ಕೂಡಿಗೆ, ಏ. ೨೬: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ವಿವಿಧ ಪ್ರವಾಸೋದ್ಯಮ ತಾಣಗಳಲ್ಲಿ ಮೀನಿನ ಕ್ಯಾಂಟೀನ್ ಆರಂಭಿಸುವ ಯೋಜನೆಯ ಮುಂದುವರಿದ ಹಂತದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರ ಸೂಚನೆಯಂತೆ ಹಾರಂಗಿ ಅಣೆಕಟ್ಟೆಯ ಬಳಿ, ಕಾವೇರಿ ಮೀನುಗಾರರ ಸಹಕಾರ ಸಂಘದ ವತಿಯಿಂದ ಮೀನಿನ ಕ್ಯಾಂಟೀನ್ ಮತ್ತು ಮತ್ಸö್ಯ ವಾಹಿನಿ ಇ-ರಿಕ್ಷಾ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಯಿತು.
ಹಾರAಗಿ ಜಲಾಶಯದಲ್ಲಿ ಹಿಡುವಳಿಯಾದ ತಾಜಾ ಮೀನಿನ ಖಾದ್ಯಗಳನ್ನು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಕೈಗೆಟಕುವ ದರದಲ್ಲಿ ಶುಚಿ-ರುಚಿಯಾಗಿ ಒದಗಿಸುವ ನಿಟ್ಟಿನಲ್ಲಿ ಮೀನಿನ ಹೊಟೇಲ್ ಮತ್ತು ಮತ್ಸö್ಯವಾಹಿನಿ ಮೊಬೈಲ್ ಕ್ಯಾಂಟೀನ್ಅನ್ನು ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ಸದಸ್ಯರ ಮೂಲಕ ಪ್ರಾರಂಭಿಸ ಲಾಯಿತು. ಇದರ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೆರವೇರಿಸಿದರು.
ಈ ಸಂದರ್ಭ ಜಿಲ್ಲೆಯ ಮೀನುಗಾರಿಕೆ ಉಪ ನಿರ್ದೇಶಕ ಸಚಿನ್, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಮಿಲನ ಭರತ್, ಸಚಿನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸಂಘದ ಅಧ್ಯಕ್ಷ ಮಹಮ್ಮದ್, ಸಂಘದ ಸದಸ್ಯರು ಉಪಸ್ಥಿತರಿದ್ದರು.