ಐಗೂರು, ಏ. ೨೭: ಮಾದಾಪುರ ವ್ಯಾಪ್ತಿಯ ಕಾರೆಕಾಡಿನಲ್ಲಿ ಚೌಡೇಶ್ವರಿ ದೇವಿಯ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅರ್ಚಕರಾದ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಕುಂಕುಮಾರ್ಚನೆ, ಅಭಿಷೇಕ ಪೂಜೆ ಪ್ರಸಾದ ವಿನಿಯೋಗಗಳು ನಡೆದವು. ಉತ್ಸವದಲ್ಲಿ ದೇವಾಲಯದ ಅಧ್ಯಕ್ಷ ಕಿಶೋರ್, ಪದಾಧಿಕಾರಿಗಳಾದ ರಾಜೇಶ್, ಪ್ರಸಾದ್, ಜಯರಾಮ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು..