ಮಡಿಕೇರಿ, ಏ. ೨೯: ಇತ್ತೀಚೆಗೆ ಕೂಡಿಗೆಯಲ್ಲಿ ನಡೆದ ಸರಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಸಹಾಯಕ ಕೆದಂಬಾಡಿ ಕವಿಪ್ರಸಾದ್ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯ ೪೫ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಡಬಲ್ಸ್ನಲ್ಲಿ ಕವಿಪ್ರಸಾದ್ ಹಾಗೂ ಶಿಕ್ಷಣ ಇಲಾಖೆಯ ಶಶಿಕುಮಾರ್ ಜೋಡಿ ಪ್ರಥಮ, ೪೫ ವರ್ಷ ಕೆಳಗಿನ ವಿಭಾಗದಲ್ಲಿ ಕವಿಪ್ರಸಾದ್ ಹಾಗೂ ಲೋಕೋಪಯೋಗಿ ಇಲಾಖೆಯ ಅರುಣ್‌ಕುಮಾರ್ ಜೋಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಪುರುಷರ ೪೫ ವರ್ಷ ಮೇಲ್ಪಟ್ಟವರ ವಿಭಾಗದ ಸಿಂಗಲ್ಸ್ನಲ್ಲಿ ಸುಂಟಿಕೊಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲೋಕೇಶ್ ಪ್ರಥಮ, ಕವಿಪ್ರಸಾದ್ ದ್ವಿತೀಯ, ೪೫ ವರ್ಷ ಕೆಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಶಿರಂಗಾಲ, ಪ.ಪೂ. ಕಾಲೇಜು ಉಪನ್ಯಾಸಕ ಗಿರೀಶ್ ಪ್ರಥಮ, ಅರುಣ್‌ಕುಮಾರ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಶಟಲ್ ಬ್ಯಾಡ್‌ಮಿಂಟನ್ ವಿಭಾಗದಲ್ಲಿ ಮೂರು ಪ್ರಶಸ್ತಿಯೊಂದಿಗೆ ಕವಿಪ್ರಸಾದ್ ಸಮಗ್ರ ಚಾಂಪಿಯನ್ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.