ಗೋಣಿಕೊಪ್ಪಲು, ಏ. ೨೬: ಕೊಂಡಿAಜಮ್ಮನ ಕುಟುಂಬದ ವತಿಯಿಂದ ೧೦ನೇ ವರ್ಷದ ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ೨೦೨೫ಕ್ಕೆ ಚಾಲನೆ ನೀಡಲಾಯಿತು. ಅಮ್ಮಕೊಡವ ಜನಾಂಗ ಬಾಂಧವರು ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಮುಂಜಾನೆ ಮೆರವಣಿಗೆ ನಡೆಸಿ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಪುರುಷರು ಹಾಗೂ ಮಹಿಳೆಯರು ಕೊಡವ ವಾಲಗದೊಂದಿಗೆ ದುಡಿಕೊಟ್ಟು ತಳಿಯತಕ್ಕಿ ಬೊಳ್‌ಚದೊಂದಿಗೆ ಹೆಜ್ಜೆ ಹಾಕುತ್ತ ಮೈದಾನದ ಸುತ್ತಲು ೧೯ ಕುಟುಂಬಗಳ ಬಾವುಟಗಳೊಂದಿಗೆ ಆಗಮಿಸಿ ಸಮಾಗಮಗೊಂಡರು. ಮುಂಜಾನೆ ವೇಳೆ ಕೊಂಡಿAಜಮ್ಮನ ಕುಟುಂಬಸ್ಥರು ಕೈಕೇರಿಯ ಭಗವತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ತಮ್ಮ ೧೦ನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಒಗ್ಗಟ್ಟು ಮುಂದುವರೆಯಲಿ

ಸಭಾ ಕಾರ್ಯಕ್ರಮವು ಕೊಂಡಿAಜಮ್ಮನ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಅಧ್ಯಕ್ಷರಾದ ಕೆ.ಎ. ಪೊನ್ನಮ್ಮಯ್ಯ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾಕುಶಾಲಪ್ಪ ಮಾತನಾಡಿ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಗಟ್ಟಿಯಾಗಬೇಕು. ಅಮ್ಮಕೊಡವ ಹಾಗೂ ಕೊಡವ ಜನಾಂಗ ಒಗ್ಗಟ್ಟಾಗಿ ಸಾಗಬೇಕು ಎಂದರು.

ಪ್ರಾಸ್ತವಿಕವಾಗಿ ಕೊಂಡಿAಜಮ್ಮನ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಕಾರ್ಯದರ್ಶಿ ಕೆ.ಎಂ. ಬಾಲಕೃಷ್ಣ ಮಾತನಾಡಿ, ಅಮ್ಮಕೊಡವ ಸಮುದಾಯ ಬಾಂಧವರ ೧೯ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಬೇಗೂರು, ಬಲ್ಲಮಾವಟಿ, ಪೋಕಳತೋಡು ಹಾಗೂ ಚೇರಂಬಾಣೆಯಲ್ಲಿ ಕೊಂಡಿAಜಮ್ಮನ ಅಮ್ಮಕೊಡವ ಕುಟುಂಬಗಳು ವಾಸ ಮಾಡುತ್ತಿವೆ. ಕುಟುಂಬದಲ್ಲಿ ಕೇವಲ ೫೪ ಮಂದಿಯಷ್ಟೇ ಜನಸಂಖ್ಯೆ ಹೊಂದಿದ್ದರೂ ಕ್ರಿಕೆಟ್ ನಮ್ಮೆಯ ಆತಿಥ್ಯವನ್ನು ವಹಿಸಲು ಮುಂದೆ ಬಂದಿದ್ದೇವೆ. ಕ್ಷೇತ್ರದ ಶಾಸಕರು ಸೇರಿದಂತೆ ಸಮುದಾಯ ಬಾಂಧವರ ಸಹಕಾರ ದೊರೆತಿದೆ ಎಂದರು.

