ಕಾಯಕವೇ ಕೈಲಾಸವೆಂಬ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ನಾಣ್ನುಡಿಯಂತೆ ಭೂಮಿಯ ಪ್ರತಿಯೊಂದು ಜೀವಿಯು ಹುಟ್ಟಿದ ಮೇಲೆ ತನ್ನದೇ ಆದ ನಿತ್ಯಕರ್ಮಗಳಿಂದ ಜೀವನ ನಡೆಸಬೇಕಾಗುತ್ತದೆ. ಕರ್ಮದ ಜೀವನಶೈಲಿಯು ಅತ್ಯಂತ ಸುಂದರ ಹಾಗೂ ಸಮಾಧಾನಕರವಾಗಿರುತ್ತದೆ ಎನ್ನಬಹುದು. ಹಾಗಾಗಿ ಕರ್ಮಯೋಗಿಯನ್ನು ಕಾರ್ಮಿಕ ಎಂದು ಕರೆಯಲಾಗುತ್ತದೆ.
ಎಲ್ಲ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ತನಗಾಗಿ, ತನ್ನವರಿಗೆ, ತನಗೋಸ್ಕರ, ದುಡಿಯುತ್ತಲೇ ಇರುವವನೇ ಕಾರ್ಮಿಕ. ಅವರಿಗಾಗಿ ಒಂದು ದಿನವೆಂದರೆ ಅದುವೇ ಮೇ ೧ "ಕಾರ್ಮಿಕರ ದಿನ". “ವಿಶ್ವದ ಕಾರ್ಮಿಕರೇ ಒಂದಾಗಿರಿ "ಇದು ವಿಶ್ವಕಾರ್ಮಿಕ ದಿನಾಚರಣೆಯ ಧ್ಯೇಯವಾಕ್ಯ. ಇಂದು ಕಾರ್ಮಿಕ ಹಕ್ಕುಗಳು, ಶ್ರಮದ ಗೌರವ ಮತ್ತು ಕಾನೂನುಬದ್ಧ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ಕಾರ್ಮಿಕರು ನಮ್ಮ ಸಮಾಜದ ಬೆಳವಣಿಗೆಗೆ ಬೆನ್ನುಹುರಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಲ್ಲದೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ತಂತ್ರಜ್ಞಾನದ ಹೆಸರಿನಲ್ಲಿ ಸ್ವಯಂಚಾಲಿತ ಸಲಕರಣೆಗಳು ಹೆಚ್ಚಾದಂತೆ ನೌಕರರ ಭದ್ರತೆ ಕಮ್ಮಿಯಾಗುತ್ತಿರುವುದು ಗಮನಾರ್ಹ. ಇಂದು ನಮಗೆ ಬೇಕಾಗಿರುವುದು ಕೇವಲ ಈ ದಿನವನ್ನು ಆಚರಿಸುವುದಷ್ಟೇ ಅಲ್ಲ. ಕಾರ್ಮಿಕರ ಪ್ರತಿಯೊಂದು ಹಕ್ಕು ಮತ್ತು ಗೌರವವನ್ನು ಪ್ರತಿದಿನವೂ ಕಾಪಾಡಬೇಕಾಗಿದೆ. ಶ್ರಮಪರ ಜಗತ್ತು ನಿರ್ಮಾಣವೇ ನಿಜವಾದ ಕಾರ್ಮಿಕ ದಿನಾಚರಣೆಯ ಅರ್ಥ. ವಿಶ್ವದಾದ್ಯಂತ ಸಮಾಜವಾದ ಸ್ಥಾಪನೆಗೆ ಒಂದಾಗಬೇಕು" ಎಂಬುದು ಇದರ ಉದ್ದೇಶ.
