ಮುದ್ದAಡ ಹಾಕಿ ಉತ್ಸವದಲ್ಲಿ ೩೯೬ ತಂಡ ಭಾಗವಹಿಸಿದ್ದು, ನೆಲ್ಲಮಕ್ಕಡ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ನೆಲ್ಲಮಕ್ಕಡ ನಿನ್ನೆ ಸೆಮಿಫೈನಲ್‌ನಲ್ಲಿ ಮಂಡೇಪAಡ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಇಂದು ಬೆÀಳಿಗ್ಗೆ ಕುಪ್ಪಂಡ (ಕೈಕೇರಿ) ವಿರುದ್ಧ ೩ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ ೨-೧ ಗೋಲುಗಳ ಅಂತರದಿAದ ಜಯಗಳಿಸಿ ಮುದ್ದಂಡ ಹಾಕಿ ಉತ್ಸವದಲ್ಲಿ ೩ನೇ ಸ್ಥಾನ ಪಡೆದ ಕೀರ್ತಿಗೆ ಭಾಜನವಾಯಿತು, ಪಂದ್ಯದ ತೀರ್ಪುಗಾರರಾಗಿ ಬೊಟ್ಟಂಗಡ ಕೌಶಿಕ್ ಹಾಗೂ ಕೊಳುವಂಡ ಚಂಗಪ್ಪ ಕಾರ್ಯನಿರ್ವಹಿಸಿದರು. ಅಂತರರಾಷ್ಟಿçÃಯ ಪಂದ್ಯಾವಳಿಗಳಲ್ಲಿ ಆಟಗಾರರು ಮಕ್ಕಳೊಂದಿಗೆ ಮೈದಾನಕ್ಕೆ ಬರುವ ರೀತಿಯಲ್ಲಿಯೇ ಮಂಡೇಪAಡ ಹಾಗೂ ಚೇಂದAಡ ತಂಡದ ಆಟಗಾರರು ಕೊಡವ ಸಂಪ್ರದಾಯಿಕ ಉಡುಪು

ಧರಿಸಿದ್ದ ಪುಟಾಣಿಗಳ ಕೈ ಹಿಡಿದುಕೊಂಡು ಮೈದಾನಕ್ಕೆ ಪ್ರವೇಶಿಸಿದರು. ಇದೇ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು. ಕೊಡಗು ವಿದ್ಯಾಲಯ ಹಾಗೂ ಮಾರಿಯಮ್ಮ ನೃತ್ಯಾಲಯದಿಂದ ನೃತ್ಯ ಪ್ರಸ್ತುತಗೊಂಡಿತು. ಚೇನಂಡ ಕುಟುಂಬದ ಆಗಮನದ ನಂತರ ಕೊಡವ ಹಾಕಿ ಉತ್ಸವದ ಜನಕ ಪಾಂಡAಡ ಕುಟ್ಟಪ್ಪ ಹಾಗೂ ಹಾಕಿ ನಮ್ಮೆಯ ವೈಭವವನ್ನು ಬಿಂಬಿಸುವ ಹಾಡಿನೊಂದಿಗೆ ಕಾರ್ಯಕ್ರಮ ಶುಭಾರಂಭ ಗೊಂಡಿತು. ನಿವೃತ್ತ ಕ್ಯಾಪ್ಟನ್ ಬಿದ್ದಂಡ ನಾಣಯ್ಯ ರಚಿಸಿದ ಸಾಹಿತ್ಯಕ್ಕೆ, ಕಬ್ಬಚ್ಚಿರ ರಶ್ಮಿ ಅವರ ಧ್ವನಿ ಇತ್ತು. ಕುಟ್ಟಣಿ ಅವರ ಸಾಧನೆ, ಹಿರಿಮೆಯನ್ನು ಹಾಡಿನ ಮೂಲಕ ಅನಾವರಣ ಮಾಡಲಾಯಿತು. ಹಾಡು ಬಿಡುಗಡೆ ಸಂದರ್ಭ ಪ್ರೇಕ್ಷಕರು ಎದ್ದುನಿಂತು ಗೌರವ ಸಲ್ಲಿಸಿದರು. ೨೦೨೬ರಲ್ಲಿ ನಾಪೋಕ್ಲುವಿನಲ್ಲಿ ಕೊಡವ ಹಾಕಿ ನಮ್ಮೆ ಆಯೋಜಿಸಲಿರುವ ಚೇನಂಡ ಕುಟುಂಬಸ್ಥರು ಬೆಳಿಗ್ಗೆ ೧೧.೪೦ರ ವೇಳೆಗೆ ಮೈದಾನ ಪ್ರವೇಶಿಸಿದರು.

ಚೇನಂಡ ಕುಟುಂಬದ ಧ್ವಜ, ಬ್ಯಾನರ್, ಫ್ಲೆಕ್ಸ್ನೊಂದಿಗೆ ಕುಪ್ಯಚೇಲೆ ಧರಿಸಿದ್ದ ಪುರುಷರು ತಲೆಗೆ ಕೆಂಪು ವಸ್ತç, ಒಂದೇ ಬಣ್ಣದ ಸೀರೆ ತೊಟ್ಟಿದ್ದ ಮಹಿಳೆಯರು, ಬಿಳಿ ಟಿ-ಶರ್ಟ್ನಲ್ಲಿದ್ದ ಮಕ್ಕಳು ದುಡಿಕೊಟ್ಟ್ ಪಾಟ್ ಸಹಿತವಾಗಿ ಮೈದಾನಕ್ಕೆ ಆಗಮಿಸಿದರು. ಇವರನ್ನು ತಳಿಯತಕ್ಕಿ ಬೊಳ್ಚ ಸಹಿತವಾಗಿ ಕೊಡವ ಹಾಕಿ ಅಕಾಡೆಮಿ ಪದಾಧಿಕಾರಿಗಳು ಸ್ವಾಗತಿಸಿದರು.

ನಂತರ ಅಕಾಡೆಮಿ ಪದಾಧಿಕಾರಿಗಳಾದ ಪಾಡಂಡ ಬೋಪಣ್ಣ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷರಾದ ಬಡಕಡ ದೀನಾ ಪೂವಯ್ಯ, ಕುಕ್ಕೇರ ಜಯ ಚಿಣ್ಣಪ್ಪ ಹಾಗೂ ತಂಡ ಮುಂದೆ ಸಾಗಿದರೆ ಚೇನಂಡ ಕುಟುಂಬಸ್ಥರು ಇವರೊಂದಿಗೆ ಮೈದಾನ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಈ ಸಂದರ್ಭ ಪ್ರೇಕ್ಷಕರ ಚಪ್ಪಾಳೆಯ ಸ್ವಾಗತದೊಂದಿಗೆ ಸಂಭ್ರಮದ ಸ್ವಾಗತ ದೊರೆಯಿತು. ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಖ್ಯಾತನಾಮ ಆಟಗಾರರನ್ನು ಇತರ ಕ್ರೀಡಾತಾರೆಗಳಿಗೆ ಮುದ್ದಂಡ ಕಪ್‌ನಲ್ಲಿ ಹೃದಯ ಸ್ಪರ್ಶಿ ಗೌರವ ನೀಡಲಾಯಿತು. ತೆರೆದ ಜಿಪ್ಸಿ ವಾಹನದಲ್ಲಿ ಇವರುಗಳನ್ನು ಕಿಕ್ಕಿರಿದು ನೆರೆದಿದ್ದ ಜನಸ್ತೋಮ ಎದುರು ಮೆರವಣಿಗೆ ಮಾಡಲಾಯಿತು.

ವಾಸುದೇವ್ ಭಾಸ್ಕರನ್ (ಪದ್ಮಶ್ರೀ), ಸರ್ದಾರ್ ಸಿಂಗ್, ಪೈಕೇರ ಕಾಳಯ್ಯ, ಬಿ.ಪಿ. ಗೋವಿಂದ, ಮಹಮ್ಮದ್ ರಿಯಾಜ್, ಮನೆಯಪಂಡ ಅಶ್ವಿನಿ ನಾಚಪ್ಪ (ತಾಮನೆ-ಪುಚ್ಚಿಮಾಡ), ಮನೆಯಪಂಡ ಎಂ. ಸೋಮಯ್ಯ, ಪೊನ್ನಚೆಟ್ಟಿರ ಅಶ್ವಿನಿ ಪೊನ್ನಪ್ಪ (ತಾಮನೆ-ಮಾಚಿಮಂಡ) ಅವರಿಗೆ ಈ ಗೌರವ ನೀಡಲಾಯಿತು.

