ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾಯಕದಲ್ಲಿ ಮಗ್ನರಾಗಿರುವ ಯುವ ಕೃಷಿಕರಿಗೆ ಹೆಣ್ಣು ಹೆತ್ತವರು ಹೆಣ್ಣನ್ನು ಕೊಡಲು ನಿರಾಕರಿಸುತ್ತಿರುವ ಕಾರಣ ಹಳ್ಳಿಯ ಹೈಕ್ಳು ತಾವು ಹೆಣೆದಿದ್ದ ಭವಿಷ್ಯದ ಸುಂದರ ಕನಸನ್ನು ರೂಪಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.
ಜೊತೆಗೆ ಸರ್ಕಾರವು ಕೂಡ ಹಳ್ಳಿಯ ರೈತರ ಮಕ್ಕಳ ಇಂತಹ ಅಸಹನೀಯವಾದ ಸ್ಥಿತಿ - ಗತಿಗಳಿಗೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಬದಲು, ಗ್ರಾಮ ಗ್ರಾಮಗಳಲ್ಲಿ, ಗಲ್ಲಿ - ಬೀದಿಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆದು ಖಜಾನೆ ತುಂಬಿಸಲು ಹೊರಟಿದೆ.
ವಯಸ್ಸು ೩೫ ರಿಂದ ೪೦ ದಾಟಿದರೂ ಕೂಡ ಕೃಷಿ ಮಾಡೋ ವೃತ್ತಿ ಎಂದು ಹೀಗಳೆಯುತ್ತಾ ಹೆಣ್ಣು ಕೊಡಲು ಮುಂದಾಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಕಸ ಗುಡಿಸುವ ವೃತ್ತಿ ಆದರೂ ಪರವಾಗಿಲ್ಲ, ಒಟ್ಟಿನಲ್ಲಿ ಸರ್ಕಾರದ ಸಂಬಳ ತಗೊಳ್ಳುವವ ಆದರೆ ಸಾಕು. ಹುಡುಗಿ ಕೊಡುತ್ತೇವೆ ಅನ್ನೋ ಪಾಲಕರೇ ಹೆಚ್ಚು ಇದ್ದಾರೆ.
ಕುಶಾಲನಗರ ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಕನಿಷ್ಟ ೧೫ - ೨೦ ಮಂದಿ ವಿವಾಹದ ವಯೋಮಿತಿ ದಾಟುತ್ತಿರುವ ಹುಡುಗರೇ ಹೆಚ್ಚುತ್ತಿದ್ದಾರೆ.
ಕೃಷಿಯೇ ಜೀವನದ ಉದ್ಧಾರವಾಗಿತ್ತು ಹಿಂದೆ
ಹಿAದೆ ಎಂಟರಿAದ ಹತ್ತು ಮಕ್ಕಳನ್ನು ಹಡೆಯುತ್ತಿದ್ದ ಪಾಲಕರು, ನಿಶ್ಚಿಂತೆಯಿAದ ಜೀವನ ನಡೆಸುತ್ತಿದ್ದರು. ಅಂದರೆಸಾಲು ಸಾಲು ಹೊಲ ಗದ್ದೆಗಳು, ಮಾರುದ್ದುದ್ದ ಹುಲ್ಲಿನ ಗುಡ್ಡೆಗಳು, ತಿಪ್ಪೆಯ ಗುಂಡಿಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಣುತ್ತಿದ್ದವು.
ಅಂದು ಸರ್ಕಾರಿ ನೌಕರಿಗೆ ಹೋಗುವವರು ವಿರಳವಾಗಿದ್ದ ದಿನಗಳವು. ಇನ್ನು ಸಾಫ್ಟ್ವೇರ್, ಹಾರ್ಡ್ವೇರ್ ಆ ಕಂಪೆನಿ, ಈ ಕಂಪೆನಿ ಅಂದುಕೊAಡು ಯಾವ ಕಂಪೆನಿಗಳು ಕೂಡ ಯಾರನ್ನೂ ಕರೆದು ಕೆಲಸ ಕೊಡುವ ದಿನಗಳಿರಲಿಲ್ಲ.
ಅಂದು ಇದ್ದದ್ದು ಒಂದೇ. ಊರಲ್ಲಿ ಹೆಚ್ಚು ಕೃಷಿ ಭೂಮಿ ಉಳ್ಳವರು, ತಿಪ್ಪೆಯಲ್ಲಿ ಹೆಚ್ಚು ಗೊಬ್ಬರ ಉತ್ಪಾದಿಸುವವರು, ದನಗಳನ್ನು ಹೆಚ್ಚು ಸಾಕಿರುವವರ ಮನೆಗಳನ್ನು ಹುಡುಕಿ ಹುಡುಗಿಯನ್ನು ಕೊಡುತ್ತಿದ್ದ ಕಾಲವದು.
