ಮಡಿಕೇರಿ, ಏ. ೨೮: ಮರಗೋಡು ಈವಿನಿಂಗ್ ಸ್ಟಾರ್ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಹಬ್ಬದಲ್ಲಿ ಎಡಿಕೇರಿ (ಎ), ಬಿಳಿಯಂಡ್ರ, ಕರ್ಕರನ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.
ಇಂದು ನಡೆದ ಪಂದ್ಯದಲ್ಲಿ ಕಾಳಮನೆ ೫ ವಿಕೆಟ್ಗೆ ೪೭ ರನ್ ಗಳಿಸಿತು. ಎಡಿಕೇರಿ (ಎ) ಯಾವುದೇ ವಿಕೆಟ್ ನಷ್ಟವಿಲ್ಲದೆ ೫೦ ರನ್ ಬಾರಿಸಿ ಗೆಲುವು ಸಾಧಿಸಿತು.
ಎಡಿಕೇರಿ (ಎ) ೬ ವಿಕೆಟ್ಗೆ ೪೨ ರನ್ ಗಳಿಸಿದರೆ ಕಲ್ಲುಮುಟ್ಲು ೭ ವಿಕೆಟ್ಗೆ ೨೧ ರನ್ಗಳಿಸಿ ಸೋಲನುಭವಿಸಿತು.
ದೇಲಲುಪಾಡಿ ೪ ವಿಕೆಟ್ಗೆ ೪೧ ರನ್ ಗಳಿಸಿದರೆ, ಕರ್ಕರನ ೧ ವಿಕೆಟ್ಗೆ ೪೧ ರನ್ ಗಳಿಸಿ ಜಯಗಳಿಸಿತು.
ಕುಡೆಕಲ್ಲು ೩ ವಿಕೆಟ್ಗೆ ೭೯ ರನ್ ಗಳಿಸಿದರೆ, ಬಿಳಿಯಂಡ್ರ ೨ ವಿಕೆಟ್ಗೆ ೮೪ ರನ್ ಗಳಿಸಿ ಜಯಗಳಿಸಿತು.
ಪೋರೆ ಕುಂಜಿಲನ ೮ ವಿಕೆಟ್ಗೆ ೪೪ ರನ್ಗಳಿಸಿದರೆ, ಕಟ್ರತನ ೪ ವಿಕೆಟ್ಗೆ ೩೦ ರನ್ ಗಳಿಸಿ ಸೋತಿತು.
ಕರ್ಕರನ ವಿಕೆಟ್ಗೆ ೫೮ ರನ್ ಗಳಿಸಿದರೆ ಪೋರೆಯನ ೫ ವಿಕೆಟ್ಗೆ ೪೯ ರನ್ ಬಾರಿಸಿ ಸೋಲನುಭವಿಸಿತು. ಗುಡ್ಡೆಮನೆ ೩ ವಿಕೆಟ್ಗೆ ೪೪ ರನ್ ಗಳಿಸಿದರೆ, ಬಿಳಿಯಂಡ್ರ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೫ ರನ್ಗಳಿಸಿ ಜಯಗಳಿಸಿತು.
ನೆಯ್ಯಣಿರ ೪ ವಿಕೆಟ್ಗೆ ೩೨ ರನ್ ಗಳಿಸಿದರೆ, ಪೋರೆಯನ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೪ ರನ್ ಬಾರಿಸಿ ಜಯಗಳಿಸಿತು. ಇಂದು ನಡೆಯಬೇಕಿದ್ದ ಉಳಿದ ಪಂದ್ಯಗಳು ಮಳೆಯ ಕಾರಣದಿಂದ ಮೇ ೨ಕ್ಕೆ ಮುಂದೂಡಲ್ಪಟ್ಟಿದೆ.