ಮಡಿಕೇರಿ, ಏ. ೨೭: ಮುದ್ದಂಡ ಹಾಕಿ ಉತ್ಸವ ಈ ಬಾರಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜರುಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದಿಲ್ಲ ಎಂಬ ಮಾತಿತ್ತು. ಆದರೆ, ಕೊಡವರಲ್ಲಿ ಹಾಕಿ ರಕ್ತಗತವಾಗಿ ಬಂದಿದೆ ಎಂಬುದನ್ನು ಸಾಕ್ಷೀಕರಿಸುವ ರೀತಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕ್ರೀಡಾಪ್ರೇಮಿಗಳು ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜಮಾಯಿಸಿದ್ದು, ವಿಶೇಷವಾಗಿತ್ತು. ಜಿಲ್ಲಾ ಕೇಂದ್ರದಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಜನಸಂಖ್ಯೆ ವಿರಳವಾಗಿರುತ್ತದೆ. ಆದರೆ ಹಾಕಿ ಆಟದ ರಸದೌತಣಕ್ಕೆ ಸುಮಾರು ೨೦ ಸಾವಿರಕ್ಕೂ ಅಧಿಕ ಕ್ರೀಡಾಪ್ರೇಮಿಗಳು ಜಿಲ್ಲೆಯ ಮೂಲೆಮೂಲೆಗಳಿಂದ ಆಗಮಿಸಿದ್ದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗ್ಯಾಲರಿ ಭರ್ತಿಯಾಗಿ ಹೆಚ್ಚುವರಿಯಾಗಿ ಕುರ್ಚಿಗಳ ವ್ಯವಸ್ಥೆ ಮಾಡಬೇಕಾಯಿತು. ಬಿಸಿಲನ್ನೂ ಲಕ್ಕಿಸದೆ ಹಾಕಿ ವೀಕ್ಷಣೆಗೆ ಜನರು ಕಾತರರಾಗಿದ್ದರು. ಆದರೆ ನಂತರದಲ್ಲಿ ಮಳೆಯಿಂದ ತುಸು ಅಡಚಣೆಯಾಯಿತು.