ಮತ್ತೋರ್ವ ಅತಿಥಿ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್ ಮಾತ ನಾಡಿ, ಕ್ರೀಡೆಯಿಂದ ಮಾತ್ರ ಜನಾಂಗ ಬಾಂಧವರ ಒಗ್ಗೂಡುವಿಕೆಗೆ ವೇದಿಕೆ ಕಲ್ಪಿಸಲು ಸಾಧ್ಯ. ಅಮ್ಮ ಕೊಡವ ಜನಾಂಗಕ್ಕೆ ತನ್ನದೆ ಆದ ವೈಶಿಷ್ಟö್ಯವಿದೆ ಎಂದರು.

(ಮೊದಲ ಪುಟದಿಂದ) ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ವಿ, ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ನಾಳ್ಯಮ್ಮಂಡ ಉಮೇಶ್ ಕೇಚಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅಮ್ಮಕೊಡವ ಸಮಾಜದ ಬೆಂಗಳೂರು ಅಧ್ಯಕ್ಷರಾದ ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್, ಮೈಸೂರಿನ ಅಮ್ಮಕೊಡವ ಸಮಾಜದ ಅಧ್ಯಕ್ಷರಾದ ಎನ್.ಯು. ಸಂತೋಷ್, ಮಾಯಮುಡಿ ಕಂಗಳತ್‌ನಾಡ್ ಅಮ್ಮಕೊಡವ ಸಮಾಜ ಅಧ್ಯಕ್ಷರಾದ ಬಾನಂಡ ಆಶಾ ಸೂದನ್, ಕೋತೂರು ಅನ್ನಪೂರ್ಣೇಶ್ವರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷರಾದ ಶ್ವೇತಾ ರವಿ ಮನ್ನಕ್ಕಮನೆ, ಕೋತೂರು ಶ್ರೀಕೃಷ್ಣ ಅಮ್ಮ ಕೊಡವ ಸಂಘದ ಅಧ್ಯಕ್ಷ ರವಿ ಮನ್ನಕ್ಕಮನೆ, ಪೊನ್ನಂಪೇಟೆ ಕಾವೇರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷೆ ರೇವತಿ ಪರಮೇಶ್ವರ, ಮಡಿಕೇರಿಯ ಅಮ್ಮಕೊಡವ ಸಮಾಜದ ಅಧ್ಯಕ್ಷ ನಾಳ್ಯಮಂಡ ಪಾಲಾಕ್ಷ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಡಿಯಮ್ಮಂಡ, ಬಾಚಮಂಡ, ಪಡಿಞರಮಂಡ, ಅಚ್ಚಿಯಂಡ, ಹೆಮ್ಮಚ್ಚಿಮ್ಮನೆ, ನಾಳಿಯಮಂಡ (ಚೇರಂಬಾಣೆ) ಬಾನಂಡ, ಅಮ್ಮತ್ತಿರ, ಮನ್ನಕ್ಕಮನೆ, ಬಲ್ಯಂಡ, ನಾಳ್ಯಮಂಡ, ಪುತ್ತಾಮನೆ, ಚೊಟ್ಟೋಳಿಯಮಂಡ, ಅಂಡಮಾಡ, ಗುಂಬಿರ, ನೆರೆಯಮ್ಮಂಡ, ಚಿಲ್ಲಜಮ್ಮಂಡ ಹಾಗೂ ಕೊಂಡಿAಜಮ್ಮನ ಕುಟುಂಬಗಳು ಭಾಗವಹಿಸಿದ್ದವು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು ನೀಡಿತು. ಕಾರ್ಯದರ್ಶಿ ಕೆ.ಎಂ. ಬಾಲಕೃಷ್ಣ ಸ್ವಾಗತಿಸಿ, ಕೊಂಡಿAಜಮ್ಮನ ಉಷಾ, ಕವಿತ, ಪಲ್ಲವಿ, ನಿರೂಪಿಸಿ, ಕೊಂಡಿAಜಮ್ಮನ ಕಿಶೋರ್ ಕುಮಾರ್ ವಂದಿಸಿದರು. ಬಾನಂಡ ಚಿರು, ಪುತ್ತಾಮನೆ ಪೂಜಾ ಶರಣ್ ವೀಕ್ಷಕ ವಿವರಣೆ ನೀಡಿದರು. -ಹೆಚ್.ಕೆ. ಜಗದೀಶ್