ಸಂಪಾಜೆ, ಏ. ೨೯: ಇಲ್ಲಿಗೆ ಸಮೀಪದ ಕೊಯನಾಡಿನಲ್ಲಿ ಹೊಳೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ತಾ.೨೯ ರಂದು ಮಧ್ಯಾಹ್ನ ಸಂಭವಿಸಿದೆ.
ಮೃತ ಮಹಿಳೆಯನ್ನು ದಿ. ಅಣ್ಣುದಾಸ್ ಅವರ ಪತ್ನಿ ಯಶೋದ ದಾಸ್ (೬೦) ಎಂದು ಗುರುತಿಸಲಾಗಿದೆ.
ಅವರಿಗೆ ಪಾರ್ಶವಾಯು ಮತ್ತು ಹೃದಯ ಸಂಬAಧಿತ ಕಾಯಿಲೆ ಇದ್ದು, ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು. ಇಂದು ತನ್ನ ಮಗನಾದ ಉಮೇಶ್ ಅವರ ಜೊತೆ ಇವತ್ತು ಊಟಕ್ಕೆ ಕೋಳಿ ಸಾರು ಮಾಡಲು ಕೋಳಿಯನ್ನು ತರಲು ಹೇಳಿದ್ದಾರೆನ್ನಲಾಗಿದೆ. ಮಗ ಚಡಾವಿಗೆ ಹೋಗಿ ಕೋಳಿ ಮಾಂಸ ತಂದು ಮನೆಗೆ ಬಂದು ನೋಡಿದಾಗ , ಮಹಿಳೆ ಮನೆಯಲ್ಲಿ ಇರಲಿಲ್ಲ. ಕೂಡಲೇ ಅಕ್ಕ ಪಕ್ಕದವರ ಮನೆಯವರಿಗೆ ವಿಷಯ ತಿಳಿಸಿದ್ದು, ಹುಡುಕಾಟದಲ್ಲಿ ಮನೆಯ ಪಕ್ಕದ ಹೊಳೆಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.