ಮಡಿಕೇರಿ, ಏ.೨೮ : ನವದೆಹಲಿ ರಾಷ್ಟಿçÃಯ ಮಹಿಳಾ ಆಯೋಗದ ಸದಸ್ಯರಾದ ಅರ್ಚನಾ ಮಜುಮ್ದಾರ್ ಅವರು ಜಿಲ್ಲಾ/ ರಾಜ್ಯ ಮಟ್ಟದಲ್ಲಿ ತಾ. ೨೯ ರಂದು ರಾಷ್ಟಿçÃಯ ಮಹಿಳಾ ಆಯೋಗ ಅಪ್ಕೆ ದ್ವಾರ್-ಮಹಿಳಾ ಜನ ಸುನ್ ವಾಯಿ ಸಭೆಯಲ್ಲಿ ಮಹಿಳೆಯರ ಅಹವಾಲು ಆಲಿಸಲು ಪಾಲ್ಗೊಳ್ಳುತ್ತಿದ್ದಾರೆ. ಈ ಸಂಬAಧ ಮಹಿಳೆಯರ ಅಹವಾಲು ಕಾರ್ಯಕ್ರಮವು ತಾ. ೨೯ ರಂದು ಬೆಳಿಗ್ಗೆ ೧೦ ಗಂಟೆಯಿAದ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಮಹಿಳೆಯರು ಮಹಿಳಾ ಜನ ಸುನ್ ವಾಯಿ ಈ ಸಭೆಯಲ್ಲಿ ನೇರವಾಗಿ ತಮ್ಮ ಅಹವಾಲುಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ, ಅಥವಾ ಕಚೇರಿ ದೂ.ಸಂ. ೦೮೨೭೨-೨೨೮೦೧೦ ಗೆ ಸಂರ್ಪಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.