ನಾಪೋಕ್ಲು, ಮೇ ೫: ಶಿಸ್ತು ಹಾಗೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ ಎಂದು ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಹೇಳಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆ.ಪಿ.ಎಸ್. ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ೨೫ನೇ ವರ್ಷದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿ ದರು. ಕಿರಿಯ ವಯಸ್ಸಿನಿಂದಲೇ ಮಕ್ಕಳು ಕ್ರೀಡೆಗೆ ಆದ್ಯತೆ ನೀಡಬೇಕು. ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಇಲ್ಲದಿದ್ದಲ್ಲಿ ಪರಿಪೂರ್ಣತೆ ಹೊಂದ ಲಾಗುವುದಿಲ್ಲ. ದೇಹ ಸದೃಢವಾಗಿದ್ದರೆ ಮನಸು ಸದೃಡ ವಾಗಿರುತ್ತದೆ ಎಂದರು. ನಿವೃತ್ತ ಸೈನಿಕ ಕೊಂಡಿರ ಗಣೇಶ್ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ೨೫ ವರ್ಷಗಳು ನಿರಂತರವಾಗಿ ಶಿಬಿರವನ್ನು ನಡೆಸುತ್ತಾ ಬರುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ ಶಿಬಿರವನ್ನು ಆಯೋಜಿಸುವುದು ಸುಲಭದ ಮಾತಲ್ಲ. ಇದಕ್ಕೆ ದಾನಿಗಳ ನೆರವು ಅಗತ್ಯ. ಕ್ರೀಡೆಯಲ್ಲಿ ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಿ ಆಟಗಾರರು ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು. ಈ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಖಜಾಂಚಿ ಮುಖ್ಯ ತರಬೇತುದಾರÀ ಮಾಜಿ ಸೈನಿಕ ಕೇಟೋಳಿರ ಡಾಲಿ ಅಚ್ಚಪ್ಪ, ಕಾರ್ಯದರ್ಶಿ ಮಾಚೆಟ್ಟಿರ ಕುಸು ಕುಶಾಲಪ್ಪ, ನಿರ್ದೇಶಕ ದುಗ್ಗಳ ಸದಾನಂದ, ತರಬೇತುದಾರ ಅರೆಯಡ ಗಣೇಶ್, ಬಿದ್ದಾಟಂಡ ಮಮತ ಚಿಣ್ಣಪ್ಪ, ಪೋಷಕರು ಹಾಜರಿದ್ದರು.