ಕುಶಾಲನಗರ, ಏ. ೨೮: ಪಟ್ಟಣದ ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಸಾಯಿ ದೇವಾಲಯದ ಆವರಣದಲ್ಲಿ ಈ ತಿಂಗಳ ೩೦ ರಿಂದ ಶ್ರೀ ಗಣಪತಿ, ದತ್ತಾತ್ರೇಯ ಹಾಗೂ ನಾಗದೇವತೆ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಧರೇಶ್ ಬಾಬು ತಿಳಿಸಿದ್ದಾರೆ.
ಏಪ್ರಿಲ್ ೩೦ ಮತ್ತು ಮೇ ೧ರಂದು ಈ ಸಂಬAಧ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರಗುವುದು. ಮೇ ಒಂದರAದು ಪೂಜಾ ಕಾರ್ಯಕ್ರಮಗಳ ನಂತರ ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಇರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.