ದಾಳಿ ಅನಿವಾರ್ಯವಾಗಿತ್ತು ಎಂಬ ಬಗ್ಗೆ ಮನವರಿಕೆ ಮಾಡಿದರು.

ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಖರ್ಗೆ ಮತ್ತು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರುಗಳು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಶ್ಲಾಘಿಸಿದರಲ್ಲದೆ ಪ್ರತಿಪಕ್ಷವಾಗಿ ತಾವುಗಳು ಸದಾ ಭಾರತೀಯ ಸೇನೆಯ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.

ಏಪ್ರಿಲ್ ೨೨ರಂದು ದಾಳಿಗೆ ತುತ್ತಾಗಿದ್ದ ಪಹಲ್ಗಾವ್ನಲ್ಲಿ ಇಂದು ಕೂಡ ಪ್ರವಾಸಿಗರು ಕಂಡುಬAದಿದ್ದು ಭಾರತೀಯ ಸೇನೆ ತಮ್ಮೊಂದಿಗೆ ಇರುವಾಗ ಯಾವುದೇ ಭಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತದ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಇಂದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮುಂದೆಯೂ ಯುದ್ಧ ಸಂಭವಿಸುವದೆAಬ ಆತಂಕದಿAದ ಜನತೆ ಸಾಲು ಸಾಲಾಗಿ ಬ್ಯಾಂಕುಗಳ ಮುಂದೆ ನಿಂತು ಹಣವನ್ನು ಹಿಂದಕ್ಕೆ ಪಡೆಯುವುದು ಗೋಚರಿಸಿತು.

ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಶೇರು ಮಾರುಕಟ್ಟೆ ಪಾತಾಳಕ್ಕೆ ಇಳಿದು ಕೋಟ್ಯಂತರ ರೂಪಾಯಿಯನ್ನು ಶೇರುದಾರರು ಕಳೆದುಕೊಂಡರು.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ಗೃಹ ಸಚಿವ, ಪಾಕಿಸ್ತಾನ ಯಾವುದೇ ಕಾರಣಕ್ಕೂ ಉಗ್ರರನ್ನು ಪೋಷಿಸುವುದಿಲ್ಲ ಎಂಬ ಬಾಲಿಷ ಹೇಳಿಕೆ ನೀಡಿದ್ದು ಭಾರತದ ದಾಳಿಗೆ ಪ್ರತಿ ದಾಳಿ ಖಂಡಿತ ಎಂದಿದ್ದಾರೆ.

ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಪಡೆಗಳು ಶೆಲ್ ದಾಳಿ ನಡೆಸಿದ್ದು ಗಡಿಭಾಗದ ನಿವಾಸಿಗಳಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಭಾರತದ ಯಾವುದೇ ಪ್ರದೇಶಗಳಲ್ಲಿ ಭೂಸೇನೆಯ ಸಿಬ್ಬಂದಿ ಅಧಿಕಾರಿಗಳ ಚಲನವಲನ ಕಂಡು ಬಂದರೆ ಅದರ ವೀಡಿಯೊ ಅಥವಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡದಂತೆ ನಿವೃತ್ತ ಭೂ ಸೇನಾ ಮುಖ್ಯಸ್ಥ ದಿಲ್ಲನ್ ಅವರು ಭಾರತೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಶಸ್ತç ಪಡೆಗಳು ಹೊಸ ಇತಿಹಾಸ ಸೃಷ್ಟಿಸಿದೆ: ರಾಜನಾಥ್ ಸಿಂಗ್

ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸಶಸ್ತç ಪಡೆಗಳು ತಮ್ಮ ಶೌರ್ಯವನ್ನು ಪ್ರದರ್ಶಿಸಿವೆ, ಹೊಸ ಇತಿಹಾಸವನ್ನು ಬರೆದಿವೆ ಮತ್ತು ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ “ನಿಖರತೆ, ಜಾಗರೂಕತೆ ಮತ್ತು ಸೂಕ್ಷö್ಮತೆ" ಯೊಂದಿಗೆ ಕ್ರಮ ಕೈಗೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ೫೦ ಗಡಿ ರಸ್ತೆಗಳ ಸಂಸ್ಥೆಯ ಮೂಲಸೌಕರ್ಯ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಸಶಸ್ತç ಪಡೆಗಳು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ನಾಗರಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳುವಲ್ಲಿ ಸೂಕ್ಷö್ಮತೆಯನ್ನು ತೋರಿಸಿವೆ ಎಂದು ಹೇಳಿದರು.

"ಇಂದು, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ನಮ್ಮ ಭಾರತೀಯ ಸಶಸ್ತç ಪಡೆಗಳು ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡಿದೆ ಎಂದು ನಿಮಗೆ ತಿಳಿದಿದೆ... ನಿನ್ನೆ ರಾತ್ರಿ, ನಮ್ಮ ಭಾರತೀಯ ಸಶಸ್ತç ಪಡೆಗಳು ತಮ್ಮ ಶೌರ್ಯವನ್ನು ಪ್ರದರ್ಶಿಸಿ, ಹೊಸ ಇತಿಹಾಸವನ್ನು ಬರೆದವು. ಭಾರತೀಯ ಸಶಸ್ತç ಪಡೆಗಳು ನಿಖರತೆ, ಜಾಗರೂಕತೆ ಮತ್ತು ಸೂಕ್ಷö್ಮತೆಯಿಂದ ಕ್ರಮ ಕೈಗೊಂಡವು. ನಾವು ನಿರ್ಧರಿಸಿದ ಗುರಿಗಳನ್ನು ನಿಖರವಾಗಿ ನಾಶಪಡಿಸಲಾಯಿತು.. ನಾಗರಿಕ ಜನಸಂಖ್ಯೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವಲ್ಲಿ ನಮ್ಮ ಸಶಸ್ತç ಪಡೆಗಳು ಸಹ ಸೂಕ್ಷö್ಮತೆಯನ್ನು ತೋರಿಸಿವೆ" ಎಂದು ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.

ಸೇನಾದಾಳಿ ಎಚ್ಚರಿಕೆಯ ಗಂಟೆ : ಸಿದ್ದರಾಮಯ್ಯ

ಭಾರತ ನಡೆಸಿದ ದಾಳಿ, ಪಾಕಿಸ್ತಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನವನ್ನು ನಡೆಸುವ ನೆರೆಯ ಎಲ್ಲಾ ದೇಶಗಳಿಗೆ ಕೂಡಾ ಎಚ್ಚರಿಕೆಯ ಗಂಟೆಯಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸೇನಾ ದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಪೆಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ, ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡದೆ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾಇಡುವಂತೆ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.