ಮಡಿಕೇರಿ, ಮೇ ೬ : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸುಂಟಿಕೊಪ್ಪ ಸಂತ ಅಂತೋಣಿಯವರ ದೇವಾಲಯದ ಸಂಯುಕ್ತಾಶ್ರಯದಲ್ಲಿ ತಾ. ೯ ರಿಂದ ೧೧ರ ವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ವಿವಿಧ ಕ್ರೀಡಾಕೂಟ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಮಾತನಾಡಿ, ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ೧೪ನೇ ವರ್ಷದ ಪಂದ್ಯಾವಳಿಗೆ ಮೇ ೯ ರಂದು ಚಾಲನೆ ದೊರೆಯಲಿದೆ ಎಂದರು.
ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯ ಲಿರುವ ಸಭಾ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ, ಬೆಂಗಳೂರು ಮಹಾ ಧರ್ಮಪ್ರಾಂತ್ಯದ ವಿಶ್ರಾಂತ ಮಹಾಧರ್ಮಧ್ಯಕ್ಷರಾದ ಅತೀ ವಂದನೇಯ ಡಾ.ಬರ್ನಾಡ್ ಮೋರಾಸ್ ಆರ್ಶೀವಚನ ನೀಡಲಿದ್ದಾರೆ.
ಧ್ವಜಾರೋಹಣವನ್ನು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ವಿಜಯ್ ಕುಮಾರ್ ನೆರವೇರಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಥಮ ಬಹುಮಾನ ದಾನಿ ವಿಲಿಯಂ, ಉದ್ಯಮಿ ಮತ್ತು ಕಾಲ ನಡೆಯಲಿರುವ ೧೪ನೇ ವರ್ಷದ ಪಂದ್ಯಾವಳಿಗೆ ಮೇ ೯ ರಂದು ಚಾಲನೆ ದೊರೆಯಲಿದೆ ಎಂದರು.
ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯ ಲಿರುವ ಸಭಾ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ, ಬೆಂಗಳೂರು ಮಹಾ ಧರ್ಮಪ್ರಾಂತ್ಯದ ವಿಶ್ರಾಂತ ಮಹಾಧರ್ಮಧ್ಯಕ್ಷರಾದ ಅತೀ ವಂದನೇಯ ಡಾ.ಬರ್ನಾಡ್ ಮೋರಾಸ್ ಆರ್ಶೀವಚನ ನೀಡಲಿದ್ದಾರೆ.
ಧ್ವಜಾರೋಹಣವನ್ನು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ವಿಜಯ್ ಕುಮಾರ್ ನೆರವೇರಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಥಮ ಬಹುಮಾನ ದಾನಿ ವಿಲಿಯಂ, ಉದ್ಯಮಿ ಮತ್ತು (ಮೊದಲ ಪುಟದಿಂದ) ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಫೈನಲ್ ಪಂದ್ಯ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿದ್ದಾಪುರ ಸಂತ ಮೇರಿ ದೇವಾಲಯದ ಧರ್ಮಗುರು ಫಾ.ಜೋಜಿ ವಡಕೇವಿಟಿಲ್, ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ, ಮಾಜಿ ಅಧ್ಯಕ್ಷ ರೋಸ್ ಮೇರಿ ರಾಡ್ರಿಗಸ್, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್, ರೋಮನ್ ಕ್ಯಾಥೋಲಿಕ್ ಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿ ಜೂಡಿ ಡೇವಿಡ್ ವಾಝ್, ಕೃಷಿಕ ಎಂ.ಟಿ. ಬೇಬಿ, ಕೊಡಗು ಪ್ರೊಟೆಸ್ಟೆಂಟ್ ಚರ್ಚ್ಗಳ ಅಧ್ಯಕ್ಷ ಪಿ.ಆರ್. ಮಹದೇವ್, ಕಂಬಿಬಾಣೆ ಕಾಫಿ ಬೆಳೆಗಾರ ಟಿ.ಕೆ. ಸಾಯಿಕುಮಾರ್, ಸುಂಟಿಕೊಪ್ಪ ಸಂತ ಅಂತೋಣಿಯವರ ದೇವಾಲಯ ಗುರು ಫಾ. ವಿಜಯ್ ಕುಮಾರ್, ಸುಂಟಿಕೊಪ್ಪ ಸ.ಪ್ರಾ.ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಯು. ರಫೀಕ್, ಆರ್ಥಿಕ ಸಮಿತಿ ಸದಸ್ಯ ಜೇಮ್ಸ್ ಡಿ'ಸೋಜ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಪೊಲೀಸ್ ಇಲಾಖೆಯ ರಾಜೇಶ್, ಎಂ.ಎಸ್.ಸಿ (ಸಿ.ಎಸ್) ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಶೈನಿ ಡಿ'ಸೋಜ, ಪ್ರಗತಿಪರ ಕೃಷಿಕ ಎಸ್.ಎಂ. ಡಿ'ಸಿಲ್ವ, ಎಂ.ಬಿ.ಬಿ.ಎಸ್.ನಲ್ಲಿ ಉನ್ನತ ಅಂಕ ಪಡೆದ ಡಾ. ಆನ್ ಲಿಷಾ, ಸಮಗ್ರ ಕೃಷಿಕ ಪಿ.ಎಂ. ಬಿಜು, ಸಸ್ಯಶಾಸ್ತçದಲ್ಲಿ ಪಿ.ಹೆಚ್.ಡಿ ಪಡೆದ ಡಾ. ನಿಲನ ಜೇಮ್ಸ್, ಉದ್ಯಮಿ ಪೌಲ್ ಕ್ಸೇವಿಯರ್, ನಾಟಿ ವೈದ್ಯ ಜಾನ್ ಲೋಬೋ, ಉರಗ ತಜ್ಞ ಪಿಯೂಷ್ ಪೆರೆರಾ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದೆಂದು ತಿಳಿಸಿದರು.
ಅಸೋಸಿಯೇಷನ್ನ ಕಾರ್ಯಾಧ್ಯಕ್ಷ ವಿ.ಎ. ಲಾರೆನ್ಸ್ ಮಾತನಾಡಿ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲೆಯ ೫ ತಾಲೂಕುಗಳಲ್ಲಿಯೂ ಘಟಕಗಳನ್ನು ಸ್ಥಾಪಿಸಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದೆ. ಕೇವಲ ಕ್ರೀಡೆ ಮಾತ್ರವಲ್ಲದೆ ಸಮುದಾಯದ ಏಳಿಗೆಗಾಗಿ ವಿವಿಧ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದರು.
ಅನಾರೋಗ್ಯಸ್ಥರಿಗೆ, ಶಾಲಾ ಮಕ್ಕಳಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಿದೆ. ಕ್ರೀಡೆ ಸಮುದಾಯದ ಏಳಿಗೆಯ ಪ್ರತೀಕವಾಗಿದ್ದು, ಜಿಲ್ಲೆಯ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕ್ರೀಡಾಕೂಟ ಆಚರಣಾ ಸಮಿತಿ ಸಂಚಾಲಕ ಪಿ.ಎಫ್.ಸೆಬಾಸ್ಟö್ಯನ್ ಮಾತನಾಡಿ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ ೨೬ ತಂಡಗಳು ನೋಂದಾಯಿಸಿಕೊAಡಿವೆ. ಕಾರ್ಯಕ್ರಮಕ್ಕೆ ಸುಮಾರು ಮೂರು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಹಗ್ಗಜಗ್ಗಾಟ, ಥ್ರೋಬಾಲ್ ಸೇರಿದಂತೆ ಇನ್ನಿತರ ಆಟೋಟ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ನ ಗೌರವಾಧ್ಯಕ್ಷ ಜೋಕಿಮ್ ವಾಸ್, ಮಹಿಳಾ ಘಟಕದ ಉಪಾಧ್ಯಕ್ಷೆ ಗ್ರೇಸಿ ಡೇವಿಡ್, ಕಾರ್ಯಕಾರಿ ಮಂಡಳಿ ಸದಸ್ಯ ಪಿ.ಎಂ.ಬಿಜು ಉಪಸ್ಥಿತರಿದ್ದರು.