ಗೋಣಿಕೊಪ್ಪಲು, ಮೇ ೫: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯು ಮೈದಾನ ೨ ರಲ್ಲಿ ನಡೆಯಿತು. ೬ ಮಹಿಳಾ ತಂಡಗಳು ಮುನ್ನಡೆ ಸಾಧಿಸಿದವು. ಮೊದಲ ಪಂದ್ಯವು ಚೆಕ್ಕೇರ ತಂಡ ಹಾಗೂ ಅಚ್ಚಕಾಳೇರ ತಂಡದ ನಡುವೆ ನಡೆಯಿತು .

ಮೊದಲು ಬ್ಯಾಟಿಂಗ್ ಆರಂಭಿಸಿದ ಅಚ್ಚಕಾಳೆರ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೩೩ ರನ್ ಬಾರಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಚೆಕ್ಕೇರ ತಂಡವು ಬ್ಯಾಟಿಂಗ್ ಆರಂಭಿಸಿ ಇನ್ನೂ ೨ ಓವರ್ ಬಾಕಿ ಇರುವಂತೆಯೇ, ೫ ವಿಕೆಟ್ ಕಳೆದುಕೊಂಡು ೩೭ ಗಳಿಸಿ ೫ ವಿಕೆಟ್ ಅಂತರದಲ್ಲಿ ಜಯ ಸಾಧಿಸಿತು.

ಎರಡನೇ ಪಂದ್ಯವು ಅಜ್ಜಿಕುಟ್ಟಿರ ಹಾಗೂ ಚೀಯಕಪೂವಂಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಅಜ್ಜಿಕುಟ್ಟಿರ ತಂಡವು ೬ ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಬ್ಯಾಟಿಂಗ್ ಆರಂಭಿಸಿದ ಚೀಯಕಪೂವಂಡ ತಂಡ ೬ ವಿಕೆಟ್ ಕಳೆದುಕೊಂಡು ೩೯ ರನ್ ಕಲೆ ಹಾಕಿ ಸೋಲು ಅನುಭವಿಸಿತು.

ಮೂರನೇ ಪಂದ್ಯವು ಚಟ್ಟಂಗಡ ಹಾಗೂ ಅರಮಣಮಾಡ (ಬೆಸಗೂರ್) ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಚಟ್ಟಂಗಡ ತಂಡ ೪ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಅರಮಣಮಾಡ ತಂಡ ಬ್ಯಾಟಿಂಗ್ ಆರಂಭಿಸಿ ೧ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿ ೯ ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿತು. ನಾಲ್ಕನೇ ಪಂದ್ಯವು ಕಾಂಡAಡ ಹಾಗೂ ಮುದ್ದಿಯಡ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುದ್ದಿಯಡ ೬ ವಿಕೆಟ್ ಕಳೆದುಕೊಂಡು ೫೫ ರನ್‌ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.ಬ್ಯಾಟಿಂಗ್ ಆರಂಭಿಸಿದ ಕಾಂಡAಡ ತಂಡ ಇನ್ನು ಕೆಲವು ಬಾಲ್‌ಗಳು ಇರುವಂತೆಯೇ ೧ ವಿಕೆಟ್ ಕಳೆದುಕೊಂಡು ೫೬ ರನ್‌ಗಳಿಸುವ ಮೂಲಕ ಮುದ್ದಿಯಡ ತಂಡವನ್ನು ೯ ವಿಕೆಟ್‌ಗಳ ಅಂತರದಲ್ಲಿ ಸೋಲಿಸಿ ಮುಂದಿನ ಹಂತಕ್ಕೆ ಮುನ್ನಡೆಯಿತು. ಐದನೇ ಪಂದ್ಯವು ಮಚ್ಚಮಾಡ ತಂಡ ಹಾಗೂ ನಾಟೋಳಂಡ ತಂಡದ ನಡುವೆ ನಡೆಯಿತು.

ಮೊದಲು ಬ್ಯಾಟಿಂಗ್ ಆರಂಭಿಸಿದ ಮಚ್ಚಮಾಡ ತಂಡ ೩ ವಿಕೆಟ್ ಕಳೆದುಕೊಂಡು ೫೩ ರನ್ ಕಲೆ ಹಾಕುವ ಮೂಲಕ ಎದುರಾಳಿ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನ ನೀಡಿತು. ಬ್ಯಾಟಿಂಗ್ ಆರಂಭಿಸಿದ ನಾಟೋಳಂಡ ತಂಡ ೨ ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿ ಸೋಲನ್ನು ಅನುಭವಿಸಿತು.

ದಿನದ ಆರನೇ ಪಂದ್ಯವು ಕಂಬೀರAಡ ಹಾಗೂ ಕುಂದೀರ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಂಬೀರAಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ ಭರ್ಜರಿ ೯೫ ರನ್ ಸಿಡಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ದೊಡ್ಡ ಮೊತ್ತದ ರನ್ ಬೇಧಿಸುವ ಪ್ರಯತ್ನ ಮಾಡಿದ ಕುಂದೀರ ತಂಡ ೫ ವಿಕೆಟ್ ಕಳೆದುಕೊಂಡು ೩೭ ರನ್ ಕಲೆ ಹಾಕುವ ಮೂಲಕ ಸೋಲನ್ನು ಒಪ್ಪಿಕೊಂಡಿತು.