ಮಡಿಕೇರಿ, ಏ. ೨೯: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮತ್ತು ಮಿತ್ತೂರು ಪುರೋಹಿತ ಭವ್ಯ ಸಂಪ್ರತಿಷ್ಠಾನದ ಸಹಯೋಗದೊಂದಿಗೆ ಮೇ ೨ರಂದು ಶ್ರೀ ಶಂಕರ ಜಯಂತಿ ಆಚರಣೆ ನಡೆಯಲಿದೆ.

ಮಡಿಕೇರಿಯ ಶ್ರೀ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದ ನಿಧಿಯ ಶತಮಾನ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ೭.೩೦ರಿಂದ ೯ರವರೆಗೆ ವೈಭವ್ ತಂಡದಿAದ ರುದ್ರಾಭಿಷೇಕ ಪೂರ್ವಕ ಶಿವಪೂಜೆ, ೯.೩೦ರವರೆಗೆ ಉಪಹಾರ, ೧೦.೩೦ರವರೆಗೆ ವಿಪ್ರ ಮಹಿಳೆಯರಿಂದ ಸ್ತೋತ್ರ ಪಠಣ, ಶಂಕರ್ ಭಜನ್ ೧೧ ಗಂಟೆವರೆಗೆ, ಬೆಳ್ಳಾರೆಯ ಉಳುವಾನ ವೆಂಕಟೇಶ್ ಭಟ್ಟರಿಂದ ಉಪನ್ಯಾಸ ನಂತರ ಸನ್ಮಾನ, ರಸಪ್ರಶ್ನೆ, ಮಧ್ಯಾಹ್ನ ೧೨.೩೦ಕ್ಕೆ ಸಮಾರೋಪ ನುಡಿ, ಮಹಾಮಂಗಳಾರತಿ ಬಳಿಕ ಪ್ರಸಾದ ಭೋಜನ ನೆರವೇರಲಿದೆ ಎಂದು ನಿಧಿಯ ಪ್ರಕಟಣೆ ತಿಳಿಸಿದೆ.