ಗೋಣಿಕೊಪ್ಪಲು, ಏ.೨೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೨೨ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು. ಮೊದಲ ಪಂದ್ಯವು ಕುಂಞAಗಡ ಹಾಗೂ ಪುಳ್ಳಂಗಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕುಂಞAಗಡ ತಂಡವು ೨ ವಿಕೆಟ್ ಕಳೆದುಕೊಂಡು ೮೩ ರನ್ ಗಳಿಸಿತು.

ಪುಳ್ಳಂಗಡ ತಂಡ ೪ ವಿಕೆಟ್ ಕಳೆದುಕೊಂಡು ೫೨ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು. ಕುಂಞAಗಡ ತಂಡವು ೩೧ ರನ್ ಗಳ ಅಂತರದಲ್ಲಿ ಜಯ ಗಳಿಸಿತು.

ಎರಡನೇ ಪಂದ್ಯವು ಮಾಳೇಟಿರ (ಕೆದಮುಳ್ಳೂರ್) ಹಾಗೂ ಕಾಂಡೆರ ತಂಡದ ನಡುವೆ ನಡೆಯಿತು. ಮಾಳೇಟಿರ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೩೯ ರನ್‌ಗಳಿಸಿತು.

ಕಾಂಡೆರ ತಂಡವು ೪ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಸೋತಿತು. ಮಾಳೇಟಿರ ತಂಡವು ೧೦ ವಿಕೆಟ್ ಗಳ ಅಂತರದಲ್ಲಿ ಜಯ ಗಳಿಸಿತು. ಮೂರನೇ ಪಂದ್ಯವು ಚೆರುಮಂದAಡ ಹಾಗೂ ತಂಬುಕುತ್ತಿರ ತಂಡದ ನಡುವೆ ನಡೆದು ತಂಬುಕುತ್ತಿರ ತಂಡವು ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೧೦೫ ರನ್ ಗಳಿಸಿತು.

ಚೆರುಮಂದAಡ ತಂಡವು ೪ ವಿಕೆಟ್ ಕಳೆದುಕೊಂಡು ೭೭ ರನ್ ಗಳಿಸಿ ಸೋಲನುಭವಿಸಿತು. ತಂಬುಕುತ್ತಿರ ತಂಡವು ೨೮ ರನ್‌ಗಳ ಅಂತರದಿAದ ಜಯಗಳಿಸಿತು. ನಾಲ್ಕನೇ ಪಂದ್ಯವು ಪಂದ್ಯAಡ ಹಾಗೂ ಉದ್ದಪಂಡ ತಂಡದ ನಡುವೆ ನಡೆದು ಪಂದ್ಯAಡ ತಂಡವು ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೩೯ ರನ್ ಗಳಿಸಿತು.

ಉದ್ದಪಂಡ ತಂಡ ೬ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿ ಸೋತಿತು. ಪಂದ್ಯAಡ ತಂಡವು ೧೦ ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿತು. ಐದನೇ ಪಂದ್ಯವು ನಂದೇಟಿರ ಹಾಗೂ ಚಿರಿಯಪಂಡ ತಂಡದ ನಡುವೆ ನಡೆದು ಚಿರಿಯಪಂಡ ತಂಡವು ನಿಗದಿತ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೩೮ ರನ್‌ಗಳಿಸಿತು. ನಂದೇಟಿರ ತಂಡವು ೬ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿ ಸೋಲು ಕಂಡಿತು.

ಚಿರಿಯಪAಡ ತಂಡವು ೩ ರನ್ ಗಳ ಅಂತರದಲ್ಲಿ ಜಯಗಳಿಸಿತು. ಆರನೇ ಪಂದ್ಯವು ಮೂಕಳಮಾಡ ಹಾಗೂ ಅಲ್ಲಂಗಡ ತಂಡದ ನಡುವೆ ನಡೆದು ಬ್ಯಾಟಿಂಗ್ ಆಯ್ದುಕೊಂಡ ಅಲ್ಲಂಗಡ ತಂಡ ನಿಗದಿತ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸಿತು. ಮೂಕಳಮಾಡ ನಿಗದಿತ ಓವರ್‌ನಲ್ಲಿ ೭ ವಿಕೆಟ್ ಕಳೆದುಕೊಂಡು ೨೮ರನ್ ಗಳಿಸಿ ಸೋಲನ್ನು ಅನುಭವಿಸಿತು. ಅಲ್ಲಂಗಡ ತಂಡವು ೧೮ರನ್ ಗಳ ಅಂತರದಲ್ಲಿ ಜಯಗಳಿಸಿತು.

ಏಳನೇ ಪಂದ್ಯವು ಬಲ್ಲನಮಾಡ ಹಾಗೂ ಕಲಿಯಂಡ ತಂಡದ ನಡುವೆ ನಡೆದು ಕಲಿಯಂಡ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೮೨ ರನ್ ಗಳಿಸಿತು. ಬಲ್ಲನಮಾಡ ತಂಡವು ನಿಗದಿತ ಓವರ್ ೩ ವಿಕೆಟ್ ಕಳೆದುಕೊಂಡು ೪೧ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಕಲಿಯಂಡ ತಂಡವು ೪೧ ರನ್ ಗಳ ಅಂತರದಲ್ಲಿ ಜಯಗಳಿಸಿತು. - ಹೆಚ್.ಕೆ.ಜಗದೀಶ್