ಮಡಿಕೇರಿ, ಏ. ೨೭: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ನಮ್ಮೆ... ಈ ಬಾರಿ ಭಾರೀ ಸಂಭ್ರಮ ಸಡಗರದ ನಡುವೆ ವರುಣನ ಅವಕೃಪೆಗೆ ತುತ್ತಾಗುವುದರೊಂದಿಗೆ ಭಾರದ ಹೃದಯದ ಮುಕ್ತಾಯ ಕಾಣುವಂತಾಗಿದ್ದು, ಬಹುಶಃ ಸಾವಿರಾರು ಹಾಕಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದಂತಾಗಿದೆ.

ಆದರೂ ಪಂದ್ಯಾವಳಿ ಸಂಭ್ರಮ ಸಡಗರದೊಂದಿಗೆ ಎಂದಿನAತೆ ವಿಜೃಂಭಣೆಯ ತೆರೆ ಕಂಡಿದ್ದು, ಬೆಳ್ಳಿ ಹಬ್ಬ ಸಂಭ್ರಮದ ಹಾಕಿ ಉತ್ಸವದ ಚಾಂಪಿಯನ್ ಆಗಿ ಮಂಡೇಪAಡ ಕುಟುಂಬ ಹೊರಹೊಮ್ಮುವು ದರೊಂದಿಗೆ ಮುದ್ದಂಡ ಕಪ್‌ಗೆ ‘ಒಡೆಯ’ ಪಟ್ಟ ಅಲಂಕರಿಸಿದೆ. ಕಳೆದ ಬಾರಿಯ ಕುಂಡ್ಯೋಳAಡ ಕಪ್ ವಿಜೇತ ಚೇಂದAಡ ಕುಟುಂಬ ವರುಣನ ಅವಕೃಪೆಯಿಂದಾಗಿ ನಿರಾಸೆಯ ಭಾವನೆಯೊಂದಿಗೆ ಅನಿವಾರ್ಯವಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳು ವಂತಾಯಿತು. ಯಾರೂ ಊಹಿಸಿದ ಮಾದರಿಯಲ್ಲಿ ಪಂದ್ಯದ ನಡುವೆ ಮಳೆ ಸುರಿದಿದ್ದು, ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಎಂದಿನ ವೈಭವಕ್ಕೆ ಅಡ್ಡಿಯಾಯಿತು. ಆದರೆ ಫೈನಲ್ ಪಂದ್ಯದ ಫಲಿತಾಂಶವೂ ಅಷ್ಟೇ ಪ್ರಮುಖವಾಗಿದ್ದು, ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಮಂಡೇಪAಡ ತಂಡಕ್ಕೆ ೨೫ನೆಯ ವರ್ಷದ ಚಾಂಪಿಯನ್ ಪಟ್ಟ ದಕ್ಕಿತು. ೨೦೦೭ರಲ್ಲಿ ಮಂಡೇಟಿರ ಕಪ್ ಪ್ರಶಸ್ತಿಗಳಿಸಿದ್ದ ಮಂಡೇಪAಡ ತಂಡಕ್ಕೆ ಇದು ಕೌಟುಂಬಿಕ ಹಾಕಿ ಉತ್ಸವದಲ್ಲಿ ಎರಡನೆಯ ಪ್ರಶಸ್ತಿಯಾಗಿದೆ.

೨೦೧೭ರಲ್ಲಿ ಬಿದ್ದಾಟಂಡ ಕಪ್, ೨೦೧೮ರ ಕುಲ್ಲೇಟಿರ ಕಪ್ ಹಾಗೂ ೨೦೨೪ರ ಕುಂಡ್ಯೋಳAಡ ಕಪ್ ಪ್ರಶಸ್ತಿ ವಿಜೇತ ಚೇಂದAಡ ತಂಡದ ಮತ್ತೊಂದು ಪ್ರಶಸ್ತಿಯ ಕನಸು ಮಳೆಯಿಂದಾಗಿ ಈಡೇರದೆ ಈ ಬಾರಿ ನಿರಾಸೆ ಅನುಭವಿಸಬೇಕಾಯಿತು. ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಇಂದು ನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಸುಮಾರು ೨೦ ಸಾವಿರಕ್ಕೂ ಅಧಿಕ ಕ್ರೀಡಾಪ್ರೇಮಿಗಳ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಮ್ಮುಖದಲ್ಲಿ ಮುದ್ದಂಡ ಕಪ್ ಹಾಕಿ ಉತ್ಸವದ ಫೈನಲ್ ಹಣಾಹಣಿ ಚೇಂದAಡ ಹಾಗೂ ಮಂಡೇಪAಡ ತಂಡಗಳ ನಡುವೆ ಅಪರಾಹ್ನ ೨.೩೦ರ ಸುಮಾರಿಗೆ ಆರಂಭ ಗೊಂಡಿತು. ಕಿಕ್ಕಿರಿದು ನೆರೆದಿದ್ದ ಹಾಕಿ ಅಭಿಮಾನಿಗಳ ಉತ್ತೇಜನದ ನಡುವೆ ಪಂದ್ಯ ಬಿರುಸು ಪಡೆದಿತ್ತು. ಪಂದ್ಯದ ಮೊದಲ ೧೫ ನಿಮಿಷಗಳ ಅವಧಿಯಲ್ಲಿ ಗೌತಮ್ ಮಂಡೇಪAಡ ಪರ ಮೊದಲ ಗೋಲು ದಾಖಲಿಸಿದಾಗ ನೆರೆದಿದ್ದವರ ಹರ್ಷೊದ್ಘಾರ ಮುಗಿಲು ಮುಟ್ಟಿತ್ತು. ದ್ವಿತೀಯ ಅವಧಿಯ ಆಟ ಮುಂದುವರಿಯುತ್ತಿದ್ದAತೆ ದಿಢೀರನೇ ಮಳೆ ಸುರಿಯಲಾರಂಭಿಸಿತು. ಮಳೆ ಬಿರುಸುಗೊಂಡು ಮೈದಾನದಲ್ಲಿ ನೀರು ನಿಂತ ಪರಿಣಾಮ ಅನಿವಾರ್ಯವಾಗಿ ಪಂದ್ಯ ಸ್ಥಗಿತಗೊಳಿಸಬೇಕಾಯಿತು. ಮಳೆ ರಭಸ ಕಡಿಮೆಯಾದ ಬಳಿಕ ಮೈದಾನದಲ್ಲಿ ನಿಂತಿದ್ದ ನೀರನ್ನು ಮ್ಯಾಟ್ ಸಹಾಯದಿಂದ ತೆಗೆದು ಮತ್ತೆ ಪಂದ್ಯಕ್ಕೆ ಅನುವು ಮಾಡಿಕೊಡಲು ಸುಮಾರು ಒಂದು ತಾಸು ಸಮಯಬೇಕಾಯಿತು. ಮತ್ತೆ ಆಟ ಮುಂದುವರಿಯಿತಾದರೂ ೧೨ ನಿಮಿಷದಲ್ಲಿ ಮತ್ತೆ ಮಳೆ ತೀವ್ರಗೊಂಡ ಹಿನ್ನೆಲೆ ಪಂದ್ಯ ಸ್ಥಗಿತಗೊಂಡಿತು.

ಮAಡೇಪAಡ ವಿಜಯ ಘೋಷಣೆ

ಮಳೆಯ ಪರಿಣಾಮದಿಂದ ಮತ್ತೆ ಪಂದ್ಯವನ್ನು ಮುಂದುವರಿಸಲಾಗಲಿಲ್ಲ. ಬಳಿಕ ಆಯೋಜಕರು, ತಾಂತ್ರಿಕ ಸಮಿತಿ, ಕೊಡವ ಹಾಕಿ ಅಕಾಡೆಮಿಯವರು ಎರಡು ತಂಡದ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಚರ್ಚೆಯ ಬಳಿಕ ಈ ಹಿಂದೆಯೇ ರೂಪಿಸಲಾಗಿದ್ದ ನಿಯಮದ ಅನ್ವಯ ಮಂಡೇಪAಡ ಕುಟುಂಬವನ್ನು ವಿಜಯ ಎಂದು ಘೋಷಿಸಲಾಯಿತು.

ನಿಯಮವೇನಿತ್ತು...?

ಒಟ್ಟು ೬೦ ನಿಮಿಷಗಳ ಅವಧಿಯ ಪಂದ್ಯದಲ್ಲಿ ೧೭ ನಿಮಿಷಗಳ ಆಟ ನಡೆದಿದ್ದಲ್ಲಿ ಈ ಅವಧಿಯಲ್ಲಿ ಯಾವುದೇ ತಂಡ ಮುನ್ನಡೆ ಗಳಿಸಿದ್ದರೆ ಆ ತಂಡವನ್ನು ವಿಜಯಶಾಲಿ ಎಂದು ಘೋಷಿಸುವ ನಿಯಮ ರೂಪಿಸಲಾಗಿತ್ತು. ಇದರಂತೆ ಮಂಡೇಪAಡ ತಂಡ ಪಂದ್ಯ ನಡೆದಿದ್ದ ಒಟ್ಟು ೨೭ ನಿಮಿಷದ ಅವಧಿಯಲ್ಲಿ ೧-೦ ಗೋಲಿನ ಮುನ್ನಡೆಗಳಿಸಿದ್ದರಿಂದ ವಿಜಯಪತಾಕೆ ಈ ತಂಡದ ಪಾಲಾ ಯಿತು. ಪಂದ್ಯದ ತೀರ್ಪುಗಾರರಾಗಿ ಅನ್ನಡಿಯಂಡ ಪೊನ್ನಣ್ಣ, ಪಟ್ರಪಂಡ ಸಚಿನ್ ಮುತ್ತಣ್ಣ ಹಾಗೂ ಮೂರನೆಯ ಅಂಪೈರ್ ಆಗಿ ಕೊಂಡಿರ ಕೀರ್ತಿ, ಟೆಕ್ನಿಕಲ್ ಅಫಿಶಿಯಲ್ ಆಗಿ ಕರವಂಡ ಅಪ್ಪಣ್ಣ ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಅಜ್ಜೇಟ್ಟಿರ ವಿಕ್ರಮ್, ಮೂಡೇರ ಕಾಳಯ್ಯ, ಚೆಯ್ಯಂಡ ಭನಿತ್ ಬೋಜಣ್ಣ ಕಾರ್ಯನಿರ್ವಹಿಸಿದರು.