*ಗೋಣಿಕೊಪ್ಪ, ಮೇ. ೨: ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದ ರತನ್ ಕಾಫಿ ಎಸ್ಟೇಟ್‌ನಲ್ಲಿ ತಾ. ೩ ರಂದು (ಇಂದು) ಮತ್ತು ತಾ. ೪ ರಂದು ರಾಷ್ಟçಮಟ್ಟದ ಕೂರ್ಗ್ ಚ್ಯಾಲೆಂಜ್ ೪x೪ ರ‍್ಯಾಲಿ ನಡೆಯಲಿದೆ.
ಶನಿವಾರ ಎಕ್ಸ÷್ಪರ್ಟ್ ಡೀಸೆಲ್ ಕ್ಲಾಸ್, ಎಕ್ಸ್ಪರ್ಟ್ ಪೆಟ್ರೋಲ್ ಕ್ಲಾಸ್, ಎಸ್‌ಯುವಿ ಕ್ಲಾಸ್, ಜಿಮ್ನಿ ಕ್ಲಾಸ್, ಥಾರ್ ಕ್ಲಾಸ್, ಲೇಡೀಸ್ ಕ್ಲಾಸ್ ವಿಭಾಗದಲ್ಲಿ ರ‍್ಯಾಲಿ ನಡೆಯಲಿದ್ದು, ತಾ. ೪ ರಂದು ಎನ್‌ಡಿಎಂಎಸ್ ಕ್ಲಾಸ್, ಮೋಡಿಫೈಡ್ ಡೀಸೆಲ್ ಕ್ಲಾಸ್, ಮೋಡಿಫೈಡ್ ಪೆಟ್ರೋಲ್, ಮೊಡಿಫೈಡ್ ಓಪನ್ ಕ್ಲಾಸ್ ವಿಭಾಗದ ಸ್ಪರ್ಧೆ ನಡೆಯಲಿದೆ.
೨ನೇ ವರ್ಷದ ಆಫ್ ರೋಡ್ ರ‍್ಯಾಲಿಯಾಗಿದ್ದು, ಸುಮಾರು ೧೨೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಕೊಡಗಿನ ರ‍್ಯಾಲಿಪಟುಗಳು, ಸ್ಥಳೀಯ ಪ್ರತಿಭೆಗಳು ಹೆಚ್ಚಾಗಿ ಭಾಗವಹಿಸುವುದರಿಂದ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಈ ಬಗ್ಗೆ ಸ್ಥಳಿಯ ಪ್ರತಿಭೆಗಳಿಂದ ಕೂಡ ಹೆಚ್ಚು ನಿರೀಕ್ಷೆ ಇದೆ ಎಂದು ರ‍್ಯಾಲಿಪಟು ಪಟ್ರಂಗಡ ಶ್ರೀಮಂತ್ ಮುತ್ತಣ್ಣ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ರ‍್ಯಾಲಿ ಲಾಂಛನ ಅನಾವರಣಗೊಳಿಸಿ ಶುಭ ಕೋರಿದರು.