ನೂರಾರು ರೊಟ್ಟಿ ಸುಡಬೇಕಿತ್ತು
೧೯೭೦ ಹಾಗೂ ೧೯೮೦ ರ ದಶಕವದು. ಸಾಕ್ಷರತೆಯ ಸಂಖ್ಯೆ ಕ್ಷೀಣಿಸಿದ್ದ ಕಾಲ. ಬಹುತೇಕ ಅವಿದ್ಯಾವಂತ ಕೃಷಿಕರೇ ಹೆಚ್ಚಿದ್ದ ಮನೆಗಳಲ್ಲಿ ಅಂದು ಅವರು ದನಗಳನ್ನು ಹೆಚ್ಚು ಸಾಕಿರುವವರ ಮನೆಗಳನ್ನು ಹುಡುಕಿ ಹುಡುಗಿಯನ್ನು ಕೊಡುತ್ತಿದ್ದ ಕಾಲವದು.
ನೂರಾರು ರೊಟ್ಟಿ ಸುಡಬೇಕಿತ್ತು
೧೯೭೦ ಹಾಗೂ ೧೯೮೦ ರ ದಶಕವದು. ಸಾಕ್ಷರತೆಯ ಸಂಖ್ಯೆ ಕ್ಷೀಣಿಸಿದ್ದ ಕಾಲ. ಬಹುತೇಕ ಅವಿದ್ಯಾವಂತ ಕೃಷಿಕರೇ ಹೆಚ್ಚಿದ್ದ ಮನೆಗಳಲ್ಲಿ ಅಂದು ಅವರು ಕೈಗೊಳ್ಳುತ್ತಿದ್ದ ಕೃಷಿ ಚಟುವಟಿಕೆಗಳು ಅಷ್ಟೇ ಸಂಖ್ಯೆಯ ಕಾರ್ಮಿಕರೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದ ಕಾಲ. ಹೊಲ ಮನೆಗಳಲ್ಲಿ ದುಡಿಯುವ ಮಂದಿಗೆ ದಿನವೊಂದಕ್ಕೆ ನೂರಾರು ಸಂಖ್ಯೆಯಲ್ಲಿ ರಾಗಿ ರೊಟ್ಟಿಗಳನ್ನು ಸೌದೆಯ ಓಲೆಯಲ್ಲಿ ಬೇಯಿಸಿ ಕಿ.ಮೀ. ತನಕ ತಲೆ ಮೇಲೆ ಹೊತ್ತೊಯ್ದು ಜಮೀನುಗಳಿಗೆ ಕೊಂಡೊಯ್ಯಬೇಕಿದ್ದ ಕಾಲ.
ಅಂದಿನ ಸಂದರ್ಭ ಹಾಗೂ ಪರಿಸ್ಥಿತಿಗನುಗುಣವಾಗಿ ತವರು ತೊರೆದು ಗಂಡನ ಮನೆ ಸೇರುತ್ತಿದ್ದ ಹೆಣ್ಣು ಮಕ್ಕಳು ಮಾಡಲೇ ಬೇಕಿದ್ದ ಕಾಯಕವಾಗಿತ್ತು.
ಆದರೆ ಇಂದು ಕಾಲ ಬದಲಾಗಿದೆ
ಕಳೆದ ೨೦ ವರ್ಷಗಳ ಈಚೆಗೆ ಸಾಕ್ಷರರ ಸಂಖ್ಯೆ ಹೆಚ್ಚಿದಂತೆ, ಹಳ್ಳಿಗಳಲ್ಲಿ ಎಂತಹ ಕಡು ಬಡತನದ ಕುಟುಂಬಗಳ ಹೆಣ್ಣು ಮಕ್ಕಳೂ ಅಕ್ಷರ ಕಲಿತು ವಿದ್ಯಾವಂತರಾಗುತ್ತಿದ್ದ ಹಾಗೆಯೇ ಅವರ ಯೋಗ್ಯತೆಗೆ ಅನುಸಾರವಾಗಿ ಸರ್ಕಾರಿ ನೌಕರನೆಂಬ ವರನೇ ಬೇಕು ಎಂಬ ಮನಸ್ಥಿತಿ ಪಾಲಕರ ಹೆಗಲೇರಿತು. ಅಯ್ಯೋ ಈ ರೈತನ ಮನೆಗೆ ಸೇರಿ ‘ನಾನು ಆ ಕಾಲದಿಂದ ಹಳೇ ಎತ್ತು ಗೇಯ್ದಂಗೆ ನಾನು ದುಡಿದದ್ದು ಸಾಕು.
