ಮಡಿಕೇರಿ, ಏ. ೨೭: ಕೊಡವ ಕೌಟುಂಬಿಕ ಹಾಕಿ ಉತ್ಸವ ಕಳೆದ ಬಾರಿ ೨೪ನೇ ವರ್ಷದಲ್ಲಿ ಗಿನ್ನಿಸ್ ಬುಕ್ ರೆಕಾರ್ಡ್ಸ್ನಲ್ಲಿ ದಾಖಲಾಗಿತ್ತು. ನಾಪೋಕ್ಲುವಿನಲ್ಲಿ ಜರುಗಿದ ಕುಂಡ್ಯೋಳAಡ ಹಾಕಿ ನಮ್ಮೆಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನ ಮುಖ್ಯಸ್ಥರು ಅಲ್ಲಿಗೆ ಆಗಮಿಸಿ ಈ ಪಂದ್ಯಾವಳಿ ಯನ್ನು ಗಿನ್ನಿಸ್ ರೆಕಾರ್ಡ್ನಲ್ಲಿ ಪಡೆದಿರುವುದನ್ನು ಪ್ರಕಟಿಸಿದ್ದರು.
ಇದೀಗ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಇನ್ನೊಂದು ಗರಿ ಮೂಡಿದಂತಾಗಿದ್ದು, ಮತ್ತೊಮ್ಮೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಈ ಬಾರಿಯ ಮುದ್ದಂಡ ಕಪ್ ಹಾಕಿ ಪಂದ್ಯಾಟ ಇದೀಗ ವರ್ಲ್ಡ್ ಆಫ್ ರೆಕಾರ್ಡ್ಸ್ನಲ್ಲೂ ದಾಖಲಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಅತೀ ಹೆಚ್ಚು ತಂಡಗಳು ಪಾಲ್ಗೊಳ್ಳುವುದರೊಂದಿಗೆ ವಿಶ್ವದ ‘ಲಾರ್ಜೆಸ್ಟ್ ಫೀಲ್ಡ್ ಹಾಕಿ’ ಎಂಬ ದಾಖಲೆ ಇದೀಗ ಮುದ್ದಂಡ ಕಪ್ನ ಮೂಲಕ ನಿರ್ಮಾಣವಾಗಿದೆ. ಇಂದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನ ತಂಡ ಮುದ್ದಂಡ ಹಾಕಿ ಉತ್ಸವದ ಫೈನಲ್ ಸಂದರ್ಭ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಆಗಮಿಸಿ ಈ ದಾಖಲೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
೩೯೬ ಕುಟುಂಬಗಳು, ೫,೫೪೪ ಆಟಗಾರರು, ೩೯೭ ಪಂದ್ಯಗಳು ನಡೆದಿರುವುದು ಮಾರ್ಚ್ ೨೮ ರಿಂದ ಏಪ್ರಿಲ್ ೨೭ರ ತನಕ ೩೧ ದಿನಗಳ ಕಾಲ ಆಯೋಜನೆಗೊಂಡಿರುವುದು ಸೇರಿದಂತೆ ಇತ್ಯಾದಿ ಅಂಶಗಳು ಒಳಗೊಂಡAತೆ ಈ ಹಾಕಿ ಪಂದ್ಯಾವಳಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ ಎಂದು ಸಂಸ್ಥೆಯ ಮುಖ್ಯಸ್ಥರಾಗಿ ಆಗಮಿಸಿದ ಸಿಂಧು ಅವರು ಘೋಷಿಸಿದರು.
ಇದರೊಂದಿಗೆ ಕೌಟುಂಬಿಕ ಹಾಕಿ ಉತ್ಸವದಲ್ಲಿ ಚೊಚ್ಚಲ ಬಾರಿಗೆ ಮುದ್ದಂಡ ಕಪ್ನಲ್ಲಿ ಆಯೋಜಿಸಲಾದ ಕೌಟುಂಬಿಕ ೫ಎ ಸೈಡ್ ಮಹಿಳಾ ಹಾಕಿಯೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ೫೮ ತಂಡಗಳು, ೪೬೪ ಆಟಗಾರ್ತಿಯರು, ೫೭ ಪಂದ್ಯಗಳ ಮೂಲಕ ಮಹಿಳಾ ಹಾಕಿಯೂ ಇದೀಗ ವಿಶ್ವ ದಾಖಲೆಯ ಪುಟುಗಳಲ್ಲಿ ಸೇರ್ಪಡೆಯಾಗಿದ್ದು, ಕ್ರೀಡಾ ಜಿಲ್ಲೆ ಕೊಡಗಿಗೆ ಮತ್ತೊಂದು ಗರಿ ಬಂದAತಾಗಿದೆ.೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನ ತಂಡ ಈ ದಾಖಲೆಯ ಪ್ರಮಾಣ ಪತ್ರವನ್ನು ಈ ಬಾರಿಯ ಆಯೋಜಕರಾದ ಮುದ್ದಂಡ ಕುಟುಂಬದ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ಅಧ್ಯಕ್ಷ ರಶಿನ್ ಸುಬ್ಬಯ್ಯ ಅವರಿಗೆ ಹಸ್ತಾಂತರಿಸಿದರು. ಈ ಐತಿಹ್ಯವನ್ನು ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ಸಚಿವರುಗಳಾದ ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಸಂಸದ ಯದುವೀರ್ ಒಡೆಯರ್, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ. ಮಂತರ್ ಗೌಡ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಹಾಗೂ ಇತರರು ಸಾಕ್ಷೀಕರಿಸಿದರು.
ಘೋಷಣೆ ಸಂದರ್ಭ ಸಹಸ್ರಾರು ಸಂಖ್ಯೆಯಲ್ಲಿ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕ ಸಮೂಹÀ ಹರ್ಷೋದ್ಘಾರದ ನಡುವೆ ಸಂತಸ ವ್ಯಕ್ತಪಡಿಸಿದರು. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ವಿಷಯ ಎಲ್ಲಿಯೂ ಪ್ರಚಾರಕ್ಕೆ ಬಂದಿರಲಿಲ್ಲ ದಿಢೀರನೆ ಈ ಘೋಷಣೆ ಮೈದಾನದಲ್ಲಿ ಎದುರಾಗಿದ್ದು, ಎಲ್ಲರನ್ನು ಚಕಿತಗೊಳಿಸಿತು.