ಸಮಾಜವಾದದ ಮುಖವಾಡ ಧರಿಸಿ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಅಸಮಾನತೆ, ಅನ್ಯಾಯ, ಶೋಷಣೆಗಳನ್ನು ಶಾಶ್ವತಗೊಳಿಸುತ್ತಿರುವ ರಾಷ್ಟçದ ಆಳುವ ವರ್ಗಗಳ ಬಂಡಾಯಶಾಹಿ ಭೂಮಾಲೀಕ ವರ್ಗಗಳ ಶೋಷಿತ ಆಳ್ವಿಕೆಯನ್ನು ಕೊನೆಗೊಳಿಸಲು ರಾಷ್ಟçದಲ್ಲಿನ ಶೋಷಿತ ಕಾರ್ಮಿಕರು ಹಾಗೂ ಇತರ ಎಲ್ಲಾ ಶೋಷಿತ ವರ್ಗಗಳು ಒಂದಾಗಿ ಈ ಶೋಷಕ ವರ್ಗದ ಆಡಳಿತಕ್ಕೆ ಅಂತ್ಯ ಹಾಡದಿದ್ದರೆ ಸಂವಿಧಾನದಲ್ಲಿ ಘೋಷಿಸಲ್ಪಟ್ಟಿರುವ ಸಮಾಜವಾದವು ಕೇವಲ ಕಾಗದದ ಆಶ್ವಾಸನೆಯಾದೀತೇ ಹೊರತು ಸಾಮಾಜಿಕ ವಾಸ್ತವಿಕತೆ ಆಗಲಾರದು. ಅಂತೆಯೇ ಈ ಮೇ ೧ ರ ಕಾರ್ಮಿಕ ದಿನಾಚರಣೆಯ ಸಂದೇಶ ‘ಶೋಷಿತ ಕಾರ್ಮಿಕರು ಒಗ್ಗೂಡಿ ಹೋರಾಟಕ್ಕೆ ಮುಂದಾಗಿ ಸಮಾಜವಾದಿ ಸಮಾಜ ಸ್ಥಾಪನೆಗೆ ಕಂಕಣಬದ್ಧರಾಗಬೇಕು' ಎಂಬುದಾಗಿದೆ.
ಈ ಎಲ್ಲಾ ನಿಟ್ಟಿನಲ್ಲಿ ಕಾರ್ಮಿಕನು ತನಗೆ, ತನ್ನವರಿಗೋಸ್ಕರ ಕಾರ್ಮಿಕ ಪ್ರಭುತ್ವದ ಅಡಿಯಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿ ಜೀವನ ಸಾಗಿಸುತ್ತಾ ನಡೆಯುತ್ತಿರುವ ಇವನಿಗೊಂದು ದಿನವನ್ನು ಮೀಸಲಿಟ್ಟರೆ ಅದಕ್ಕೆ ಶುಭಾರ್ಥ ಸಿಗಬಹುದೆಂಬ ಚಿಂತನೆಗಳು ಅನಾದಿಕಾಲದಿಂದ ಬೆಳೆದುಕೊಂಡು ಬಂದಿತ್ತು. ಕಾರ್ಮಿಕ ಪ್ರಭುತ್ವದ ಕುರುಹುಗಾಗಿ ಮೇ ೧ ರಂದು ಉತ್ಸವ ಆಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದನಂತೆ ಎಂದು ಎನ್ನುತ್ತಾರೆ. ಆದರೆ ವಾಸ್ತವವಾಗಿ ೧೮೮೯ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಯಾವ ಪುರಾವೆಗಳು ದೊರಕಿಲ್ಲ. ೧೮೮೯ ರಲ್ಲಿ ಪ್ಯಾರಿಸ್ನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟಿçÃಯ ಪ್ರಥಮ ಅಧಿವೇಶನದಲ್ಲಿ ಮೇ ೧ನೇ ತಾರೀಕು ಅಂತರರಾಷ್ಟಿçÃಯ ಉತ್ಸವವೆಂದು ಆಚರಿಸಬೇಕು ಎಂದು ನಿರ್ಧರಿಸಲಾಯಿತು. ಅಲ್ಲದೆ ಅಂದು ಸಾರ್ವಜನಿಕ ರಜಾ ದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನಿರ್ಧರಿಸಲಾಯಿತು. ಯುರೋಪಿನ ಬಹುತೇಕ ರಾಷ್ಟçಗಳಲ್ಲಿ ಮೇ ೧ ರಂದು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಹಾಗೆಯೇ ಭಾರತದಲ್ಲಿ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವ ಹೆಚ್ಚಿದ್ದರಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲ ಭಾರತೀಯ ಕಾರ್ಮಿಕರು ಇಂಗ್ಲೆAಡಿನಲ್ಲಿ ಇದ್ದ ಭಾರತೀಯ ನಾವಿಕರು. ಅವರು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನು ಒಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ೧೯೨೫ ರಂದು ಮೆರವಣಿಗೆಯಲ್ಲಿ ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು. ಹಾಗಾಗಿ ಭಾರತದಲ್ಲಿ ಅವರ ನೆನಪಿಗಾಗಿ ಈ ಮೇ ೧ ರಂದು ಕಾರ್ಮಿಕ ದಿನವೆಂದು ಘೋಷಿಸಲಾಯಿತು. ೧೯೨೭ ರಿಂದ ಈಚೆಗೆ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು, ಅದೇ ರೀತಿ ಎರಡನೇ ಮಹಾಯುದ್ಧದ ನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ವಿಶೇಷವಾಗಿ ಮಹಾರಾಷ್ಟç ಮತ್ತು ಕರ್ನಾಟಕದಲ್ಲಿ ಆಚರಿಸಲಾಗುತ್ತದೆ. ಇದು ಕಾರ್ಮಿಕ ಸಂಘಟನೆಗಳು, ಸನ್ಮಾನಗಳು ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಹಕ್ಕುಗಳನ್ನು ಗಮನಕ್ಕೆ ತರುತ್ತದೆ. ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳು ಒಟ್ಟಾಗಿ ತಮ್ಮ ಸೇವಕದಾರರ, ಉದ್ಯೋಗದಾತರ, ಗಣಿಗಳ ಅಥವಾ ಯಜಮಾನರ ಕೈಕೆಳಗೆ ದುಡಿಯುವ ಜನರ ಕೆಲಸಕ್ಕೆ ಸಂಬAಧಿಸಿದAತೆ ರಚಿತವಾದ ಕೆಲವು ಕಾನೂನುಗಳು. ಇವನ್ನು ಕೈಗಾರಿಕಾ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದು ಕರೆಯಬಹುದಾಗಿದೆ. ಉದ್ಯೋಗದಾತ ಅವನ ಅಧೀನದಲ್ಲಿ ಕೆಲಸ ಮಾಡುವವನಿಗೆ ಏರ್ಪಡುವ ಸಂಬAಧವನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವುದು ಅವಶ್ಯ ಯಜಮಾನ. ಕಾರ್ಮಿಕರ ನಡುವಿನ ಸಂಬAಧ ವಾಸ್ತವವಾಗಿ ಇರಲಿ, ಕಾರ್ಮಿಕನ ದುಡಿಮೆ ದೈಹಿಕವಾಗಿರಲಿ ಅಥವಾ ಮಾನಸಿಕವಾದ್ದದ್ದಾಗಿರಲಿ ಇಂತಹ ಎಲ್ಲ ಸಂದರ್ಭಗಳಿಗೂ ಈ ಕಾರ್ಮಿಕ ಕಾನೂನುಗಳು ಅನ್ವಯಿಸುತ್ತದೆ. ಸ್ವತಂತ್ರವಾಗಿ ದುಡಿಮೆ ಮಾಡುವವರಿಗೆ ಕಾರ್ಮಿಕ ಕಾನೂನು ಅನ್ವಯಿಸುವುದಿಲ್ಲ. ವ್ಯಾಪಕವಾದ ಅರ್ಥದಲ್ಲಿ ಪರಿಗಣಿಸಿದಾಗ ಸಂಘಟನೆ ನಿರುದ್ಯೋಗ ನಿವಾರಣೆ, ಕೈಗಾರಿಕಾ ಸಂಬAಧಗಳು, ಮುಷ್ಕರಗಳು, ಕಾರ್ಖಾನೆಗಳ ಬೀಗಮುದ್ರೆ ಸಂಬAಧಿಸಿದ ಕಾನೂನುಗಳನ್ನು ತೆಗೆದುಕೊಂಡು ಅದರಂತೆ ನಡೆಯುವುದು ಈ ದಿನದ ಮಹತ್ವ ಮತ್ತು ಕರ್ತವ್ಯವಾಗಿದೆ. ಇವೆಲ್ಲದರ ಪರಿಣಾಮವಾಗಿ ಅಂದಿನಿAದ ಇಂದಿನವರೆಗೆ ಭಾರತದಲ್ಲಿ ಅಂತರರಾಷ್ಟಿçÃಯ ಕಾರ್ಮಿಕ ದಿನಾಚರಣೆಯನ್ನು ಪ್ರತಿವರ್ಷ ಮೇ ೧ನೇ ತಾರೀಕಿನಂದು ಆಚರಿಸಲಾಗುತ್ತಿದೆ. ಇದರ ಮಹತ್ವವನ್ನು ವಿಶ್ವದಲ್ಲೇ ಪ್ರಥಮ ಸಮಾಜವಾದಿ ರಾಷ್ಟç ನಿರ್ಮಾಪಕ ರಷ್ಯಾ ಕ್ರಾಂತಿಕಾರಿ ನಾಯಕ ಲೆನಿನ್ ಬಣ್ಣಿಸಿದ್ದು ಹೀಗೆ “ಒಂದು ಸಂಪ್ರದಾಯ ಕ್ರಿಯೆಯಲ್ಲಿ ಶೋಷಿತ ವರ್ಗಗಳ ಹಾಗೂ ದೇಶಗಳ ವಿಮೋಚನೆಗಾಗಿ ನಡೆಸಬೇಕಾದ ಕ್ರಾಂತಿಕಾರಿ ಹೋರಾಟಗಳು, ರಾಜಕೀಯ ಹೋರಾಟಗಳು, ಸಾಮ್ರಾಜ್ಯಶಾಹಿ ವಿರೋಧಿ ಅಂತರರಾಷ್ಟಿçÃಯ ಕಾರ್ಮಿಕ ವರ್ಗದ ಹೋರಾಟ ಅವಶ್ಯಕವಾದ ಚೈತನ್ಯವನ್ನು ಕಾರ್ಮಿಕರು ಬೆಳೆಸಿಕೊಳ್ಳಬೇಕಾದ ಮಹತ್ವದ ದಿನವಿದು. ತಮಗೆ ಸಂಬAಧಿಸಿದ ದಿನನಿತ್ಯದ ಸಣ್ಣ ಸಣ್ಣ ಬೇಡಿಕೆಗಳಿಗಾಗಿ ಆಂದೋಲನ ನಡೆಸುವ ಸಂದರ್ಭವಲ್ಲ. ಅಂತರವನ್ನು ಅರಿತುಕೊಂಡು ಮೇ ದಿನವನ್ನು ಆಚರಿಸುವುದು ಅತ್ಯವಶ್ಯ” ಎಂದು ಹೇಳಿದ ಈ ಒಂದು ಸಂದೇಶ ನಿಜಕ್ಕೂ ಅದ್ಭುತವಾಗಿದೆ.ಆ ಒಂದು ನಿಟ್ಟಿನಲ್ಲಿ ಕಾರ್ಮಿಕ ದಿನವನ್ನು ಆಚರಿಸಬೇಕಾಗಿದೆ.
“ಲೇಬರ್ ಡೇ". ಅಂತರರಾಷ್ಟಿçÃಯ ಕಾರ್ಮಿಕ ದಿನಾಚರಣೆಯಲ್ಲಿ ಪ್ರತಿವರ್ಷ ಈ ದಿನದ ಮಹತ್ವವನ್ನು ಪ್ರಪಂಚದ ಹಲವು ದೇಶಗಳಲ್ಲಿ ಅತಿ ಸಡಗರದಿಂದ, ಸಂಭ್ರಮದಿAದ ಆಚರಿಸಲಾಗುತ್ತಿದೆ. ಈ ದಿನದಂದು ಕಾರ್ಮಿಕ ಆಂದೋಲನ, ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಗುರುತಿಸಲಾಗುತ್ತದೆ. ಅಲ್ಲದೆ ಬಹುತೇಕ ರಾಷ್ಟçಗಳಲ್ಲಿ ಕಾರ್ಮಿಕರ ಮೆರವಣಿಗೆ ಪ್ರದರ್ಶನ ಏರ್ಪಡಿಸಿ ಮಾನವೀಯ ಮೌಲ್ಯಗಳೊಂದಿಗೆ ವಿಶೇಷತೆಯನ್ನು ಮತ್ತು ಕಾರ್ಮಿಕ - ಮಾಲೀಕರ ಸಹಭಾಗಿತ್ವವನ್ನು ಇಲ್ಲಿ ಜರುಗಬಹುದಾದ ಕಾರ್ಮಿಕ ಕಾನೂನುಗಳನ್ನು ಪರಸ್ಪರ ಆರೋಗ್ಯಕರ ಹಂಚಿಕೆಯೊAದಿಗೆ ಸಂಭ್ರಮದಿAದ ಆಚರಿಸಲಾಗುತ್ತದೆ.
"ಕಾರ್ಯವೇ ದೇವರು... ಕಾರ್ಮಿಕನ ಶ್ರಮವೇ ರಾಷ್ಟçದ ಶಕ್ತಿ. ದೇಶದ ನೇರ ಬೆನ್ನೆಲುಬಾದ ಕಾರ್ಮಿಕರ ಪರಿಶ್ರಮಕ್ಕೆ ಪ್ರೀತಿಯ ಗೌರವ ನೀಡೋಣ"
- ಈರಮಂಡ ಹರಿಣಿ ವಿಜಯ್, ಕೋಡಂಬೂರು.
ಮೊ. ೯೭೪೦೯೭೦೮೪೦