ಪ್ರೇಕ್ಷಕರು ಕರತಾಡನ ಹಾಗೂ ಹಾಕಿ ತಾಂತ್ರಿಕ ವರ್ಗ, ತೀರ್ಪುಗಾರರು ಹಸ್ತಲಾಗವ ನೀಡಿ ಸ್ವಾಗತ ಕೋರಿದರು. ಮೆರವಣಿಗೆ ಬಳಿಕ ಇವರೆಲ್ಲರನ್ನು ಹಾಕಿ ಉತ್ಸವದ ಪರವಾಗಿ ಸನ್ಮಾನಿಸಲಾಯಿತು. ಬಳಿಕ ವಿಐಪಿ ಗ್ಯಾಲರಿಯಲ್ಲಿ ಇವರುಗಳಿಗೆ ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ೧೧.೫೫ರ ಸುಮಾರಿಗೆ ಸಮಾರಂಭಕ್ಕೆ ಅತಿಥಿಗಳ ಆಗಮನವಾಯಿತು. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಿಕ್ಷಣ ಸಚಿವ ಡಾ. ಸುಧಾಕರ್, ಸಂಸದ ಯದುವೀರ್ ಒಡೆಯರ್, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡರಾದಿಯಾಗಿ ಎಲ್ಲಾ ಅತಿಥಿಗಳನ್ನು ಒಡ್ಡೋಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ಸ್ವಾಗತಿಸಲಾಯಿತು. ಮುದ್ದಂಡ ಹಾಕಿ ಫೈನಲ್‌ಗೆ ಈ ಬಾರಿ ರಾಜ್ಯದ ಗೃಹ ಸಚಿವರೂ ಸೇರಿ ನಾಲ್ವರು ಸಚಿವರು ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಇವರು ಗಳೊಂದಿಗೆ ಜಿಲ್ಲೆಯ ಸಂಸದರು, ಶಾಸಕರುಗಳು ಭಾಗಿಗಳಾಗಿದ್ದು, ಹಾಕಿ ಉತ್ಸವಕ್ಕೆ ಇನ್ನಷ್ಟು ಕಳೆ ಒದಗಿಸಿತ್ತು. ಸಚಿವರುಗಳು ಪ್ರಥಮ ಅವಧಿಯ ಆಟದ ವೀಕ್ಷಣೆ ಯಲ್ಲೂ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. ಕಮಾನ್, ಚಿಯರ್ ಅಪ್, ಪೊಟ್ಟಡ್ ಚಪ್ಪಾಳೆ.. ಎಂಬ ಘೋಷಣೆಗೆ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಹರ್ಷೋದ್ಘಾರದ ಕೂಗು, ಚಪ್ಪಾಳೆ, ಶಿಳ್ಳೆ, ಗ್ಯಾಲರಿಯ ಮೂರು ಕಡೆಗಳಲ್ಲಿ ಬ್ಯಾಂಡ್ ವಾದನ, ಕೊಳಲು ವಾದನ, ‘ಅಪ್, ಅಪ್ ಚೇಂದAಡ, ಅಪ್ ಅಪ್ ಮಂಡೇಪAಡ’ ಎಂಬ ಸಂಭ್ರಮ..ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಗಸಕ್ಕೆ ಮುಟ್ಟುವಂತಿತ್ತು.

