ಮಡಿಕೇರಿ, ಏ. ೨೮: ಮಡಿಕೇರಿ ನಗರಸಭೆಯ ೨ನೇ ಅವಧಿಯ ಅಧ್ಯಕ್ಷರಾಗಿ ೯ನೇ ವಾರ್ಡ್ ಸದಸ್ಯೆ ಕಲಾವತಿ ಹಾಗೂ ಉಪಾಧ್ಯಕ್ಷರಾಗಿ ೨ನೇ ವಾರ್ಡ್ ಸದಸ್ಯ ಮಹೇಶ್ ಜೈನಿ ಆಯ್ಕೆಯಾಗಿದ್ದು, ಕೌತುಕ ಮೂಡಿಸಿದ್ದ ರಾಜಕೀಯ ವಿದ್ಯಮಾನಗಳಿಗೆ ಇದೀಗ ತೆರೆಬಿದ್ದಿದೆ.
ಹಿಂದಿನ ಲೋಕಸಭಾ ಚುನಾವಣಾ ನೀತಿ ಸಂಹಿತೆ, ಮೀಸಲಾತಿಗೆ ನ್ಯಾಯಲಯದಲ್ಲಿದ್ದ ತಡೆಯಾಜ್ಞೆ ಕಾರಣದಿಂದ ಕಳೆದ ಒಂದು ವರ್ಷದಿಂದÀ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದೆ ಸ್ಥಾನ ಖಾಲಿಯಿತ್ತು. ಕೆಲ ತಿಂಗಳಿನಿAದ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೀಸಲಾತಿ ಕುರಿತು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡ ಹಲವು ತಿಂಗಳುಗಳ ಬಳಿಕ ಇಂದು ಪ್ರಕ್ರಿಯೆ ನಡೆದು ಬಾಕಿ ಉಳಿದಿರುವ ಒಂದೂವರೆ ವರ್ಷದ ಅವಧಿಗೆ ಅಂತಿಮವಾಗಿ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗುವಂತಾಯಿತು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಕಲಾವತಿ ಹಾಗೂ ಎಸ್.ಡಿ.ಪಿ.ಐ. ಪಕ್ಷದ ಮೇರಿ ವೇಗಸ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮಹೇಶ್ ಜೈನಿ ಹಾಗೂ ಎಸ್.ಡಿ.ಪಿ.ಐ. ಪಕ್ಷದ ಬಶೀರ್ ನಾಮಪತ್ರವನ್ನು ಕೈಗೊಂಡರು. ನಗರಸಭೆ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಚುನಾವಣಾ ಪ್ರಕ್ರಿಯೆ ನಡೆಸಿದರು.
ಬೆಳಿಗ್ಗೆ ೧೧ ಗಂಟೆಯಿAದ ಮ. ೧ ಗಂಟೆಯ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿತ್ತು. ಮಧ್ಯಾಹ್ನ ೧ ಗಂಟೆಯಿAದ ೨ ಗಂಟೆ ತನಕ ನಾಮಪತ್ರ ಪರಿಶೀಲನೆ ನಡೆದು ನಾಮಪತ್ರ ಯಾರು ಹಿಂಪಡೆಯದ ಹಿನ್ನೆಲೆ ಮಧ್ಯಾಹ್ನ ೩ ಗಂಟೆಗೆ ಮತದಾನ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಆರಂಭಿಸಿದರು.
ಮತದಾನ ಪ್ರಕ್ರಿಯೆ
೨೩ ಸದಸ್ಯರು ಸೇರಿದಂತೆ ಸಂಸದ ಯದುವೀರ್ ಒಡೆಯರ್ ಸಮಕ್ಷಮದಲ್ಲಿ ಆಯ್ಕೆ ಪ್ರಕ್ರಿಯೆ ಸಂಬAಧ ಚುನಾವಣಾಧಿಕಾರಿ ವಿನಾಯಕ್ ನರ್ವಾಡೆ ಮಾಹಿತಿ ಒದಗಿಸಿ ಅಭ್ಯರ್ಥಿಗಳ ಪರ ಕೈ ಎತ್ತಿ ಮತ ಚಲಾಯಿಸುವಂತೆ ವಿವರಿಸಿದರು. ಬಿಜೆಪಿಯ ೧೬ ಸದಸ್ಯರು ಹಾಗೂ ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಮತ ಚಲಾಯಿಸಿ ಒಟ್ಟು ೧೭ ಮತಗಳು
(ಮೊದಲ ಪುಟದಿಂದ) ಬಿಜೆಪಿಯ ಕಲಾವತಿ ಹಾಗೂ ಮಹೇಶ್ ಜೈನಿ ಪರ ದೊರೆತ ಪರಿಣಾಮ ಇಬ್ಬರು ನಿರಾಯಸವಾಗಿ ಚುನಾಯಿತಗೊಂಡರು.
ಮೇರಿ ವೇಗಸ್ ಹಾಗೂ ಬಶೀರ್ ಅವರುಗಳಿಗೆ ಎಸ್.ಡಿ.ಪಿ.ಐ. ೫ ಸದಸ್ಯರು ಮತ ಚಲಾಯಿಸಿದರು. ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ, ಜೆಡಿಎಸ್ ಸದಸ್ಯ ಮುಸ್ತಾಫ ಯಾರಿಗೂ ಮತ ನೀಡದೆ ತಟಸ್ಥ ನಿಲುವು ತೋರಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪೌರಾಯುಕ್ತ ರಮೇಶ್ ಭಾಗವಹಿಸಿದ್ದರು.
