ಮಡಿಕೇರಿ, ಏ. ೨೯: ಮ್ಯಾನ್ಸ್ ಕಾಂಪೌAಡ್ ಕ್ಲಬ್ ವತಿಯಿಂದ ಮೇ ೧ ರಿಂದ ಮೇ ೨೦ರÀವರೆಗೆ ೧೬ ವಯಸ್ಸು ವಯೋಮಿತಿ ಒಳಗಿನ ಬಾಲಕ ಹಾಗೂ ಬಾಲಕಿಯರಿಗೆ ಮ್ಯಾನ್ಸ್ ಕಾಂಪೌAಡ್ ಫುಟ್ಬಾಲ್ ಮೈದಾನದಲ್ಲಿ ಪ್ರತಿದಿನ ಬೆಳಿಗ್ಗೆ ೬.೩೦ ರಿಂದ ೮.೩೦ರವರೆಗೆ ಫುಟ್ಬಾಲ್ ತರಬೇತಿ ಏರ್ಪಡಿಸಲಾಗಿದೆ.
ಭಾರತ ದೇಶ ಹಾಗೂ ಕರ್ನಾಟಕ ರಾಜ್ಯಕ್ಕೆ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಕೊಡಗಿನ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಎಂ.ಸಿ.ಸಿ ಕ್ಲಬ್ ವತಿಯಿಂದ ೨೦೨೪ ರ ಕರ್ನಾಟಕ ಮಿನಿ ಒಲಂಪಿಕ್‌ನ ೧೪ ರ ವಯೋಮಿತಿಯ ಬಾಲಕರ ಕೊಡಗು ತಂಡವನ್ನು ತರಬೇತುಗೊಳಿಸಿದ ನುರಿತ ತರಬೇತುದಾರರಾದ ಎ.ಎಂ. ಕ್ರಿಷ್ಟೋಫರ್ ತರಬೇತಿ ನೀಡಲಿದ್ದಾರೆ. ಆಸಕ್ತಿ ಇರುವ ಕ್ರೀಡಾಪಟುಗಳು ೭೦೧೯೯೦೯೪೯೫, ೯೪೪೮೯೭೬೪೦೬ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕ್ಲಬ್‌ನ ಕಾರ್ಯದರ್ಶಿ ಉಮೇಶ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.