ಮುಳ್ಳೂರು, ಏ. ೨೯: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗಕ್ಕೆ ಸೇರಿದ ಬಸ್ ಈಗಾಗಲೆ ಕುಶಾಲನಗರದಿಂದ ಬಾಣವಾರ, ಆಲೂರು ಸಿದ್ದಾಪುರ, ಮುಳ್ಳೂರು, ಗೋಪಾಲಪುರ, ಶನಿವಾರಸಂತೆ ಮಾರ್ಗವಾಗಿ ಕೊಡ್ಲಿಪೇಟೆಗೆ ಸಂಚರಿಸುತ್ತಿತ್ತು ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾರ್ಗವನ್ನು ಬದಲಾಯಿಸಿ ಬಸ್ನ ವ್ಯವಸ್ಥೆ ಇಲ್ಲದಿರುವ ಜಾಗೆನಹಳ್ಳಿ, ನಿಡ್ತ, ಹಾರೆಹೊಸೂರು ಮಾರ್ಗದಲ್ಲಿ ಸಂಚರಿಸುವAತೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ ಮತ್ತು ಪುತ್ತೂರು ವಿಭಾಗದ ಅಧಿಕಾರಿಗಳು ಜಾಗೆನಹಳ್ಳಿ, ನಿಡ್ತ, ಹಾರೆಹೊಸೂರು ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಡ್ತ ಗ್ರಾಮದಲ್ಲಿ ತಮ್ಮೂರಿನ ಮಾರ್ಗವಾಗಿ ಸಂಚರಿಸುವ ಬಸ್ನ್ನು ಬರಮಾಡಿಕೊಂಡರು. ಬಸ್ಗೆ ಪೂಜೆ ಸಲ್ಲಿಸಿದರು ಬಸ್ ಹಾಗೂ ಚಾಲಕ ಮತ್ತು ಕಂಡೆಕ್ಟರ್ಗೆ ಹಾರಹಾಕಿ ಸ್ವಾಗತಿಸಿದರು.ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜಿ.ಎಂ. ಕಾಂತರಾಜ್ ಮಾತನಾಡಿ-ಸರಕಾರ ಗ್ರಾಮೀಣ ಭಾಗದಲ್ಲಿ ಬಸ್ಸಿನ ವ್ಯವಸ್ಥೆ ಇಲ್ಲದಿರುವ ಹೊಸ ಮಾರ್ಗಗಳಲ್ಲಿ ಬಸ್ ಸಂಚರಿಸಲು ಅವಕಾಶ ಮಾಡಿಕೊಡುತ್ತಿದೆ. ಜಾಗೆನಹಳ್ಳಿ, ನಿಡ್ತ, ಹಾರೆಹೊಸೂರು ಮಾರ್ಗದಲ್ಲಿ ಬಸ್ ವ್ಯವಸ್ಥೆ ಇರಲಿಲ್ಲ ಇದರಿಂದ ಜನರಿಗೆ, ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಗಮನ ಸೆಳೆಯಲಾಗಿತ್ತು. ಶಾಸಕ ಡಾ. ಮಂತರ್ ಗೌಡ ಮತ್ತು ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಜನರ ಕೋರಿಕೆಗೆ ಸ್ಪಂದಿಸಿ ಇದೆ ಮಾರ್ಗದಲ್ಲಿ ಬಸ್ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ತಾಲೂಕು ಕೆಡಿಪಿ ಸದಸ್ಯ ಎಸ್.ಸಿ. ಶರತ್ಶೇಖರ್, ಅನುಷ್ಠಾನ ಸಮಿತಿ ಸದಸ್ಯ ಸಂದೀಪ್, ನಿಡ್ತ ಗ್ರಾ.ಪಂ.ಸದಸ್ಯರಾದ ಕಾರ್ತಿಕ್, ಅಶೋಕ್, ತಸ್ಲೀಂ, ತೀರ್ಥಾನಂದ್ ಪ್ರಮುಖರಾದ ಚಂದ್ರಶೇಖರ್, ಅನಿಲ್. ಎನ್.ಬಿ.ವಿರೂಪಾಕ್ಷ ಬಸ್ ಚಾಲಕ ಧರ್ಮರಾಜ್, ನಿರ್ವಾಹಕ ವಿಜಯ್ ಮುಂತಾದವರು ಹಾಜರಿದ್ದರು. ಕುಶಾಲನಗರದಿಂದ ಬಸ್ ಬೆಳಗ್ಗೆ ೧೧.೩೦ ಕ್ಕೆ ಕೊಡ್ಲಿಪೇಟೆ ತಲುಪಿ ಮಧ್ಯಾಹ್ನ ೧.೩೦ ಕ್ಕೆ ಇದೆ ಮಾರ್ಗವಾಗಿ ಕುಶಾಲನಗರಕ್ಕೆ ಹೋಗುತ್ತದೆ.
-ಭಾಸ್ಕರ್ ಮುಳ್ಳೂರು