ಮಡಿಕೇರಿಯೇ ಆಗಲಿ, ಎಲ್ಲೇ ಆಗಲಿ ಹಾಕಿ ನಮ್ಮೆಗೆ ಜನರು ಬಂದೆ ಬರುತ್ತಾರೆ ಎಂಬುದಕ್ಕೆ ಇಂದಿನ ಹಾಕಿ ಫೈನಲ್ ಸಾಕ್ಷಿಯಾಯಿತು. ಬಹುಶಃ ಮಡಿಕೇರಿಯಲ್ಲಿ ಜನ ಸೇರಲಾರರು ಎಂಬ ಮಾತು ಹಾಕಿ ಹಬ್ಬದ ವಿಚಾರದಲ್ಲಿ ಸುಳ್ಳಾಗಿತ್ತು. ಅಪಾರ ಜನಸ್ತೋಮದ ನಡುವೆ ಅಪರಾಹ್ನ ೧.೩೦ರ ವೇಳೆಗೆ ಚೇಂದAಡ ಹಾಗೂ ಮಂಡೇಪAದ ನಡುವಿನ ಅಂತಿಮ ಸಮರ ಆರಂಭಗೊAಡಿತು. ಎರಡೂ ತಂಡಗಳ ಬೆಂಬಲಿಗರು ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡುತ್ತಿದ್ದರೆ, ಹಾಕಿ ಆಟದ ಸವಿಯನ್ನು ಅನುಭವಿಸಲೆಂದೇ ಬಂದ ಇನ್ನಿತರ ಕ್ರೀಡಾಪ್ರೇಮಿಗಳು ಎರಡೂ ತಂಡಗಳನ್ನು ಉತ್ತೇಜಿಸುತ್ತಿದ್ದರು.

ಪಂದ್ಯ ಆರಂಭ ಮುನ್ನವೇ ಬ್ಯಾಂಡ್, ಕೊಳಲು ವಾದನ, ಗ್ಯಾಲರಿಯಲ್ಲಿ ಯುವಕರ ನರ್ತನ ಆರಂಭಗೊAಡರೆ ಜೊತೆಗೆ ವಾಲಗವೂ ಸೇರ್ಪಡೆಗೊಂಡಿತ್ತು. ಮುದ್ದಂಡ ಹಾಕಿ ಉತ್ಸವದ ಫೈನಲ್ ಪಂದ್ಯ ರೋಚಕವಾಗಿ ಆರಂಭವಾಗಿ ಮಂಡೇಪAಡ ಪಂದ್ಯದ ಮೊದಲ ಅವಧಿಯಲ್ಲಿ ೧ ಗೋಲು ದಾಖಲಿಸಿ ಮುನ್ನಡೆಯಲ್ಲಿತ್ತು. ಚೇಂದAಡ ತಂಡವೂ ಬಿರುಸಿನ ಆಟ ಪ್ರದರ್ಶಿಸುತ್ತಿದ್ದರಿಂದ ಇದು ಒಂದು ರೀತಿಯ ‘ಹೈವೋಲ್ಟೇಜ್’ ಪಂದ್ಯದAತಾಗಿತ್ತು. ಆದರೆ, ದ್ವಿತೀಯಾರ್ಧ ಆರಂಭವಾದ ಕೆಲ ನಿಮಿಷದಲ್ಲಿ ದಿಢೀರನೇ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಯಾಗಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು.

ಮಳೆ ಸುರಿದರೂ ಇದನ್ನು ಲೆಕ್ಕಿಸದೆ ನೆರೆದಿದ್ದವರು ಪಂದ್ಯ ಮುಂದುವರೆಯುವದನ್ನು ಕಾದು ನಿಂತಿದ್ದರು. ಸುಮಾರು ಒಂದು ತಾಸಿನ ಕಾಲ ಪಂದ್ಯಕ್ಕೆ ಅಡಚಣೆಯಾಗಿತ್ತು.

