ಶನಿವಾರಸಂತೆ, ಏ.೨೯: ಸಮೀಪದ ಕೊಡ್ಲಿಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಇತರ ಹಿಂದೂಪರ ಸಂಘಟನೆಗಳು ಕಾಶ್ಮೀರದ ಪೆಹಲ್ಗಾವ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಜನ ಜಾಗೃತಿ ಹಾಗೂ ಉಗ್ರರ ದಾಳಿಯಿಂದ ಮೃತರಾದ ಕಾಶ್ಮೀರಿ ಪ್ರವಾಸಿಗರಿಗೆ ಸಂತಾಪ ಸೂಚಿಸುವ ಉದ್ದೇಶದಿಂದ ಸಂತಾಪ ಸಭೆ ಆಯೋಜಿಸಿದ್ದರು.

ಕೊಡ್ಲಿಪೇಟೆ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ ೬ ರಿಂದ ೮ ಗಂಟೆಯವರೆಗೆ ಮುಚ್ಚುವ ಮೂಲಕ ವಾಣಿಜ್ಯ ವರ್ತಕರು ಹಾಗೂ ಸಾರ್ವಜನಿಕರು ಹತರಾದವರಿಗೆ ಸಂತಾಪ ಸೂಚಿಸಿ ಚಿರಶಾಂತಿ ಕೋರಿದರು.

ಕೊಡ್ಲಿಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಮಂಭಾಗದಿAದ ಕೊಡ್ಲಿಪೇಟೆಯ ಸರ್ವ ನಾಗರಿಕರು ಮತ್ತು ಸಾರ್ವಜನಿಕರು ಪಂಜಿನ ಮೆರವಣಿಗೆ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಪ್ರಾರ್ಥನಾ ಕಾರ್ಯಕಾರಿಣಿ ಸದಸ್ಯ ಉಲ್ಲಾಸ್ ತಿಮ್ಮಯ್ಯ ಹಾಗೂ ಬಿಜೆಪಿ ಮುಖಂಡ ಭಗವಾನ್ ದಾಸ್ ಘಟನೆ ಖಂಡಿಸಿ ಮಾತನಾಡಿದರು. ಪ್ರಮುಖರಾದ ಬಿಜೆಪಿ ಸೋಮವಾರಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಮೋಕ್ಷಿಕ್ ರಾಜ್, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ಪ್ರಮುಖರಾದ ದಿನೇಶ್, ಯತೀಶ್, ಅಂಜು, ದಯಾನಂದ್, ಹರೀಶ್, ಯತೀಶ್, ಮಮತಾ ಸತೀಶ್, ಭಾನುಮತಿ, ಇತರ ನೂರಾರು ಮಂದಿ ಪಾಲ್ಗೊಂಡಿದ್ದರು.