ಶನಿವಾರಸಂತೆ, ಮೇ ೫: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಭವಾನಿ ಗುರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಹಶೀಲ್ದಾರ್ ಕೃಷ್ಣಮೂರ್ತಿಯವರು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಪಂಚಾಯಿತಿಯಲ್ಲಿ ೧೩ ಮಂದಿ ಸದಸ್ಯರಿದ್ದು, ೮ ಮಂದಿ ಬೆಂಬಲಿತ ಸದಸ್ಯರಿಂದ ಭವಾನಿ ಗುರು ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು. ಕಂದಾಯ ನಿರೀಕ್ಷಕ ಯಶವಂತ್, ರಾಕೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್, ಮುಖಂಡ ಶರತ್ ಶೇಖರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಪ್ರಮುಖರಾದ ಜನಾರ್ಧನ್, ಅಶೋಕ್, ಗುರು, ಮೋಹನ್ ಮೌರ್ಯ, ಮಂಜು, ಉಪಸ್ಥಿತರಿದ್ದರು. ಪಿ.ಡಿ.ಓ. ಆಯೆಷಾ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಜೆ. ಗಿರೀಶ್, ಡಿ.ಪಿ. ಬೋಜಪ್ಪ, ಎಂ.ಡಿ. ದೇವರಾಜ್, ಎಸ್.ಪಿ. ಭಾಗ್ಯ, ಜಾನಕಿ, ನಂದಿನಿ ನಾಗರತ್ನಾ, ಸತ್ಯವತಿ ದೇವರಾಜ್ ಹಾಜರಿದ್ದರು.