ಗೋಣಿಕೊಪ್ಪಲು, ಮೇ.೭: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೧ನೇ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು.
ಮಲ್ಲಂಗಡ ಹಾಗೂ ಬೊಟ್ಟಂಗಡ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಟಂಗಡ ೨ ವಿಕೆಟ್ ಕಳೆದುಕೊಂಡು ೯೪ ರನ್ ಗಳಿಸಿತು. ಮಲ್ಲಂಗಡ ೪ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿ ಸೋಲನುಭವಿಸಿತು.
ಮುಂಡAಡ ವಿರುದ್ಧ ಕಾಣತಂಡ ಗೆಲುವು ಕಂಡಿತು. ೮ ವಿಕೆಟ್ ಕಳೆದುಕೊಂಡು ೫೨ ರನ್ ಗಳಿಸಿತು. ಕಾಣತಂಡ ೪ ವಿಕೆಟ್ ಕಳೆದುಕೊಂಡು ೫೭ ರನ್ ಗಳಿಸುವ ಮೂಲಕ ಜಯ ಸಾಧಿಸಿತು. ಮೇದುರ ಹಾಗೂ ಚಿಮ್ಮಣಮಾಡ ನಡುವಿನ ಪಂದ್ಯದಲ್ಲಿ ಮೇದುರ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ ೨ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿತು. ಚಿಮ್ಮಣಮಾಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ ೪೬ ರನ್ ಸಂಪಾದಿಸಿ ಗೆಲುವಿನ ನಗೆ ಬೀರಿತು. ನೆಲ್ಲಿರ ವಿರುದ್ಧ ಅಪ್ಪಾರಂಡ ಪರಾಭವಗೊಂಡಿತು. ನೆಲ್ಲಿರ ನೀಡಿದ್ದ ೧೧೮ ಗುರಿ ಬೆನ್ನಟ್ಟಿದ್ದ ಅಪ್ಪಾರಂಡ ತಂಡವು ನಿಗದಿತ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೫೬ ಸಂಪಾದಿಸಿ ಸೋಲು ಕಂಡಿತು.
ಮುAಡAಗಡ ವಿರುದ್ಧ ಬಾಚಿನಾಡಂಡ ಪರಾಜಿತಗೊಂಡಿತು. ಮುಂಡAಗಡ ೪ ವಿಕೆಟ್ ಕಳೆದುಕೊಂಡು ೮೨ ರನ್ ಗಳಿಸಿತು. ಬಾಚಿನಾಡಂಡ ೬ ವಿಕೆಟ್ ಕಳೆದುಕೊಂಡು ೫೨ ರನ್ ಸಂಪಾದಿಸಿ ಸೋಲನುಭವಿಸಿತು. ಕೋಳುಮಾಡಂಡ ಹಾಗೂ ಕೋಡಿಮಣಿಯಂಡ ನಡುವಿನ ಹಣಾಹಣಿಯಲ್ಲಿ ಕೋಳುಮಾಡಂಡ ೫ ವಿಕೆಟ್ ಕಳೆದುಕೊಂಡು ೬೯ ರನ್ ಸಂಪಾದಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿದರು. ಕೋಡಿಮಣಿಯಂಡ ೨ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.