ಮಡಿಕೇರಿ, ಏ. ೨೮: ಶ್ರೀ ವಿನಾಯಕ ಕೊಡವಕೇರಿ, ಮಡಿಕೇರಿ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಇತ್ತೀಚೆಗೆ ಕುಡುವಂಡ ಬಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜ ಮಡಿಕೇರಿ ಇದರ ಸಭಾಂಗಣದಲ್ಲಿ ನಡೆಯಿತು.
ಕ್ರೀಡಾ ಪೈಪೋಟಿ ನಡೆಸಲಾಗಿ ಮಧ್ಯಾಹ್ನ ೧೨ ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭಿಸಿ ಮೂವೇರ ಯುಕ್ತಿ ಪೊನ್ನಪ್ಪಳಿಂದ ಪ್ರಾರ್ಥನೆಯಾಯಿತು. ಅಧ್ಯಕ್ಷರು ಕೇರಿಯು ಬೆಳೆದು ಬಂದ ರೀತಿ, ಕಷ್ಟ -ಸುಖಗಳಲ್ಲಿ ಪಾಲ್ಗೊಳ್ಳುವಿಕೆ, ಸಾಂಪ್ರದಾಯಿಕ ಆಟ್-ಪಾಟ್‌ಗಳನ್ನು ರೂಢಿಸಿಕೊಂಡು ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಅಂತರ್‌ಕೇರಿ ಮೇಳದಲ್ಲಿ ಭಾಗವಹಿಸಿ ಹೆಚ್ಚಿನ ಪೈಪೋಟಿ ಗಳಲ್ಲಿ ಬಹುಮಾನ ಗಳಿಸಿ ಸಮಗ್ರ ಬಹುಮಾನಕ್ಕೆ ಭಾಜನರಾಗಿ ರುವುದು ತುಂಬಾ ಸಂತೋಷ ಎಂದರು. ಇದೇ ರೀತಿ ಕೊಡ ವಾಮೆ ಬಾಳೋ ಸಮಾರಂಭದಲ್ಲಿ ಭಾಗಿಯಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದವರಿಗೆ ಉಟೋಪಚಾರದ ಸತ್ಕಾರದಲ್ಲಿ ಕೈಜೋಡಿಸಿದ್ದು ಹೆಮ್ಮೆಯ ವಿಚಾರವೆಂದು ತಿಳಿಸಿದರು.
ಕಾರ್ಯದರ್ಶಿ ಪೆಮ್ಮಡಿಯಂಡ ಬಿ. ಉತ್ತಪ್ಪ ಹಿಂದಿನ ಮಹಾ ಸಭೆಯ ನಡಾವಳಿಯನ್ನು ವಾಚಿಸಿದರು. ಅಧ್ಯಕ್ಷರಿಂದ ಲೆಕ್ಕಪತ್ರಗಳ ಮಂಡನೆ ಹಾಗೂ ಧನ ಸಹಾಯ ಮಾಡಿದವರ ವರದಿ ಯನ್ನು ಸಭೆಯಲ್ಲಿ ಮಂಡಿಸ ಲಾಯಿತು. ನಿರ್ದೇಶಕ ಬಲ್ಯಂಡ ವಿಜು ನಂಜಪ್ಪ ಆಡಳಿತ ಮಂಡಳಿ ವರದಿಯನ್ನು ಓದಿದರು. ಹಿರಿಯ ಸದಸ್ಯ ಮಾತಂಡ ಯಸ್. ಬೆಳ್ಯಪ್ಪ, ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದ ಚೊಟ್ಟೆಯಂಡ ಸಂಜು ಕಾವೇರಪ್ಪ, ಶೈಕ್ಷಣಿಕ ಕ್ಷೇತ್ರದಲ್ಲಿ ಮಂಡೇಟಿರ ನಿಹಾಲ್ ಬೆಳ್ಯಪ್ಪ, ಕ್ರೀಡಾರಂಗದಲ್ಲಿ ಅಚ್ಚಪಂಡ ಪರ್ಲಿನ್ ಪೊನ್ನಮ್ಮ ಇವರುಗಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ನಂತರ ಪೈಪೋಟಿಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಮುಂದಿನ ೩ ವರ್ಷಗಳಿಗೆ ಆಡಳಿತ ಮಂಡಳಿಗೆ ಆಯ್ಕೆ ನಡೆದು ಅಧ್ಯಕ್ಷರಾಗಿ ಪೆಮ್ಮಡಿಯಂಡ ಉತ್ತಪ್ಪ, ಉಪಾಧ್ಯಕ್ಷರಾಗಿ ನೆರವಂಡ ಅನಿತಾ ಪೂವಯ್ಯ, ಕಾರ್ಯದರ್ಶಿಯಾಗಿ ಪಾಸುರ ರಾಜ ಕಾವೇರಪ್ಪ, ಖಜಾಂಚಿಯಾಗಿ ಕಾಂಡೇರ ಲಲ್ಲು ಕುಟ್ಟಪ್ಪ, ನಿರ್ದೇಶಕರಾಗಿ ಕುಡುವಂಡ ಉತ್ತಪ್ಪ, ಬಲ್ಯಂಡ ವಿಜು ನಂಜಪ್ಪ, ಚೆಟ್ಟಿಯಾರಂಡ ಸುರೇಶ್ ಉತ್ತಯ್ಯ, ಕುಂಡ್ಯೋಳAಡ ಸಂಜು ಅಯ್ಯಪ್ಪ, ಮಂಡೇಟಿರ ಅಶ್ವಿನ್, ಬೊಟ್ಟೋಳಂಡ ಶಾಂತಿ ಅಚ್ಚಯ್ಯ, ಆಪಾಡಂಡ ರವಿ ಚಿಟ್ಯಪ್ಪ, ಚೊಟ್ಟೆಯಂಡ ಶರತ್, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಸಾಂಸ್ಕೃತಿಕ ಅಧ್ಯಕ್ಷರಾಗಿ ಚೊಟ್ಟೆಯಂಡ ಸಂಜು ಕಾವೇರಪ್ಪ ಅವರುಗಳನ್ನು ನೇಮಿಸಲಾಯಿತು.
ಸಾಂಸ್ಕೃತಿಕ ಅಧ್ಯಕ್ಷ ಚೊಟ್ಟೆಯಂಡ ಕೆ. ಅಪ್ಪಾಜಿ ಕೇರಿಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷೆ ಮಂಡೇಟಿರ ಡೇಸಿ ಮಂದಪ್ಪ ವಂದಿಸಿದರು. ವೇದಿಕೆಯಲ್ಲಿ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು. ರಾಷ್ಟçಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.