ಮಡಿಕೇರಿ, ಏ. ೨೮: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ದಿ ಎಲೈಟ್ ಹಾಗೂ ದಿ ಎಲೈಟ್ ಸ್ಕಾ÷್ವಡ್ ೨ ತಂಡಗಳು ಗೆಲುವು ಸಾಧಿಸಿದವು.
ಎಲೈಟ್ ಸ್ಕಾ÷್ವಡ್ ೨ ತಂಡ ೫ ವಿಕೆಟ್‌ಗೆ ೧೮೭ ರನ್ ಗಳಿಸಿತು. ಕಾಫಿ ಕ್ರಿಕೆರ‍್ಸ್ ತಂಡ ೯ ವಿಕೆಟ್‌ಗೆ ೧೨೬ ರನ್ ಗಳಿಸಿ ಸೋಲನುಭವಿಸಿತು. ಯಶವಂತ್ ಆರ್. ೭೪ ರನ್ ಗಳಿಸಿ ೩ ವಿಕೆಟ್ ಪಡೆದರು. ಮುನೀಶ್ ಬೈಲೆ ೫೩ ರನ್‌ಗಳಿಸಿ ೪ ವಿಕೆಟ್ ಪಡೆದರು.
ಎರಡನೇ ಪಂದ್ಯದಲ್ಲಿ ದಿ ಎಲೈಟ್ ತಂಡ ೭ ವಿಕೆಟ್‌ಗೆ ೧೪೮ ರನ್‌ಗಳಿಸಿತು. ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ೭ ವಿಕೆಟ್‌ಗೆ ೧೪೪ ರನ್‌ಗಳಿಸಿ ಸೋಲು ಕಂಡಿತು. ಚೆರಿಯಮನೆ ನಾಯನ್ ೩೬ ರನ್‌ಗಳಿಸಿ ೨ ವಿಕೆಟ್ ಪಡೆದರು. ಅಂಜನ್ ತಿಮ್ಮಯ್ಯ ೫೧ ರನ್ ಗಳಿಸಿದರು.