ನನಗೆ ಬಂದ ಸ್ಥಿತಿ ನನ್ನ ಒಬ್ಬಳೇ ಮಗಳಿಗೆ ಈ ಪರಿಸ್ಥಿತಿ ಬರೋದು ಬೇಡ’ ಅಂದುಕೊAಡು ಯಾರೂ ಕೂಡ ಹಳ್ಳಿಯ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ.
ಕೃಷಿಯ ಸಂಪಾದನೆ ಹಾಗೂ ವೈಭವದ ಜೀವನ ಇದ್ದರೂ ಕಡೆಗಣನೆ
ಸರ್ಕಾರಿ ನೌಕರನಿಗಿಂತ ದುಪ್ಪಟ್ಟು ಹಣ ಸಂಪಾದಿಸುವ ಹಳ್ಳಿಯ ಕೃಷಿಕ ಲಕ್ಸುರಿ ಕಾರು ಇಟ್ಟುಕೊಂಡು ವೈಭವದ ಜೀವನ ನಡೆಸಿದರೂ ಕೂಡ ಅದು ಬಹಳಷ್ಟು ಪಾಲಕರಿಗೆ ಹಿಡಿಸುತ್ತಿಲ್ಲ.
ಪಾಲಕರು ಕಂಗಾಲು
ಒAದೇ ಗಂಡನ್ನು ಹಡೆದ ಅದೆಷ್ಟೋ ಪಾಲಕರು ಇಂದು ವಯಸ್ಸಿಗೆ ತಕ್ಕಾಗಿ ಮಗನಿಗೆ ಹುಡುಗಿ ಸಿಗಲಿಲ್ಲ.
ಹಾಗಾಗಿ ವಯಸ್ಸಾದ ನಮ್ಮ ಆರೋಗ್ಯ ಹಾಗೂ ನಾಳೆ ನಮ್ಮ ಮಗನ ಸ್ಥಿತಿ ಏನೋ ಎಂತೋ ಅಂದುಕೊAಡು ಯಾರೂ ಕೂಡ ಹಳ್ಳಿಯ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ.
ಕೃಷಿಯ ಸಂಪಾದನೆ ಹಾಗೂ ವೈಭವದ ಜೀವನ ಇದ್ದರೂ ಕಡೆಗಣನೆ
ಸರ್ಕಾರಿ ನೌಕರನಿಗಿಂತ ದುಪ್ಪಟ್ಟು ಹಣ ಸಂಪಾದಿಸುವ ಹಳ್ಳಿಯ ಕೃಷಿಕ ಲಕ್ಸುರಿ ಕಾರು ಇಟ್ಟುಕೊಂಡು ವೈಭವದ ಜೀವನ ನಡೆಸಿದರೂ ಕೂಡ ಅದು ಬಹಳಷ್ಟು ಪಾಲಕರಿಗೆ ಹಿಡಿಸುತ್ತಿಲ್ಲ.
ಪಾಲಕರು ಕಂಗಾಲು
ಒAದೇ ಗಂಡನ್ನು ಹಡೆದ ಅದೆಷ್ಟೋ ಪಾಲಕರು ಇಂದು ವಯಸ್ಸಿಗೆ ತಕ್ಕಾಗಿ ಮಗನಿಗೆ ಹುಡುಗಿ ಸಿಗಲಿಲ್ಲ.
ಹಾಗಾಗಿ ವಯಸ್ಸಾದ ನಮ್ಮ ಆರೋಗ್ಯ ಹಾಗೂ ನಾಳೆ ನಮ್ಮ ಮಗನ ಸ್ಥಿತಿ ಏನೋ ಎಂತೋ ಎಂದುಕೊAಡು ಕಂಗಾಲಾಗಿದ್ದಾರೆ.
ಒಟ್ಟಾರೆ, ಹುಡುಗರ ಸ್ಥಿತಿ ಬಗೆಹರಿಸಲಾಗದ ವ್ಯಥೆಯಾಗಿರುವುದರಿಂದ ಸರ್ಕಾರ ಈ ಸಾಮಾಜಿಕ ಸಮಸ್ಯೆಗೆ ಸರ್ಕಾರದ ಮಟ್ಟದಲ್ಲಿ ಏನಾದರೂ ಯೋಜನೆ ಮಾಡಿದರೆ ಒಳಿತಾಗಬಹುದೋ ಏನೋ...
ಹಳ್ಳಿಯ ಕೃಷಿಕನನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಉಚಿತ ಭಾಗ್ಯ ಎಂದು ಯಾವುದಾದರೂ ಯೋಜನೆಗಳನ್ನು ಪ್ರಕಟಿಸಿದರೆ ಪರಿಸ್ಥಿತಿ ಬದಲಾದೀತಾ... ಏಕೆ ಚಿಂತಿಸ ಬಾರದು...?
- ಕೆ.ಎಸ್. ಮೂರ್ತಿ