ಅನಿರೀಕ್ಷಿತ ತಿರುವಿನಲ್ಲಿ ಕಲಾವತಿ ಆಯ್ಕೆ
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ, ಜೆಡಿಎಸ್ ಸದಸ್ಯ ಮುಸ್ತಾಫ ಯಾರಿಗೂ ಮತ ನೀಡದೆ ತಟಸ್ಥ ನಿಲುವು ತೋರಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪೌರಾಯುಕ್ತ ರಮೇಶ್ ಭಾಗವಹಿಸಿದ್ದರು.
ಅನಿರೀಕ್ಷಿತ ತಿರುವಿನಲ್ಲಿ ಕಲಾವತಿ ಆಯ್ಕೆ
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವೀಕ್ಷಕರುಗಳಾದ ಕ್ಯಾ. ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರುಗಳಾದ ರಾಬಿನ್ ದೇವಯ್ಯ, ಭಾರತೀಶ್, ಮನು ಮುತ್ತಪ್ಪ ಸೇರಿದಂತೆ ೧೨ ಮಂದಿ ಒಳಗೊಂಡ ಕೋರ್ ಕಮಿಟಿ ಸದಸ್ಯರು ಸಭೆ ನಡೆಸಿದರು.
ಭಾನುವಾರವೂ ಆಯ್ಕೆ ಸಂಬAಧ ಸಭೆ ನಡೆದಿದ್ದು, ಆಕಾಂಕ್ಷಿಗಳೊAದಿಗೆ ವೀಕ್ಷಕರು, ನಾಯಕರು ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಒಮ್ಮತದ ತೀರ್ಮಾನಕ್ಕೆ ಬಾರದ ಹಿನ್ನೆಲೆ ಸೋಮವಾರವೂ ಮತ್ತೊಂದು ಸುತ್ತಿನ ಸಭೆ ನಡೆಸುವ ಪರಿಸ್ಥಿತಿ ತಲೆದೋರಿತು.
ಕೊನೆಕ್ಷಣದ ತನಕವೂ ಬಿಜೆಪಿಯ ಉಷಾ ಕಾವೇರಪ್ಪ ಅಥವಾ ಕುಟ್ಟನ ಶ್ವೇತಾ ಪ್ರಶಾಂತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ ಎಂಬ ಪ್ರಬಲ ನಂಬಿಕೆ ಪಕ್ಷದ ಕಾರ್ಯಕರ್ತರಲ್ಲಿತ್ತು. ಬಿಜೆಪಿ ಕಚೇರಿಯಲ್ಲಿದ್ದವರು ಕೂಡ ಇದೇ ವಾದ ಮಾಡುತ್ತಿದ್ದರು. ಕೋರ್ ಕಮಿಟಿ ಸದಸ್ಯರ ಚರ್ಚೆ ಬಳಿಕ ಬಿಜೆಪಿಯ ಎಲ್ಲಾ ೧೬ ಸದಸ್ಯರನ್ನು ಕರೆಸಿ ವರಿಷ್ಠರು ಕಲಾವತಿ ಹಾಗೂ ಮಹೇಶ್ ಜೈನಿ ಹೆಸರನ್ನು ಅಂತಿಮಗೊಳಿಸಿ ಘೋಷಿಸಿದರು. ಅಧ್ಯಕ್ಷ ಸ್ಥಾನಕ್ಕೆ ಉಷಾ ಹಾಗೂ ಶ್ವೇತಾ ಪಟ್ಟು ಹಿಡಿದ ಹಿನ್ನೆಲೆ ವರಿಷ್ಠರು ಮೂರನೇ ಆಕಾಂಕ್ಷಿಗೆ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ.
ಮಧ್ಯಾಹ್ನ ೧೨.೩೦ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹೆಸರು ಅಂತಿಮಗೊಳ್ಳುತ್ತಿದ್ದAತೆ ಮಹೇಶ್ ಜೈನಿ ಮೊದಲು ಕೋರ್ ಕಮಿಟಿ ಸಭೆ ನಡೆಯುತ್ತಿದ್ದ ಕೊಠಡಿಯಿಂದ ಹೊರಬಂದರು. ಅನಂತರ ಕಲಾವತಿ ಆನಂದ ಭಾಷ್ಮದೊಂದಿಗೆ ಹೊರಬಂದು ಸಂಭ್ರಮ ಹಂಚಿಕೊAಡರು. ನಾಮಪತ್ರ ಸಲ್ಲಿಕೆಗೆ ಇನ್ನೂ ೩೦ ನಿಮಿಷಗಳ ಅವಕಾಶವಿದ್ದ ಕಾರಣದಿಂದ ಬಿಜೆಪಿ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಪ್ರಮುಖರೊಂದಿಗೆ ತೆರಳಿದ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಜೈನಿ ಮೊದಲು ಕೋರ್ ಕಮಿಟಿ ಸಭೆ ನಡೆಯುತ್ತಿದ್ದ ಕೊಠಡಿಯಿಂದ ಹೊರಬಂದರು. ಅನಂತರ ಕಲಾವತಿ ಆನಂದ ಭಾಷ್ಮದೊಂದಿಗೆ ಹೊರಬಂದು ಸಂಭ್ರಮ ಹಂಚಿಕೊAಡರು. ನಾಮಪತ್ರ ಸಲ್ಲಿಕೆಗೆ ಇನ್ನೂ ೩೦ ನಿಮಿಷಗಳ ಅವಕಾಶವಿದ್ದ ಕಾರಣದಿಂದ ಬಿಜೆಪಿ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಪ್ರಮುಖರೊಂದಿಗೆ ತೆರಳಿದ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.