ಗೋಣಿಕೊಪ್ಪಲು, ಮೇ ೬ : ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯು ಮೈದಾನ ೨ ರಲ್ಲಿ ನಡೆಯಿತು. ೫ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಮುಕ್ಕಾಟಿರ (ಹರಿಹರ) ತಂಡ ಹಾಗೂ ಮಲ್ಲಜಿರ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಮಲ್ಲಜಿರ ತಂಡವು ೪.೧ ಓವರ್ನಲ್ಲಿ ೭ ವಿಕೆಟ್ ಕಳೆದುಕೊಂಡು ಕೇವಲ ೪ ರನ್ ಬಾರಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಮುಕ್ಕಾಟಿರ ತಂಡವು ಸುಲಭದ ರನ್ ಅನ್ನು ಮೊದಲ ಓವರ್ನಲ್ಲಿಯೇ ಪೂರ್ಣಗೊಳಿಸಿ ೧೦ ವಿಕೆಟ್ ಅಂತರದಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಮುನ್ನಡೆಯಿತು.
ಎರಡನೇ ಪಂದ್ಯವು ಓಡಿಯಂಡ ಹಾಗೂ ಸಣ್ಣುವಂಡ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಓಡಿಯಂಡ ತಂಡವು ನಿಗದಿತ ಓವರ್ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಭರ್ಜರಿ ೧೨೩ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು.
ಬ್ಯಾಟಿಂಗ್ ಆರಂಭಿಸಿದ ಸಣ್ಣುವಂಡ ತಂಡವು ನಿಗದಿತ ಓವರ್ನಲ್ಲಿ ೩ ವಿಕೆಟ್ ಕಳೆದುಕೊಂಡು ೪೬ ರನ್ ಕಲೆ ಹಾಕಿ ಸೋಲು ಅನುಭವಿಸಿತು,
ಮೂರನೇ ಪಂದ್ಯವು ಕಾಳಿಮಾಡ ಹಾಗೂ ಆಟ್ರಂಗಡ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಆಟ್ರಂಗಡ ತಂಡ ನಿಗದಿತ ಓವರ್ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೭೨ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಕಾಳಿಮಾಡ ತಂಡವು ಬ್ಯಾಟಿಂಗ್ ಆರಂಭಿಸಿ ೨ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸಿ ಸೋಲನ್ನು ಅನುಭವಿಸಿತು.
ನಾಲ್ಕನೇ ಪಂದ್ಯವು ಬಲ್ಲಂಡ ಹಾಗೂ ಮಣವಟ್ಟಿರ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಣವಟ್ಟಿರ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ೯೧ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಬ್ಯಾಟಿಂಗ್ ಆರಂಭಿಸಿದ ಬಲ್ಲಂಡ ತಂಡ ೩ ವಿಕೆಟ್ ಕಳೆದುಕೊಂಡು ೩೧ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಐದನೇ ಪಂದ್ಯವು ತಾತಪಂಡ ತಂಡ ಹಾಗೂ ಕಾಯಪಂಡ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ತಾತಪಂಡ ತಂq ಯಾವುದೇ ವಿಕೆಟ್ ಕಳೆದುಕೊಳ್ಳದೆ ೩೯ ರನ್ ಕಲೆ ಹಾಕುವ ಮೂಲಕ ಎದುರಾಳಿ ತಂಡಕ್ಕೆ ಬ್ಯಾಟಿಂಗ್ಗೆ ಆಹ್ವಾನ ನೀಡಿತು.
ಬ್ಯಾಟಿಂಗ್ ಆರಂಭಿಸಿದ ಕಾಯಪಂಡ ತಂಡ ೧ ವಿಕೆಟ್ ಕಳೆದುಕೊಂಡು ೩೬ ರನ್ ಬಾರಿಸಿ ಸೋಲು ಅನುಭವಿಸಿತು.