ಪಂದ್ಯ ಆರಂಭವಾದ ದ್ವಿತೀಯಾರ್ಧ ನಡುವೆ ಮಧ್ಯಾಹ್ನ ೨.೫೦ಕ್ಕೆ ಮಳೆ ಆರಂಭವಾಯಿತು. ೨೦ ನಿಮಿಷಗಳ ನಂತರ ಮಳೆ ನಿಂತು ಮೈದಾನದಲ್ಲಿದ್ದ ನೀರನ್ನು ಹೊರತೆಗೆದು ೩.೫೦ಕ್ಕೆ ಪಂದ್ಯವನ್ನು ಮರು ಆರಂಭಿಸಲಾಯಿತು. ಆದರೆ ಮತ್ತೆ ೧೦ ನಿಮಿಷದಲ್ಲಿ ಮಳೆಯ ಆಗಮನದಿಂದ ೨ನೇ ಬಾರಿಗೆ ಪಂದ್ಯ ಸ್ಥಗಿತಗೊಂಡಿತು. ಮಳೆಯಿಂದಾಗಿ ಮೈದಾನ ಒದ್ದೆಯಾದ ಪರಿಣಾಮ ಪಂದ್ಯಾಟಕ್ಕೆ ಅಡಚಣೆಯಾಯಿತು. ಮೈದಾನದಲ್ಲಿ ನೀರು ನಿಂತು ಪಂದ್ಯ ಮುಂದುವರೆಸಲು ಸಾಧ್ಯವಾಗದೆ ಕೆಲ ಸಮಯ ಆಟವನ್ನು ಸ್ಥಗಿತಗೊಳಿಸಬೇಕಾಯಿತು.

ಬಳಿಕ ಮಳೆ ಕಡಿಮೆಯಾದ ನಂತರ ಆಯೋಜಕರು ಹಾಗೂ ಇತರರು ಸ್ವಯಂ ಸೇವಕರಾಗಿ ಮೈದಾನಕ್ಕಿಳಿದು ಮ್ಯಾಟ್ ಸಹಾಯದಿಂದ ನೀರನ್ನು ಹೊರತೆಗದು ಮರಳು ಹಾಕುವ ಮೂಲಕ ಮತ್ತೆ ಆಟಕ್ಕೆ ವ್ಯವಸ್ಥೆ ಕಲ್ಪಿಸಲು ಶತಪ್ರಯತ್ನ ನಡೆಸಿದರು. ಮುದ್ದಂಡ ಕುಟುಂಬಸ್ಥರು, ಮೈದಾನದ ಉಸ್ತುವಾರಿ ರಾಜು, ತಾಂತ್ರಿಕ ಸಮಿತಿಯವರು ಸೇರಿದಂತೆ ಇನ್ನಿತರರು ಇದಕ್ಕೆ ಶ್ರಮವಹಿಸಿದರು. ಕೆಲವು ಯುವತಿಯರು ಈ ಕಾರ್ಯದಲ್ಲಿ ಕೈಜೋಡಿಸಿದರು.ಬೆಳಿಗ್ಗಿನಿಂದ ಆರಂಭಗೊAಡ ಬ್ಯಾಂಡ್ ವಾದನ ಮಳೆ ಅಡ್ಡಿಪಡಿಸಿದರೂ ನಿಲ್ಲದೆ ಮುಂದುವರೆದಿತ್ತು. ಗ್ಯಾಲರಿಯ ಮೂರು ದಿಕ್ಕುಗಳಲ್ಲಿಯೂ ಯುವಕರು ಬ್ಯಾಂಡ್ ಬಾರಿಸುತ್ತಾ ಜನರಿಗೆ ಮನರಂಜನೆ ನೀಡಿದರು. ಬ್ಯಾಂಡ್‌ಗೆ ಪ್ರೇಕ್ಷಕರು ಹೆಜ್ಜೆಹಾಕಿ ಸಂಭ್ರಮಿಸಿದರು.ಹಾಕಿ ಅಕಾಡೆಮಿಯಿಂದ ಸನ್ಮಾನ

೨೫ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಮುದ್ದಂಡ ಕುಟುಂಬದ ಪ್ರಮುಖರಾದ ಮುದ್ದಂಡ ದೇವಯ್ಯ ಹಾಗೂ ರಶಿನ್ ಸುಬ್ಬಯ್ಯ ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿತು.

ದಿ. ಪಾಂಡAಡ ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಅವರಿಗೆ ಚೆಪ್ಪುಡಿರ ದಿವ್ಯ ಬಿಡಿಸಿದ ಕುಟ್ಟಪ್ಪ ಅವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು.